ಪೆರಾಜೆ ಆಟೋ ರಿಕ್ಷಾ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಚಂದ್ರಶೇಖರ, ಕಾರ್ಯದರ್ಶಿಯಾಗಿ ಪುರುಷೋತ್ತಮ, ಕೋಶಾಧಿಕಾರಿಯಾಗಿ ಅಶ್ರಫ್

ಪೆರಾಜೆ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) ಬಿಎಂಎಸ್ ಸಂಯೋಜಿತ ಸುಳ್ಯ ದಕ್ಷಿಣ ಕನ್ನಡ ಪೆರಾಜೆ ಘಟಕದ ವಾರ್ಷಿಕ ಮಹಾಸಭೆಯು ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.

. . . . . . . . .

ಘಟಕದ ಅಧ್ಯಕ್ಷ ಚಂದ್ರಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಮಾರಿಯರಾದ ಅನನ್ಯ ಕೆ.ಪಿ., ಭಾಮಿನಿ ಕೆ.ಪಿ. ಹಾಗೂ ಕುಶಲ್ಯ ಪಿ.ಡಿ. ಅವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು.

. . . . . . .

ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಎಂ.ಎಸ್., ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪಿ. ಪೈಚಾರ್ ಹಾಗೂ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಅವರು ಗೌರವ ಉಪಸ್ಥಿತರಿದ್ದರು.

ಸಭೆಯಲ್ಲಿ 2026-27ನೇ ಸಾಲಿನ ಪೆರಾಜೆ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಪಿ.ಕೆ. ಕೋಡ್ಯಗುಂಡಿ, ಕಾರ್ಯದರ್ಶಿಯಾಗಿ ಪುರುಷೋತ್ತಮ ಕಂಜಿಪಿಲಿ, ಕೋಶಾಧಿಕಾರಿಯಾಗಿ ಅಶ್ರಫ್ ಪಿ.ಎಂ., ಉಪಾಧ್ಯಕ್ಷರಾಗಿ ಅಬೂಬಕ್ಕರ್ ಪಿ.ಎಂ. ಹಾಗೂ ನಿರ್ದೇಶಕರಾಗಿ ವೇಣುಗೋಪಾಲ ದೇವಮೂಲೆ, ಹರ್ಷಿತ್ ಮಜಿಕ್ಕೋಡಿ ಮತ್ತು ರಾಮ್ ಪ್ರಸಾದ್ ಮೂಲೆಮಜಲು ಆಯ್ಕೆಯಾದರು.

ಅಬೂಬಕ್ಕರ್ ಪಿ.ಎಂ. ಸ್ವಾಗತಿಸಿದರು. ಹರ್ಷಿತ್ ಮಜಿಕ್ಕೋಡಿ ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading