ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ನೇಮಕ ಪ್ರಶ್ನೆಸಿ ಸಲ್ಲಿಸಿದ ಅರ್ಜಿ ವಜಾ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ನೇಮಕ ಹಾಗೂ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ಆಕಾಶ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇವತ್ತು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲ ವಿವೇಕ್ ರೆಡ್ಡಿರವರು ವಾದ ಮಂಡನೆ ಮಾಡುತ್ತಾ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಕಾನೂನಿನ ನಿಯಮವನ್ನು ಉಲ್ಲಂಘಿಸಿ ಆಡಳಿತ ಮಂಡಳಿಯ ನೇಮಕವಾಗಿದೆ ಮತ್ತು ಈ ನೇಮಕ ಸಚಿವರೊಬ್ಬರ ತೀರ್ಮಾನದಂತೆ ಆಗಿದೆ ಮತ್ತು ಇನ್ನಿತರ ವಿಚಾರಗಳನ್ನು ಮುಂದಿಟ್ಟು ಪ್ರಶ್ನಿಸಿದ್ದರು.ಆದರೆ ಆಡಳಿತ ಮಂಡಳಿ ಅಧ್ಯಕ್ಷರ ಪರ ವಾದ ಮಂಡನೆ ಮಾಡಿದ ಹಿರಿಯ ವಕೀಲ ರವಿಶಂಕರ್ ರವರು ಅರ್ಜಿದಾರರ ಪರ ವಾದಕ್ಕೆ ಪ್ರತಿಯಾಗಿ ಎಲ್ಲಾ ನೇಮಕವೂ ಕಾನೂನಿನ ನಿಯಮಗಳ ಅಡಿಯಲ್ಲಿ ಆಗಿದೆ ಅಷ್ಟಕ್ಕೂ ಅರ್ಜಿದಾರರಿಗೆ ಈ ಅರ್ಜಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ದಾಖಲಿಸುವರೇ ಕಾನೂನು ಬದ್ಧ ಹಕ್ಕು ಇರುವುದಿಲ್ಲ ಯಾಕೆಂದರೆ ಅರ್ಜಿದಾರರು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಲು ಅರ್ಜಿಯೇ ಹಾಕಿರುವುದಿಲ್ಲ ಎಂದು ವಾದಿಸಿದರು.

. . . . . . . . .

ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಮೂರ್ತಿ ಸೂರಜ್ ಗೋವಿಂದರಾಜುರವರು ಇದ್ದಪೀಠ ಅರ್ಜಿದಾರರು ಸಮಿತಿಯ ಸದಸ್ಯ ತನಕ್ಕೆ ಅರ್ಜಿ ಸಲ್ಲಿಸದೆ ಇರುವುದರಿಂದ ಅಧ್ಯಕ್ಷರ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಲು ಯಾವುದೇ ಕಾನೂನು ಬದ್ಧ ಹಕ್ಕಿರುವುದಿಲ್ಲ ಒಂದು ವೇಳೆ ಪ್ರಶ್ನಿಸಿಸುವುದಾದರೆ ಸಾರ್ವಜನಿಕ ಹಿತ ಸಕ್ತಿ ಅರ್ಜಿ ದಾಖಲಿಸಿ ಆ ಮೂಲಕ ಪ್ರಕ್ರಿಯೆಯ ಆಯ್ಕೆಯನ್ನು ಪ್ರಶ್ನಿಸಬಹುದೇ ಹೊರತು ಈ ರೀತಿಯಲ್ಲಿ ಅಲ್ಲ ಎಂದು ಅಭಿಪ್ರಾಯಿಸಿ ಅರ್ಜಿದಾರರ ಅರ್ಜಿಯನ್ನು ಸಾರ್ವಜನಿಕ ಹಿತಸಕ್ತಿಯಂತೆ ಮಾರ್ಪಾಡು ಮಾಡಿಕೊಳ್ಳುವರೇ ಅನುಮತಿ ನೀಡಿ ಅರ್ಜಿಯ ವಿಚಾರಣೆಯನ್ನು ಮುಕ್ತಾಯ ಗೊಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಅಧ್ಯಕ್ಷ ಹಾಗೂ ಸದಸ್ಯರ ಪರ ಹಿರಿಯ ಹೈ ಕೋರ್ಟ್ ವಕೀಲರಾದ ಶ್ರೀ ರವಿಶಂಕರ್ ಹಾಗೂ ಕರುಣಾಕರ ವರು ವಾದಿಸಿರುತ್ತಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading