ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಗೆ ಹಲವು ಪ್ರಶಸ್ತಿಗಳು

ಸುಬ್ರಹ್ಮಣ್ಯ ಜುಲೈ 01 : ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಮತ್ತು ಪ್ರಾಂತ್ಯ 8ಕ್ಕೆ ಈ ಬಾರಿ ಬೆಸ್ಟ್ ಇಮೇಜ್ ಬಿಲ್ಡಿಂಗ್ ಪ್ರಾಜೆಕ್ಟ್ ನಲ್ಲಿ ಕುಮಾರಧಾರ ಸೇತುವೆಯ ಎರಡು ಬದಿಗಳಲ್ಲಿ ಸಾರ್ವಜನಿಕರು ನದಿಗೆ ಕಸ ಎಸೆಯ ದಂತೆ ಮಾಡಿದ ತಡೆ ಬೇಲಿ ನಿರ್ಮಾಣ ಸರ್ವಿಸ್ ಪ್ರಾಜೆಕ್ಟ್ ಗೆ ಲಯನ್ಸ್ ಡಿಸ್ಟ್ರಿಕ್ಟ್ 317ಡಿ ಯ ದಕ್ಷಿಣ ಕನ್ನಡ, ಕೊಡಗು,ಹಾಸನ, ಚಿಕ್ಕಮಗಳೂರು ಕಂದಾಯ ಜಿಲ್ಲೆಗಳನ್ನೊಳಗೊಂಡ 119 ಕ್ಲಬ್ ಗಳಲ್ಲಿ 15 ಪ್ರಾಂತ್ಯ ಗಳಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಬಂದಿರುತ್ತದೆ. ಪ್ರಾಂತೀಯ ಅಧ್ಯಕ್ಷ ಲಯನ್. ಪ್ರೊ.ರಂಗಯ್ಯ ಶೆಟ್ಟಿಗಾರ್ ಈ ಪ್ರಶಸ್ತಿಯನ್ನು ಡಿಸ್ಟ್ರಿಕ್ಟ್ ಗವರ್ನರ್ ಕುಡುಪಿ ಅರವಿಂದ ಶೆನೈ ಅವರಿಂದ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಹಾಗೆಯೇ ಎಲ್ಲಾ 119 ಲಯನ್ಸ್ ಕ್ಲಬ್ ಗಳ 15 ಪ್ರಾಂತ್ಯಗಳಲ್ಲಿ ಅತ್ಯುತ್ತಮ ಪ್ರಾಂತ್ಯ ಅಧ್ಯಕ್ಷ ಪ್ರಥಮ ಸ್ಥಾನವೂ ಬಂದಿರುತ್ತದೆ.

. . . . . . . . .

ಲಯನ್ಸ್ ಜಿಲ್ಲೆ 317 ಡಿ ಇದರ ಅತ್ಯುತ್ತಮ ಅಧ್ಯಕ್ಷೇ ದ್ವಿತೀಯ ಪ್ರಶಸ್ತಿಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೇ ಲಯನ್. ವಿಮಲಾ ರಂಗಯ್ಯ ಸ್ವೀಕರಿಸಿದರು. ಹಾಗೆ ಕುಕ್ಕೆ ಸುಬ್ರಹ್ಮಣ್ಯ ಕ್ಲಬ್ ಕೂಡ ಲಯನ್ಸ್ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನವನ್ನು, ಲಯನ್. ಸ್ವಾತಿ ದಿನೇಶ್ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ ದ್ವಿತೀಯ ಸ್ಥಾನ, ಲಯನ್.ಭಾರತಿ ದಿನೇಶ್ ಅವರಿಗೆ ಅತ್ಯುತ್ತಮ ಖಜಾಂಜಿ ದ್ವಿತೀಯ ಸ್ಥಾನ ಬಂದಿರುತ್ತದೆ. ಅದರೊಂದಿಗೆ ಅತ್ಯುತ್ತಮ ಪ್ರಾಂತೀಯ ಸಮ್ಮೇಳನ ಪ್ರಶಸ್ತಿ, ಎಂ.ಜೆ.ಎಫ್ ನಲ್ಲಿ ಡೈಮಂಡ್ ಕ್ಲಬ್ ಪ್ರಶಸ್ತಿ, ಹಾಗೂ ಅಂತರಾಷ್ಟ್ರೀಯ ಅಧ್ಯಕ್ಷರ ಪದಕ ಕೂಡ ಪ್ರಾಂತೀಯ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಪಡೆದಿರುತ್ತಾರೆ. 

. . . . . . .

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷ ರಾಜೇಶ್ ಎನ್.ಎಸ್, ನಿರ್ದೇಶಕರುಗಳಾದ ಡಾl ಶಿವಕುಮಾರ್ ಹೊಸಳ್ಳಿಕೆ, ದಿನೇಶ್ ಮೊಗ್ರ ಹಾಗೂ ಗುರುಪ್ರಸಾದ್ ಪಂಜ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading