ಸುಳ್ಯದ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಉಪತಹಶೀಲ್ದಾರ್ ಆಗಿ ಬಡ್ತಿ

ಸುಳ್ಯ ತಾಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವಿನ್ ರಂಗತ್ತಮಲೆ ಅವರು ಉಪತಹಶೀಲ್ದಾರ್ ಆಗಿ ಬಡ್ತಿ ಹೊಂದಿದ್ದು, ಸುಳ್ಯದಲ್ಲಿಯೇ ತಮ್ಮ ಸೇವೆಯನ್ನು ಮುಂದುವರಿಸಲಿದ್ದಾರೆ.

. . . . . . . . .

ಅವರು ಬೆಳ್ತಂಗಡಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸರ್ಕಾರಿ ಸೇವೆಯನ್ನು ಆರಂಭಿಸಿದ್ದರು. ಗ್ರಾಮ ಆಡಳಿತಾಧಿಕಾರಿಯಾಗಿ ಮರ್ಕಂಜ ಗ್ರಾಮಕ್ಕೆ ನೇಮಕಗೊಂಡ ಬಳಿಕ ಅಜ್ಜಾವರ, ಮಂಡೆಕೋಲು, ಉಬರಡ್ಕಮಿತ್ತೂರು ಹಾಗೂ ಜಾಲ್ಸೂರು ಗ್ರಾಮಗಳಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

. . . . . . .

2014ರಲ್ಲಿ ಕಂದಾಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿದ ಅವರು, ಸುಳ್ಯದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಇದೀಗ ಉಪತಹಶೀಲ್ದಾರ್ ಹುದ್ದೆಗೆ ಬಡ್ತಿ ಪಡೆದು ಸುಳ್ಯದಲ್ಲೇ ತಮ್ಮ ಆಡಳಿತಾತ್ಮಕ ಸೇವೆಯನ್ನು ಮುಂದುವರಿಸಲಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading