ಕಾಂತಮಂಗಲ ಶಾಲೆಯಲ್ಲಿ ಪೋಕ್ಸೋ ಮತ್ತು ಬಾಲಕಾರ್ಮಿಕ ವಿಷಯದ ಕುರಿತು ಕಾನೂನು ಅರಿವು ಕಾರ್ಯಕ್ರಮ

ಕಾಂತಮಂಗಲ : ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಕ್ಸೋ ಮತ್ತು ಬಾಲಕಾರ್ಮಿಕ ವಿಷಯದ ಕುರಿತು ಕಾನೂನು ಅರಿವು ಕಾರ್ಯಕ್ರಮ ಆ.31 ರಂದು ನಡೆಯಿತು.

. . . . . . . . .

ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಟಿ. ದಮಯಂತಿ ಸೋಮಯ್ಯಾ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ವಿದ್ಯಾರ್ಥಿಗಳನ್ನು ಸ್ನೇಹಪೂರ್ವಕವಾಗಿದ್ದೇಶಿಸಿ, ಪೋಕ್ಸೋ ಕಾಯ್ದೆಯ ಉದ್ದೇಶ, ಮಕ್ಕಳ ಮೇಲೆ ನಡೆಯಬಹುದಾದ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ, ಒಳ್ಳೆಯ ಸ್ಪರ್ಶ–ಕೆಟ್ಟ ಸ್ಪರ್ಶದ ಅರಿವು, ಅನಾನುಕೂಲಕರ ಅಥವಾ ಅನುಮಾನಾಸ್ಪದ ವರ್ತನೆ ಕಂಡುಬಂದಾಗ ತಕ್ಷಣ ವಿಶ್ವಾಸಾರ್ಹ ಹಿರಿಯರಿಗೆ ತಿಳಿಸುವುದು ಹಾಗೂ ಮಕ್ಕಳ ಸುರಕ್ಷತೆಯ ಮಹತ್ವದ ಕುರಿತು ಸರಳವಾಗಿ ವಿವರಿಸಿದರು. ಯಾವುದೇ ರೀತಿಯ ಕಿರುಕುಳವನ್ನು ಸಹಿಸದೆ ಧೈರ್ಯವಾಗಿ ಮಾತನಾಡುವಂತೆ ಮಕ್ಕಳಿಗೆ ಸಲಹೆ ನೀಡಿದರು.

. . . . . . .

ಹಾಗೂ ಪರಿಸರ ಸಂರಕ್ಷಣೆ ಅಂಗವಾಗಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಮಕ್ಕಳಿಗೆ ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ತಿಳಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾದ ಜಗದೀಶ್ ಡಿ.ಪಿ. ಅವರು ಬಾಲಕಾರ್ಮಿಕ ಪದ್ಧತಿ ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಮಕ್ಕಳಿಗೆ ಹೆಚ್ಚಿನ ಮಾಹಿತಿಯನ್ನು ನೀಡಿ, ಮಕ್ಕಳ ಹಕ್ಕುಗಳು ಮತ್ತು ಅವರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು

ಮುಖ್ಯ ಅತಿಥಿಗಳಾದ ಸುಕುಮಾರ್ ಕೊಡ್ತುಗುಳಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತಾಡಿದರು. ವೇದಿಕೆಯಲ್ಲಿ ಶ್ರೀಮತಿ ಮೀರಾ ಟಿ, ದೀಲಿಪ್ ಬಾಬ್ಲುಬೆಟ್ಟು, ಗಂಗಾಧರ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ಯಾನೆಲ್ ವಕೀಲರದ ಚಂದ್ರಶೇಖರ ಯು, ಹರೀಶ್ ಬಿ., ಎಂ.ಎಂ. ಬೊಳ್ಳಪ್ಪ, ಪಿ. ಭಾಸ್ಕರ ರಾವ್, ಸಂದೀಪ್ ಹಾಗೂ ಭಾನುಪ್ರಕಾಶ್ ಪೆರುಮುಂಡ ಮತ್ತು ನ್ಯಾಯಾಲಯದ ಸಿಬ್ಬಂದಿಗಳದ ಲಾವಣ್ಯ, ಐಶ್ವರ್ಯ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ಪ್ರಾರ್ಥಿಸಿದರು, ಶಿಕ್ಷಕರಾದ ಯಾಮಿನಿ ಸ್ವಾಗತಿಸಿ,ಸ್ವರ್ಣಲತಾ ,ಮುಖ್ಯ ಶಿಕ್ಷಕರು ವಂದಿಸಿ, ಆಶಾ ಕೆ. ಟಿ , ಶಿಕ್ಷಕರು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading