Ad Widget

ಫೆ.09 ರಂದು ವೆಂಕಟರಮಣ ಸೊಸೈಟಿಯ ಸ್ಥಾಪನಾ ದಿನಾಚರಣೆ – 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಬ್ಯಾಂಕ್ ಬಗ್ಗೆ ವಿವರ ನೀಡಿದ ಅಧ್ಯಕ್ಷ ಕೆ.ಸಿ.ಸದಾನಂದ 

ಸುಳ್ಯದ ಪ್ರತಿಷ್ಠಿತ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 1998 ರಂದು ಸ್ಥಾಪನೆಯಾಗಿದ್ದು ಇದೀಗ 29ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಫೆ‌.09 ರಂದು ಪ್ರತಿ ವರ್ಷ ಸ್ಥಾಪನಾ ದಿನಾಚರಣೆಯನ್ನು ಆಚರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಕೆ.ಸಿ.ಸದಾನಂದ ಹೇಳಿದರು.

. . . . . . . . .

ಅವರು ಫೆ.06 ರಂದು ಸೊಸೈಟಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇದರ ಪ್ರವರ್ತಿತ ಸಂಸ್ಥೆಯಾಗಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರಂಭಗೊಂಡಿತು. ಈ ಸಂದರ್ಭದಲ್ಲಿ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ, ಕಾರ್ಯದರ್ಶಿಯಾಗಿ ಎ. ವಿ. ತೀರ್ಥರಾಮ, ಕೋಶಾಧಿಕಾರಿಯಾಗಿ ಪಿ ಸಿ ಜಯರಾಮರವರ ನೇತೃತ್ವದ ತಂಡ ಈ ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕಿದೆ. ಪಿ ಸಿ ಜಯರಾಮ ರವರು ಸ್ಥಾಪಕ ಅಧ್ಯಕ್ಷರಾಗಿ ಮದುವೆಗದ್ದೆ ಭೋಜಪ್ಪ ಗೌಡ ರವರು ಸ್ಥಾಪಕ ಉಪಾಧ್ಯಕ್ಷರಾಗಿ ಸಂಸ್ಥೆಗೆ ಭದ್ರ. ಬುನಾದಿ ಹಾಕಿದ್ದಾರೆ. ನಂತರ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ ವಿ ತೀರ್ಥರಾಮ, ಚಂದ್ರಕೋಲ್ಟಾರ್. ಕೆ ಸಿ ನಾರಾಯಣ ಗೌಡ ಅಧ್ಯಕ್ಷರಾಗಿಯೂ, ಪಿ ಎಸ್ ಗಂಗಾಧರ್, ಮೋಹನ್‌ರಾಮ್ ಸುಳ್ಳಿರವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರಾಗಿ ಕೆ ಸಿ ಸದಾನಂದ ಮತ್ತು ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿ ಸೇವೆ ಸಲ್ಲಿಸುತ್ತಿದ್ದು, ಈ ಸಂಸೆಯು 23 ಶಾಖೆಗಳನ್ನು ಹೊಂದಿದ್ದು, ಫೆ.15 ರಂದು ಕೊಡಗಿನ ಮೂರ್ನಾಡಿನಲ್ಲಿ 24 ನೇ ಶಾಖೆಯನ್ನು ಪ್ರಾರಂಭವಾಗಲಿದೆ. ಸಂಘವು ಅತ್ಯುತ್ತಮವಾಗಿ ವ್ಯವಹಾರಗಳನ್ನು ಮಾಡುತ್ತಿದ್ದು ಒಟ್ಟು 22,600 ಸದಸ್ಯರನ್ನು ಹೊಂದಿದ್ದು, ವಾರ್ಷಿಕ ರೂ 1,300 ಕೋಟಿ ವ್ಯವಹಾರ ನಡೆಸುತ್ತಿದೆ. ಪ್ರತಿ ವರ್ಷವೂ ಕನಿಷ್ಠ 15% ಡಿವಿಡೆಂಟ್ ವಿತರಿಸುತ್ತಿದೆ. ಸಂಸ್ಥೆಯು ಸುಳ್ಯದಲ್ಲಿ 35.25 ಸೆಂಟ್ಸ್ ನಿವೇಶನ ಹೊಂದಿದ್ದು, ಇದರಲ್ಲಿ ಸುಳ್ಯ ಶಾಖೆ ಹಾಗೂ ಪ್ರಧಾನ ಕಛೇರಿಯನ್ನು ಒಳಗೊಂಡ ವಿಶಾಲವಾದ ವಾಣಿಜ್ಯ ಕಟ್ಟಡವಿದೆ. ಈ ಸಂಸ್ಥೆಯಲ್ಲಿ 89 ಜನ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಪರೋಕ್ಷವಾಗಿ ಪಿಗ್ಮಿ ಸಂಗ್ರಾಹಕರು ಹಾಗೂ ಇತರರು ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

. . . . . . .

ಫೆ. 09 ರಂದು ಪ್ರಧಾನ ಕಚೇರಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಭವನದಲ್ಲಿ ಪ್ರಥಮ ಸ್ಥಾಪನಾ ದಿನಾಚರಣೆ ನಡೆಯಲಿದ್ದು, ಸುಳ್ಯ ಶಾಸಕರಾದ ಕು ಭಾಗೀರಥಿ ಮುರುಳ್ಳರವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ರೈಸ್ತ ಅಲ್ಪಸಂಖ್ಯಾತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಿಲಿಯಮ್ ಲಸ್ರಾದೋ ಹಾಗೂ ಸುಳ್ಯ ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಮ್ ಮುಸ್ತಫಾರವರು ಉಪಸ್ಥಿತರಿರಲಿದ್ದಾರೆ ಎಂದು ಅವರು ಹೇಳಿದರು.

ಸೊಸೈಟಿಯ ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ ಮಾತನಾಡಿ ಹಿರಿಯರ ಶ್ರಮದಿಂದ ನಮ್ಮ ಸಹಕಾರಿ ಸಂಘ ಸ್ಥಾಪನೆಯಾಗಿದ್ದು, ಹಲವು ಸಹಕಾರಿ ಸಂಘಗಳಿಗೆ ಪ್ರೇರಣೆಯಾಗಿದೆ. ನಮ್ಮ ಸಹಕಾರಿ ಸಂಘ 10 ಬಾರಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದುಕೊಂಡಿದ್ದು, ಸಂಘದ ನಿತ್ಯಾನಂದ ಮುಂಡೋಡಿ, ಚಂದ್ರ ಕೋಲ್ಚಾರ್ ಹಾಗೂ ಪಿ.ಸಿ.ಜಯರಾಮ್ ಸಹಕಾರಿ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ.‌ ಪ್ರಮುಖವಾಗಿ ಇಲ್ಲಿ ರಾಜಕೀಯ ರಹಿತವಾಗಿ ಸಂಘದ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷರಾದ ಪಿ.ಸಿ.ಜಯರಾಮ್, ನಿರ್ದೇಶಕರಾದ ಲಕ್ಷ್ಮೀ ನಾರಾಯಣ ನಡ್ಕ, ನಳಿನಿ ಸೂರಯ್ಯ, ದೊಡ್ಡಣ್ಣ ಬರೆಮೇಲು, ಸದಾನಂದ ಮಾವಜಿ, ಪ್ರೇಮಾ ಕೆ.ಎಲ್., ಡಾ| ಎನ್.ಎ. ಜ್ಞಾನೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading