ಕಡುಬಡತನ ಹಾಗೂ ತಾಯಿಯ ಅನಾರೋಗ್ಯದ ನಡುವೆಯೂ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಡಬ ತಾಲೂಕಿನ ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರಿ ಆಶಿತಾಳಿಗೆ, ಗ್ರಾಮದ ಸಹೃದಯಿ ದಾನಿಗಳಿಂದ ಸಂಗ್ರಹಿಸಲ್ಪಟ್ಟ ರೂ.18000 ಮೊತ್ತದ ಹಣವನ್ನು ಸಹಾಯದ ರೂಪದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಬಳ್ಪ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್ ಮೂಡ್ನೂರು, ಬಳ್ಪ ಗ್ರಾ.ಪಂ. ಮಾಜಿ ಸದಸ್ಯ ವಿನೋದ್ ಬೊಳ್ಮಲೆ, ಸತೀಶ್ ಪೂಜಾರಿ ಕೊರಪ್ಪಣೆ, ಹರ್ಷಿತ್ ಪಂಡಿ, ಅಶೋಕ್ ಕಲ್ಲೇರಿ, ಹೊನ್ನಪ್ಪ ಎಂರ್ಬಿಲ, ಪುನೀತ್ ಎಣ್ಣೆಮಜಲು, ಸುದರ್ಶನ ಕಲ್ಲೇರಿ, ಸುಜೀತ್ ಪಂಡಿ ಮತ್ತಿತರರು ಉಪಸ್ಥಿತರಿದ್ದರು. ಈಕೆ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದ ವಿದ್ಯಾರ್ಥಿನಿಯಾಗಿದ್ದು, ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 600 ಅಂಕಗಳನ್ನು ಗಳಿಸಿದ್ದಳು.
- Sunday
- November 24th, 2024