Ad Widget

ಸುಬ್ರಹ್ಮಣ್ಯ : ಫೆ.25 ರಂದು ರೋಟರಿ ಜಿಲ್ಲಾ ರಾಜ್ಯಪಾಲರಿಂದ ಸೇವಾ ಕಾರ್ಯಗಳ ಲೋಕಾರ್ಪಣೆ

ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯಕ್ಕೆ ಫೆ.25ರಂದು ರೋಟರಿ ಜಿಲ್ಲೆ 3181ನ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ ಅಧಿಕೃತವಾಗಿ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಸುಬ್ರಹ್ಮಣ್ಯ ರೋಟರಿಯಿಂದ ಕೊಡಮಾಡುವ ಹಲವಾರು ಸಮಾಜಮುಖಿ ಸಮುದಾಯ ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್.ಆರ್ ತಿಳಿಸಿದ್ದಾರೆ.

. . . . . . . . .

ಸಮುದಾಯ ಸೇವೆ : ಆರಂಭದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ರಾಮಕೃಷ್ಣ ಪಿ.ಕೆ ಅವರು ಉಲ್ಲಾಸ್ ಕಾಮತ್ ಸಹಕಾರದಲ್ಲಿ ಕುಂತೂರಿನ ಶಿಶುಮಂದಿರಕ್ಕೆ ರೂ.25,000 ಮೊತ್ತದ ಉಯ್ಯಾಲೆ ಮತ್ತು ಆಟಿಕೆಗಳನ್ನು, ನೂಜಿಬಾಳ್ತಿಲದ ಬೆಥನಿ ಪದವಿ ಪೂರ್ವ ಕಾಲೇಜಿಗೆ ರೂ.75,000 ಮೊತ್ತದ ಕುಡಿಯುವ ನೀರು ಶುದ್ಧೀಕರಣ ಯಂತ್ರ, ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮೆಷೀನ್ ಮತ್ತು 50 ಕುರ್ಚಿಗಳನ್ನು ಹಸ್ತಾಂತರಿಸಲಿದ್ದಾರೆ. ನಂತರ ಸುಬ್ರಹ್ಮಣ್ಯದ ಕಾಶಿಕಟ್ಟೆ ಅಂಗನವಾಡಿ ಕೇಂದ್ರಕ್ಕೆ ಉಲ್ಲಾಸ್ ಕಾಮತ್ ಕೊಡಮಾಡಿದ ರೂ.50,000 ಮೊತ್ತದ ಮೇಲ್ಚಾವಣಿಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಯೇನೆಕಲ್ಲಿನ ರೈತ ಯುವಕ ಮಂಡಲಕ್ಕೆ ರೂ 15,000 ಮೊತ್ತದಲ್ಲಿ ಉಲ್ಲಾಸ್ ಕಾಮತ್ ನೀಡಿದ 50 ಕುರ್ಚಿಗಳನ್ನು ಹಾಗೂ ಸುಬ್ರಹ್ಮಣ್ಯ ರೋಟರಿ ಸದಸ್ಯರ ಸಹಕಾರದಿಂದ 19,000 ಮೊತ್ತದಲ್ಲಿ ನೀಡಿದ ಬ್ಲೂಟೂತ್ ಸ್ಪೀಕರ್ ಹಸ್ತಾಂತರಿಸಲಿದ್ದಾರೆ ಎಂದು ಹೇಳಿದರು.

. . . . . . .

ಪ್ರತಿಭಾ ಪುರಸ್ಕಾರ : ಸಂಜೆ ಯೇನೆಕಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲರು ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ದತ್ತಿನಿಧಿ ಪ್ರಧಾನ ಮಾಡಲಿದ್ದಾರೆ. ಅಲ್ಲದೆ ಈ ಸಂದರ್ಭ ಸಾಧಕರನ್ನು ಗೌರವಿಸಲಿದ್ದಾರೆ. ಸಮಾರಂಭದಲ್ಲಿ ರೋಟರಿ ಸಹಾಯಕ ರಾಜ್ಯಪಾಲ ಪ್ರೊ.ಬಾಲಕೃಷ್ಣ ಪೈ, ವಲಯ ಸೇನಾನಿ ವಿಜಯಕುಮಾರ್ ಅಮೈ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸೀತಾರಾಮ ರೈ ಸವಣೂರು ಮುಖ್ಯಅತಿಥಿಗಳಾಗಿದ್ದಾರೆ ಎಂದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading