Ad Widget

ಅಡ್ತಲೆ : ನಿರಂತರ ಆನೆ ದಾಳಿಯಿಂದಾಗಿ ಅಪಾರ ಕೃಷಿ ಹಾನಿ – ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯ – ಹೋರಾಟಕ್ಕೆ ಸಜ್ಜಾದ ಜನತೆ

ಅರಂತೋಡು ಗ್ರಾಮದ ಅಡ್ತಲೆ ಹಾಗೂ ಕಿರ್ಲಾಯ ಭಾಗದಲ್ಲಿ ಆನೆಗಳ ಹಿಂಡು ನಿರಂತರವಾಗಿ ಕೃಷಿ ತೋಟಗಳಿಗೆ ದಾಳಿ ನಡೆಸುತ್ತಿದ್ದು, ಕೃಷಿಕರನ್ನು ಕಂಗಾಲಾಗಿಸಿದೆ. ಈಗಾಗಲೇ ಎಲೆಚುಕ್ಕಿ, ಕೊಳೆರೋಗ ಹಾಗೂ ಹಳದಿ ಎಲೆ ರೋಗಗಳಿಂದ ನಷ್ಟ ಅನುಭವಿಸುತ್ತಿರುವ ಕೃಷಿಕರನ್ನು ಈ ಆನೆಗಳ ದಾಳಿಯು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.

ಫೆ.05ರಂದು ರಾತ್ರಿ ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಪೊನ್ನಪ್ಪ ಅಜಿಲ ಅವರ ಕೃಷಿ ಭೂಮಿಗೆ ಆನೆ ದಾಳಿ ನಡೆಸಿ ಬಾಳೆ ಹಾಗೂ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಕೂಲಿ ಕಾರ್ಮಿಕರಾಗಿರುವ ಇವರು ಸುಮಾರು ಒಂದು ಎಕರೆ ಜಮೀನು ಹೊಂದಿದ್ದು, ಅಡಿಕೆ ಕೃಷಿ ನಾಶದ ನಂತರ ತೆಂಗು ಹಾಗೂ ಬಾಳೆ ಕೃಷಿ ಮಾಡುತ್ತ ಬಂದಿದ್ದರು. ಕೂಲಿಯೊಂದಿಗೆ ಈ ಬಾಳೆ ಕೃಷಿ ಕೂಡಾ ಜೀವನಾಧಾರ ಆಗಿತ್ತು. ಪಂಪು ಸೌಲಭ್ಯ ಹೊಂದಿರದ ಇವರು ಸಂಜೆ ಕೆಲಸ ಬಿಟ್ಟು ಬಂದ ನಂತರ ರಾತ್ರಿ ವೇಳೆಯಲ್ಲಿ ಸುಮಾರು 150ಮೀಟರ್ ದೂರದಿಂದ ನೀರನ್ನು ಹೊತ್ತು ತಂದು ಈ ಗಿಡಗಳಿಗೆ ನಿರುಣಿಸಿ ಮಕ್ಕಳಂತೆ ಜೋಪಾನ ಮಾಡಿದ್ದರು. ಆದರೆ “ಕುಂಬಾರನಿಗೆ ವರುಷ-ದೊಣ್ಣೆಗೆ ನಿಮಿಷ” ಎಂಬಂತೆ ಒಂದೇ ರಾತ್ರಿಯಲ್ಲಿ ಸುಮಾರು ನೂರಕ್ಕೂ ಅಧಿಕ ಬಾಳೆ ಗಿಡಗಳನ್ನು ಕಾಡಾನೆಗಳು ತಿಂದು ನಾಶ ಪಡಿಸಿವೆ.

ನಿರಂತರ ಆನೆ ದಾಳಿಯಿಂದ ರೋಸಿ ಹೋಗಿರುವ ಕೃಷಿಕರು ನಾಗರಿಕಾ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು ಫೆ.07 ರಂದು ಸಂಜೆ 5:00 ಗಂಟೆಗೆ ಅಡ್ತಲೆ ಶಾಲಾ ಬಳಿ ಪೂರ್ವಭಾವಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading