Ad Widget

ಫೆ.14 ಹಾಗೂ 15 ರಂದು ರಂಗಮನೆಯಲ್ಲಿ “ರಂಗ ಸಂಭ್ರಮ-2026” ಸಾಂಸ್ಕೃತಿಕ ಉತ್ಸವ ಮತ್ತು ಪ್ರಶಸ್ತಿ ಪ್ರಧಾನ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಇದರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಫೆ.14 ಮತ್ತು 15 ರಂದು ಎರಡು ದಿನಗಳ ಕಾಲ ಸಂಜೆ 5:45 ರಿಂದ ರಾತ್ರಿ 9:15 ರವರೆಗೆ “ರಂಗಸಂಭ್ರಮ 2026” ವೈವಿಧ್ಯಮಯ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ.
             
ಮಾಜಿ ಸಚಿವರಾದ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಭರತನಾಟ್ಯ ಕಲಾವಿದೆಯಾಗಿರುವ ವಿದುಷಿ ಪ್ರತಿಭಾ.ಎಲ್ ಸಾಮಗ ಉಡುಪಿ ಇವರು ರಂಗಸಂಭ್ರಮವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ, ಯಕ್ಷ ರಂಗಾಯಣ ಕಾರ್ಕಳ ಇದರ ಆಡಳಿತಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಭಾಗವಹಿಸಲಿದ್ದಾರೆ.
      
ಇದೇ ಸಂದರ್ಭದಲ್ಲಿ ಯೋಗದಲ್ಲಿ ಸಾಧನೆ ಮಾಡುತ್ತಿರುವ ಬಾಲ ಪ್ರತಿಭೆಗಳಾದ ಕು| ಸೋನ ಅಡ್ಕಾರು ಸುಳ್ಯ ಮತ್ತು ಕು| ಆರಾಧ್ಯ ದೇರಾಜೆ ಬೆಂಗಳೂರು ಇವರನ್ನು ಸುಳ್ಯದ ಹಿರಿಯ ಸಾಮಾಜಿಕ ಧುರೀಣರಾದ ಜಾಕೆ ಮಾಧವ ಗೌಡರು ಸನ್ಮಾನಿಸಲಿದ್ದಾರೆ.

ಫೆ.15 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ
ಕು| ಭಾಗೀರಥಿ ಮುರುಳ್ಯ ಇವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ರಂಗಮನೆಯ ರೂವಾರಿ ಡಾ| ಜೀವನ್ ರಾಂ ಸುಳ್ಯ ಇವರ ಮಾತಾಪಿತೃಗಳಾದ ಶ್ರೀಮತಿ ವನಜಾಕ್ಷಿ ಮತ್ತು ಶ್ರೀ ಸುಜನಾ ಸುಳ್ಯರ ಸ್ಮರಣಾರ್ಥ ನೀಡುವ 2025-26 ನೇ ಸಾಲಿನ ವನಜ ಸುಜನಾ ರಂಗಮನೆ ಪ್ರಶಸ್ತಿಯನ್ನು
ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಹಾಸ್ಯಗಾರರಾದ ಮಹೇಶ ಮಣಿಯಾಣಿಯವರಿಗೆ ನೀಡಲಾಗುವುದು.
ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಕೆ.ಸೀತಾರಾಮ ರೈ ಸವಣೂರು ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಹಿರಿಯ ರಂಗಕರ್ಮಿಗಳಾದ ಶ್ರೀ ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು ಭಾಗವಹಿಸಲಿದ್ದಾರೆ.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ : ಫೆ.14 ಶನಿವಾರದಂದು ಸಂಜೆ 5:45ಕ್ಕೆ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಕಲಾವಿದರಿಂದ, ಕುಮಾರ ಸುಬ್ರಹ್ಮಣ್ಯ ವಳಕುಂಜ ನಿರ್ದೇಶನದಲ್ಲಿ
ಚೆಂಡೆ- ಮದ್ದಳೆ ಝೇಂಕಾರ, ಸಂಜೆ 6:05 ಕ್ಕೆ
ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ
ಡಾ| ಜೀವನ್ ರಾಂ ಸುಳ್ಯ ಸಂಯೋಜನೆಯಲ್ಲಿ,
ವೈವಿಧ್ಯಮಯ ಹಾಡುಗಳ ರಂಗ ಪ್ರಸ್ತುತಿ
ಕನ್ನಡ ಗಾನ ಗುಚ್ಛ, ಸಂಜೆ 7:15 ಕ್ಕೆ ಕು| ಆರಾಧ್ಯ ದೇರಾಜೆ ಬೆಂಗಳೂರು ಹಾಗೂ ಕು| ಸೋನ ಅಡ್ಕಾರು, ಸುಳ್ಯ ಇವರಿಂದ ಯೋಗ ಪ್ರದರ್ಶನ, ಸಂಜೆ 7:25 ಕ್ಕೆ ಉದ್ಘಾಟನಾ ಸಂಭ್ರಮ, ರಾತ್ರಿ 8:35 ಕ್ಕೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು
ಅಭಿನಯಿಸುವ, ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ಕರ್ಣಾಸ್ತಮಾನ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಫೆ.15 ರಂದು ಸಂಜೆ  5:45ಕ್ಕೆ
ಕು| ಅದಿತಿ ಲಕ್ಷ್ಮೀ ಭಟ್ ಮಂಗಳೂರು ಇವರಿಂದ ಭರತನಾಟ್ಯ, ಸಂಜೆ 6:35 ಕ್ಕೆ ಸುಬ್ರಾಯ ಸಂಪಾಜೆ ಭಾಗವತಿಕೆಯಲ್ಲಿ ಹಾಸ್ಯಗಾರ ಮಹೇಶ್ ಮಣಿಯಾಣಿ ಇವರಿಂದ ಯಕ್ಷಗಾನದ ವೈವಿಧ್ಯಮಯ ಪಾತ್ರಗಳ ಪ್ರಸ್ತುತಿ ಹಾಸ್ಯ ರಸ ವೇಷ, ಸಂಜೆ 7:20 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾತ್ರಿ 8:30 ಕ್ಕೆ ಎಸ್.ಡಿ.ಎಂ.ಸ್ವಾಯತ್ತ ಪದವಿ ಕಾಲೇಜು ಉಜಿರೆ ಇಲ್ಲಿನ ರಂಗ ಅಧ್ಯಯನ ಕೇಂದ್ರದ ಕಲಾವಿದರಿಂದ, ಯಶವಂತ್ ಬೆಳ್ತಂಗಡಿ ನಿರ್ದೇಶನದ
ಭೀಷ್ಮಾಸ್ತಮಾನ ನಾಟಕ ನಡೆಯಲಿದೆ.

ಕಾರ್ಯಕ್ರಮ ಸರಿಯಾದ ಸಮಯಕ್ಕೆ ಆರಂಭ ಮತ್ತು ಮುಕ್ತಾಯ ಆಗಲಿದೆ ಮತ್ತು ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆ ಸಂಸ್ಥೆಯ ಅಧ್ಯಕ್ಷರಾದ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading