Ad Widget

ಪಂಬೆತ್ತಾಡಿ : ಚಿಗುರು ಪ್ರೀಮಿಯರ್ ಲೀಗ್ ಸೀಸನ್-3 ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಸಮಾರಂಭ

ಚಿಗುರು ಗೆಳೆಯರ ಬಳಗ(ರಿ.) ಪಂಬೆತ್ತಾಡಿ ಇದರ ಆಶ್ರಯದಲ್ಲಿ ಮೂರನೇ ವರ್ಷದ ಚಿಗುರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಜ.25 ರಂದು ಪಂಬೆತ್ತಾಡಿ ಶಾಲಾ ಆಟದ ಮೈದಾನದಲ್ಲಿ ಜರುಗಿತು.
ಇದರ ಅಧ್ಯಕ್ಷತೆಯನ್ನು ಚಿಗುರು ಗೆಳೆಯರ ಬಳಗದ ಅಧ್ಯಕ್ಷರಾದ ಅಶ್ವತ್ ಬಾಬ್ಲುಬೆಟ್ಟು ವಹಿಸಿದ್ದರು.
ಉದ್ಘಾಟನೆಯನ್ನು ಕಲ್ಮಡ್ಕ ಗ್ರಾ.ಪಂ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ನೆರೆವೇರಿಸಿದರು.
ಗೌರವ ಉಪಸ್ಥಿತಿಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ್ ಮಡಿವಾಳಮಜಲು, ಕಲ್ಮಡ್ಕ ಗ್ರಾ.ಪಂ ಸದಸ್ಯರಾದ ಹರೀಶ್ ಮಾಳಪ್ಪಮಕ್ಕಿ, ಚಿಗುರು ತಂಡದ ಗೌರವ ಸಲಹೆಗಾರರಾದ ಹೊನ್ನಪ್ಪ ನಾಯ್ಕ ಗರಡಿ, ತಂಡದ ಮಾಲಕರಾದ ಶ್ರೀಶ ಭಟ್ ಕರಿಕ್ಕಳ, ರಾಮಣ್ಣ ನಾಯ್ಕ ಪಂಜದಬೈಲು, ಶ್ರೀನಿವಾಸ್ ಭೀಮಗುಳಿ, ಲವಕುಮಾರ್ ಕೋಟೆಗುಡ್ಡೆ, ನವೀನ್ ಮೂಲೆಮನೆ, ಸ್ಥಾಪಕಧ್ಯಕ್ಷರಾದ ಶ್ರೀನಿವಾಸ.ಬಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಶೆಟ್ಟಿಗದ್ದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
ಉದ್ಘಾಟನಾ ಕಾರ್ಯಕ್ರಮವನ್ನು ಶರಣ್ಯಕುಮಾರ್ ಮಡಪ್ಪಾಡಿ ನಿರೂಪಿಸಿದರು, ಬಾಲಕೃಷ್ಣ ಕೋಟೆಗುಡ್ಡೆ ಪ್ರಾರ್ಥಿಸಿದರು, ಶರತ್ ಕುಮಾರ್ ಮಡಪ್ಪಾಡಿ ವಂದಿಸಿದರು.
ಚಿಗುರು ಗೆಳೆಯರ ಬಳಗದ ಸದಸ್ಯರು, ಕ್ರೀಡಾಪಟುಗಳು, ಊರವರು ಪಂದ್ಯಾಟದಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading