Ad Widget

ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆ-ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದ ಗ್ರಾಹಕರು ; “ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ನೀಡಲು ಪ್ರಥಮ ಆದ್ಯತೆ” : ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್

ಸುಬ್ರಹ್ಮಣ್ಯ ಜನವರಿ 29 : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯು ಗುರುವಾರ  ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಭೆಯನ್ನು ಉದ್ದೇಶಿಸಿ ಕಾರ್ಪೊರೇಟ್ ಕಚೇರಿಯ ಮೆಸ್ಕಾಂ ಅಧೀಕ್ಷಕರಾದ ಇಂಜಿನಿಯರ್ ಕೃಷ್ಣರಾಜ್ ಅವರು ಮಾತನಾಡುತ್ತಾ “ಗ್ರಾಮೀಣ ಮಟ್ಟದ ಮೆಸ್ಕಾಂ ಗ್ರಾಹಕರ ವಿದ್ಯುತ್ ಸಮಯ ಸಮಸ್ಯೆ ಬಗ್ಗೆ ನಮಗೆ ಅರಿವಿದೆ, ನಾವುಗಳು ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ತನ್ನು ಸರಬರಾಜು ಮಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ. ಗ್ರಾಹಕರು ವಿದ್ಯುತ್ ಸಮಸ್ಯೆಗಳು ಇದ್ದಲ್ಲಿ ತಮ್ಮೂರಿನ ಗ್ರಾಮ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಬೇಕು. ಸಾಧ್ಯವಾದಷ್ಟು ಶಾಖಾ ಮಟ್ಟದಲ್ಲಿಯೇ ಅದನ್ನು ಬಗೆಹರಿಸುವ ಪ್ರಯತ್ನವನ್ನು ಶಾಖಾಧಿಕಾರಿಗಳು ಮಾಡುತ್ತಾರೆ. ಸಮಸ್ಯೆ ದೊಡ್ಡದಾಗಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತಾರೆ. ನಾವು ಕೂಡಲೇ ಅದನ್ನ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ಸಭೆಯಲ್ಲಿ “ಪ್ರಸ್ತುತ ಎದುರಿಸುತ್ತಿರುವ ಲೋ – ವೋಲ್ಟೇಜ್ ಇರುವ ಪ್ರದೇಶಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸುವ ಬಗ್ಗೆ, ಪಂಜಕ್ಕೆ ನೂತನ ಕಚೇರಿ ಕಟ್ಟಡ ಆಗುವ ಬಗ್ಗೆ ಹಾಗೂ ಕೀನ್ಯಾ, ಕೊರತ್ತೋಡಿ, ಮಾನಡ್ಕ, ಕಲ್ಮಕಾರು, ಕೊಲ್ಲಮೊಗ್ರು, ಬೆಂಡೋಡಿ, ಬೋಳ್ಳಾಜೆ ಮುಂತಾದ ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸುವ ಬಗ್ಗೆ” ಗ್ರಾಹಕರು ಅಧಿಕಾರಿಗಳ ಗಮನಸೆಳೆದರು. ಹಾಗೂ “ಸುಬ್ರಹ್ಮಣ್ಯದ ದೇವರಗದ್ದೆ, ಕುಮಾರಧಾರ ಸ್ಥಳಗಳಲ್ಲಿ ಕಿತ್ತೊಗೆಯಲಾದ ಬೀದಿ ದೀಪಗಳನ್ನು ಅಳವಡಿಸುವ ಕೆಲಸ ಆಗಬೇಕು” ಎಂದರು.

ಸಭೆಯಲ್ಲಿ ಕಡಬ ತಾಲೂಕು ಕೆ.ಡಿ.ಪಿ ಸದಸ್ಯರಾದ ಶಿವರಾಮ ರೈ, ಸುಳ್ಯ ತಾಲೂಕು ಕೆ.ಡಿ.ಪಿ ಸದಸ್ಯರಾದ ಪರಮೇಶ್ವರ ಕೆಂಬಾರೆ, ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಜಮಾಲುದ್ದೀನ್, ಮೆಸ್ಕಾಂ ಸಲಹಾ ಸಮಿತಿ  ಸದಸ್ಯರಾದ ದಿನೇಶ್ ಹಾಲೆಮಜಲು, ಕೇನ್ಯಾ ರಘುನಾಥ ರೈ, ನಡುಗಲ್ಲು ಯನಿತ್ ಪಡ್ರೆ ಮುಂತಾದವರು ಮೆಸ್ಕಾಂ ಸಮಸ್ಯೆಗಳ ಬಗೆಗಿನ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಪಡೆದರು.

“ಕೊರಗ ಮೇರ ಎಂಬುವವರಿಗೆ ವಿದ್ಯುತ್ ನೀಡಿ” : “ಸುಬ್ರಹ್ಮಣ್ಯ ಗ್ರಾಮದ ನಿವಾಸಿ ಕೊರಗ ಮೆರ ಎಂಬುವವರಿಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತ್ ನಿಂದ ಮನೆ ಮಂಜೂರಾಗಿದ್ದರೂ ಕೂಡ ಕಳೆದ ಹಲವಾರು ಸಮಯಗಳಿಂದ ಮೆಸ್ಕಾಂ ನವರು ವಿದ್ಯುತ್ ಸಂಪರ್ಕ ನೀಡಿಲ್ಲ” ಎಂದು ಕೆ.ಡಿ.ಪಿ ಸದಸ್ಯರಾದ ಶಿವರಾಮ ರೈ ಅವರು ಪ್ರಶ್ನಿಸಿದಾಗ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಕೂಡಲೇ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

“ಗ್ರಾಹಕರು ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು” : “ಮೆಸ್ಕಾಂ ಗ್ರಾಹಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಅಥವಾ ತೊಂದರೆ ಎದುರಿಸಿದಲ್ಲಿ ಅಥವಾ ಅಗತ್ಯಬಿದ್ದಲ್ಲಿ ಸಂಬಂಧಪಟ್ಟ ಶಾಖಾಧಿಕಾರಿಗಳು, ಸಹಾಯಕ ಇಂಜಿನಿಯರ್ ಅಥವಾ ಉಪ ವಿಭಾಗದವರು ಸ್ಪಂದಿಸದೇ ಇದ್ದಲ್ಲಿ ಕೂಡಲೇ ಟೋಲ್ ಫ್ರೀ ನಂಬರ್ 1912ಕ್ಕೆ ಕರೆ ಮಾಡಿ ಸಮಸ್ಯೆಯನ್ನು ಕೂಡ ಹೇಳಿಕೊಳ್ಳಬಹುದು” ಎಂದು ಎಸ್.ಇ ಕೃಷ್ಣರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಸಫಲ್ಯ, ಸುಳ್ಯ ಮೆಸ್ಕಾಂ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಪ್ರೀತ್ ಕುಮಾರ್, ಸುಬ್ರಹ್ಮಣ್ಯ ಸಹಾಯಕ ಇಂಜಿನಿಯರ್ ಹರಿಕೃಷ್ಣ ಕೆಜಿ, ಕಿರಿಯ ಇಂಜಿನಿಯರ್ ಗಳಾದ ಲೋಕೇಶ್ ಎಣ್ಣೆಮಜಲು, ಮಹೇಶ್, ಬಾಲಕೃಷ್ಣ ಗೌಡ, ಪರಶುರಾಮ್, ಸುನೀತ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading