Ad Widget

ಕುಕ್ಕೆ ಸುಬ್ರಹ್ಮಣ್ಯ : ತಾಲೂಕು ಭಜನೋತ್ಸವ ಉದ್ಘಾಟನೆ ; “ಭಜನೆಯು ದೇವರನ್ನು ಒಲಿಸಲು ಇರುವ ಸುಲಭ ಮಾರ್ಗ” : ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ

ಸುಬ್ರಹ್ಮಣ್ಯ: “ಭಜನೆಯು ದೇವರನ್ನು ಒಲಿಸಲು ಇರುವ ಸುಲಭ ಮಾರ್ಗ. ಭಜನೆಯ ಮೂಲಕ ಭಕ್ತಿಯನ್ನು ದೇವರಿಗೆ ನೀಡಲು ಸಾಧ್ಯ. ಭಗವಂತನ ಸ್ತುತಿಯು ಬದುಕಿಗೆ ನೆಮ್ಮದಿ ನೀಡುತ್ತದೆ. ಧರ್ಮದಲ್ಲಿ ನಡೆಯುವ ಪರಿಯನ್ನು ಭಜನಾ ಸಾಹಿತ್ಯ ನೀಡುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಮೊಳಗಲು ಭಜನೆ ಅಡಿಗಲಾಗುತ್ತದೆ” ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ತಾಲೂಕು ಭಜನೋತ್ಸವ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ಸ್ಥಳೀಯ ಭಜಕರ ಸಹಯೋಗದಲ್ಲಿ ಆದಿತ್ಯವಾರ ಕುಕ್ಕೆ ದೇವಳದ ರಥಬೀದಿ ಸಭಾಂಗಣದಲ್ಲಿ ನಡೆದ ತಾಲೂಕು ಭಜನೋತ್ಸವ 2026ನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. “ಭಗವನ್ನಾಮ ಸ್ಮರಣೆಯು ಸರ್ವರನ್ನೂ ಒಗ್ಗಟ್ಟಾಗಿಸುತ್ತದೆ. ಹಿಂದೂ ಸಮಾಜ ಗಟ್ಟಿಯಾಗಲು ಸಹಕಾರಿಯಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಪೋಷಕರು ತಮ್ಮ ಮಕ್ಕಳಲ್ಲಿ ಭಜನೆಯ ಅರಿವನ್ನು ಬಿತ್ತುವಲ್ಲಿ ಶ್ರಮಿಸುವುದು ಅತ್ಯಗತ್ಯ” ಎಂದರು.

ತಾಲೂಕು ಭಜನೋತ್ಸವ ಸಮಿತಿ ಅಧ್ಯಕ್ಷ ಡಾ. ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು.
ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರು, ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ, ಕಲಾವಿದ ಕೆ.ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ, ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್‌ನ ಸಂಚಾಲಕ ಚಂದ್ರಶೇಖರ ನಾಯರ್, ಐನೆಕಿದು ಸುಬ್ರಹ್ಮಣ್ಯ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಲ್.ವೆಂಕಟೇಶ್, ಭಜನಾ ಪರಿಷತ್ ತಾಲೂಕು ಅಧ್ಯಕ್ಷ ಸೋಮಶೇಖರ್ ಪೈಕ, ಭಜನಾ ಪರಿಷತ್‌ನ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಭಜನಾ ಪರಿಷತ್ ವಲಯಾಧ್ಯಕ್ಷ ಚಂದ್ರಶೇಖರ ಕೊಂದಾಳ ಮುಖ್ಯಅತಿಥಿಗಳಾಗಿದ್ದರು.

ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ಗಿರಿಧರ ಸ್ಕಂಧ ವೇದಿಕೆಯಲ್ಲಿದ್ದರು.

ಗೌರವ ಸಲಹೆಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಜನೋತ್ಸವ ಸಮಿತಿ ಜತೆ ಕಾರ್ಯದರ್ಶಿ ಸತೀಶ್ ಟಿ.ಎನ್.ಕಲ್ಮಕಾರು ವಂದಿಸಿದರು.

ವೈಭವದ ಮೆರವಣಿಗೆ : ಬೆಳಗ್ಗೆ ಕಾಶಿಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಿಂದ ವೈಭವದ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯನ್ನು ಕಲಾವಿದ ಕೆ.ಯಜ್ಞೇಶ್ ಆಚಾರ್ ಉದ್ಘಾಟಿಸಿದರು. ಪೂರ್ಣಕುಂಭ, ಚೆಂಡೆ, ವಾದ್ಯಘೋಷ, ವಿವಿಧ ಧಾರ್ಮಿಕ ಮತ್ತು ಯಕ್ಷಗಾನ ವೇಷ ಭೂಷಣ ಹಾಗೂ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತನಕ ನಡೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading