ಸೇವೆಯೇ ಶ್ರೇಷ್ಠ ಧ್ಯೇಯ, ಸಮಾಜಸೇವೆಗೆ ರೋಟರಿ ಅತ್ಯುತ್ತಮ ವೇದಿಕೆ – ದತ್ತಾತ್ರೇಯ ರಾವ್

ಸುಳ್ಯ: ಸೇವೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ರೋಟರಿ ಸಂಸ್ಥೆ ಸದಾ ಬದ್ಧವಾಗಿದ್ದು, “ಸ್ವಯಂ ಸೇವೆಯೇ ಶ್ರೇಷ್ಠ ಸೇವೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ದತ್ತಾತ್ರೇಯ ರಾವ್ ಹೇಳಿದರು.

. . . . . . . . .

ಅವರು ಜುಲೈ 1ರಂದು ಸುಳ್ಯದ ರೋಟರಿ ಸಮುದಾಯ ಭವನದಲ್ಲಿ ನಡೆದ ರೋಟರಿ ಕ್ಲಬ್ ಸುಳ್ಯದ 2026–27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

. . . . . . .

“ಸಮಾಜದಿಂದ ಪಡೆದ ಒಂದಂಶವನ್ನು ಸಮಾಜಕ್ಕೆ ಮರಳಿ ನೀಡುವುದು ರೋಟರಿಯ ಧ್ಯೇಯವಾಗಿದೆ. ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗುವುದರಿಂದ ಆತ್ಮತೃಪ್ತಿ ದೊರೆಯುತ್ತದೆ. ಸಮಾಜ ಸೇವೆ ಸಲ್ಲಿಸಲು ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದೆ” ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಉದ್ಘಾಟಿಸಿದರು. ಕ್ಲಬ್‌ನ ಮಾಜಿ ಕಾರ್ಯದರ್ಶಿ ಭಾಸ್ಕರ ಎಂ.ಆರ್. ವಾರ್ಷಿಕ ವರದಿ ವಾಚಿಸಿದರು. ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ 2026–27ನೇ ಸಾಲಿನ ಅಧ್ಯಕ್ಷೆಯಾಗಿ ಲತಾ ಮಧುಸೂಧನ್ ಅಧಿಕಾರ ಸ್ವೀಕರಿಸಿದರು. ಜತೆಗೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಿಗೆ ಧನಸಹಾಯ ವಿತರಿಸಲಾಯಿತು. ಅಕಾಡೆಮಿಕ್ ಟಾಪರ್ಸ್, ಪೆರುವಾಜೆಯ ನಾಟಿ ವೈದ್ಯೆ ಯಶೋಧಾ ಹಾಗೂ ಲೈನ್‌ಮ್ಯಾನ್ ಸಂತೋಷ್ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಕಾರ್ಯದರ್ಶಿ ಹರಿರಾಯ ಕಾಮತ್, ಸಹಾಯಕ ಗವರ್ನರ್ ಆನಂದ ಖಂಡಿಗ, ಝೋನಲ್ ಲೆಫ್ಟಿನೆಂಟ್ ಗಿರೀಶ್ ನಾರ್ಕೋಡು ಹಾಗೂ ಸರ್ಜೆಂಟ್ ಎಟ್ ಆರ್ಮ್ಸ್ ಮಧುಸೂದನ್ ಕೆ. ಉಪಸ್ಥಿತರಿದ್ದರು.

ನಿರ್ಗಮಿತ ಅಧ್ಯಕ್ಷ ಡಾ| ರಾಮ್‌ಮೋಹನ್ ಸ್ವಾಗತಿಸಿ, ಹರಿರಾಯ ಕಾಮತ್ ವಂದಿಸಿ, ದಳ ಸುಬ್ರಾಯ ಭಟ್ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading