Ad Widget

ಉತ್ತರ ಕನ್ನಡದ ದಾಂಡೇಲಿಯಲ್ಲಿ ನಡೆದ ಸಾಯಿ ಸೂಪರ್ ಸಿಂಗರ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸುಳ್ಯದ ಅಶ್ವಿಜ್ ಆತ್ರೇಯ

ದಾಂಡೇಲಿಯ ಪ್ರತಿಷ್ಠಿತ ಸಂಗೀತ ಸಂಸ್ಥೆಯಾದ ಸಾಯಿ ಮೆಲೋಡೀಸ್ ಇದರ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಗರಸಭೆ ಮೈದಾನದಲ್ಲಿ ನಡೆದ ಸೂಪರ್ ಸಿಂಗರ್ ಸೀಸನ್ ವನ್ ಸ್ಪರ್ಧೆಯಲ್ಲಿ ಸುಳ್ಯದ ಅಶ್ವಿಜ್ ಆತ್ರೇಯ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ನಿರ್ಣಾಯಕರಾಗಿ ಹುಬ್ಬಳ್ಳಿಯ ಆನಂದ ಗುರುಮಠ ಹಾಗೂ ಹಳಿಯಾಳದ ಮಹಾನಂದ ಗೋಸಾವಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್ ವಾಸರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಹಲವಾಯಿ, ಪ್ರಮುಖರಾದ ಸಂತೋಷ್ ದೊರೆ, ಬಾಬುಲಾಲ್ ಪಿರಜಾದೆ, ಸಿದ್ದರಾಮಯ್ಯ, ಆನಂದ್ ಚೌಗಲ, ಅಕ್ಷತಾ ಬಿರಾದಾರ್, ವಿ.ಜಿ ನಾಯರ್, ಸಾಯಿ ಮೆಲೋಡೀಸ್ ನ ಅಧ್ಯಕ್ಷರಾದ ಅಮಿತ್ ಬಾಗಡೆ, ತಬಲ ವಾದಕರಾದ ಜಗದೀಶ್.ಎಸ್, ಕಲಾವಿದರಾದ ಕಿರಣ್ ಲೋಕಲ್ಕರ್, ರವೀಂದ್ರ ಆಚಾರಿ ಮುಂತಾದವರು ಉಪಸ್ಥಿತರಿದ್ದರು.
ಗಿರೀಶ್ ಶಿರೋಡಕರ್ ಹಾಗೂ ಮಾನಸ ಯಲ್ಲಾಪುರ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading