ವಿದ್ಯಾಮಾತಾ ಅಕಾಡೆಮಿಯಲ್ಲಿ ಕೃಷ್ಣ ಲೀಲೆ: 83ಕ್ಕೂ ಅಧಿಕ ಮುದ್ದು ಕೃಷ್ಣರ ಸಂಭ್ರಮ

ಪುತ್ತೂರು:“ಆರು ವರ್ಷದೊಳಗಿನ ಮಕ್ಕಳು ಸಾಕ್ಷಾತ್ ಭಗವಂತನ ಸ್ವರೂಪ ಎಂದು ನಾವು ಭಾವಿಸುತ್ತೇವೆ. 83 ಮುದ್ದು ಕೃಷ್ಣರ ಆಗಮನದಿಂದ ವಿದ್ಯಾಮಾತಾ ಅಕಾಡೆಮಿಯ ಎಲ್ಲಾ ಯೋಜನೆ–ಯೋಚನೆಗಳಿಗೆ ಕೃಷ್ಣ ಪರಮಾತ್ಮನ ಅನುಗ್ರಹ ದೊರೆತಂತಾಗಿದೆ. ಪ್ರತಿಯೊಬ್ಬ ಮುದ್ದು ಕೃಷ್ಣ ಹಾಗೂ ಯಶೋಧ–ಕೃಷ್ಣರಿಗೂ ಬಹುಮಾನ ನೀಡುವುದು ವಿದ್ಯಾಮಾತಾ ಅಕಾಡೆಮಿಯ ಹೆಗ್ಗಳಿಕೆ,” ಎಂದು ಭಾಗ್ಯೇಶ್ ರೈ ಹೇಳಿದರು.
ವಿದ್ಯಾಮಾತಾ ಅಕಾಡೆಮಿ ಹಾಗೂ ನಂದಗೋಕುಲ ಚಿಣ್ಣರ ಅಂಗಳದ ಸಹಭಾಗಿತ್ವದಲ್ಲಿ 3ನೇ ವರ್ಷದ ಕೃಷ್ಣ ವೇಷ ಹಾಗೂ ಯಶೋಧ–ಕೃಷ್ಣ ಸ್ಪರ್ಧೆ ‘ಕೃಷ್ಣ ಲೀಲೆ’ ಅದ್ದೂರಿಯಾಗಿ ನಡೆಯಿತು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮವನ್ನು ಪುತ್ತೂರು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸ್ವಾತಿ ದೀಪ ಬೆಳಗಿಸಿ ಉದ್ಘಾಟಿಸಿದರು.

. . . . . . . . .

ಈ ಸಂದರ್ಭ ಮಾತನಾಡಿದ ಅವರು, ಆಧುನಿಕತೆಯ ಯುಗದಲ್ಲಿ ಮಕ್ಕಳಲ್ಲಿ ಶ್ರೀಕೃಷ್ಣನ ಆದರ್ಶ ಹಾಗೂ ಜೀವನ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆಗೆ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ವಿದ್ಯಾಮಾತಾ ಅಕಾಡೆಮಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸ್ಪರ್ಧೆಯಲ್ಲಿ 83ಕ್ಕೂ ಅಧಿಕ ಮುದ್ದು ಕೃಷ್ಣರು ಹಾಗೂ ಯಶೋಧ–ಕೃಷ್ಣರು ಭಾಗವಹಿಸಿ ಸಂಭ್ರಮ ಹೆಚ್ಚಿಸಿದರು. ಈ ಬಾರಿ 1ರಿಂದ 3 ವರ್ಷ, 3ರಿಂದ 6 ವರ್ಷ ಹಾಗೂ ಯಶೋಧ–ಕೃಷ್ಣ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.
1ರಿಂದ 3 ವರ್ಷದ ವಿಭಾಗದಲ್ಲಿ ಮುರುಳ್ಯದ ಕಳತಾಜೆಯ ದಿತ್ಯಾ ಕೆ. ಶೆಟ್ಟಿ ಪ್ರಥಮ, ಪುತ್ತೂರು ಎಪಿಎಂಸಿ ರಸ್ತೆಯ ಶ್ರೀವಿ ಬಿ. ದ್ವಿತೀಯ ಹಾಗೂ ಕಾರ್ಕಳ ಈದು ಗ್ರಾಮದ ಕೃತರ್ವ್ ಸತ್ಯಾ ಜೈನ್ ತೃತೀಯ ಬಹುಮಾನ ಪಡೆದರು.
3ರಿಂದ 6 ವರ್ಷದ ವಿಭಾಗದಲ್ಲಿ ವಿಟ್ಲ ಮೂಡ್ನೂರಿನ ಮಾನ್ಯ ಶ್ರೀಯಾ ಪ್ರಥಮ, ನಿಡ್ಪಳ್ಳಿಯ ಚವಿಷ್ಕಾ ದುರ್ಗಾ ದ್ವಿತೀಯ ಹಾಗೂ ಮಾಡಾವಿನ ಚಾರಿತ್ರ್ಯ ಸಿ. ರೈ ತೃತೀಯ ಸ್ಥಾನ ಪಡೆದರು.
ಯಶೋಧ–ಕೃಷ್ಣ ವಿಭಾಗದಲ್ಲಿ ಪುತ್ತೂರು ಕಸಬಾದ ಭವ್ಯ ಕೆ. ಹಾಗೂ ಅನಿತಾ ಕೆ. ಆಚಾರ್ಯ ಪ್ರಥಮ, ಬಂಟ್ವಾಳ ಕುಲದ ಲಿಖಿತ ಎಂ. ಹಾಗೂ ಚಿರಣ್ವಿ ಎಂ. ದ್ವಿತೀಯ, ಪುತ್ತೂರು ಚಿಕ್ಕಮೂಡ್ನೂರಿನ ವಿಮಲತೇಜಾಕ್ಷಿ ಹಾಗೂ ಋತ್ವಿಕಾ ಪಿ. ತೃತೀಯ ಬಹುಮಾನ ಗಳಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಚೇತನಾ ಸತೀಶ್, ಗಾಯತ್ರಿ ಹಾಗೂ ದೀಕ್ಷಿತಾ ಸಹಕರಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮುದ್ದು ಕೃಷ್ಣರು ಹಾಗೂ ಯಶೋಧ–ಕೃಷ್ಣರಿಗೆ ಗೌರವ ಪದಕ ಮತ್ತು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ವಹಿಸಿದ್ದರು. ನಂದಗೋಕುಲ ಚಿಣ್ಣರ ಅಂಗಳದ ಮುಖ್ಯಸ್ಥೆ ಪವಿತ್ರ ವಸಂತ್, ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಹಾಗೂ ದೇವಿದ್ಯಾ ರೈ ಉಪಸ್ಥಿತರಿದ್ದರು.

. . . . . . .

ಈ ಸಂದರ್ಭದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳು ಓಣಂ ಪೂಕಳಂ ರಚಿಸಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಅಕಾಡೆಮಿಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಹಕರಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading