Ad Widget

ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಕೇಸು ದಾಖಲಿಸಿರುವುದು ಖಂಡನೀಯ ; “ಹಿಂದುತ್ವ ವಿರೋಧಿಸುವುದೇ ಕಾಂಗ್ರೆಸ್ಸಿನ ನಿಜವಾದ ಜಾತ್ಯಾತೀತತೆ” : ವಿನಯ ಕಂದಡ್ಕ – ಸುಳ್ಯ ಬಿಜೆಪಿ ಮಂಡಲ ಸಮಿತಿ ಪತ್ರಿಕಾಗೋಷ್ಠಿ

ಪುತ್ತೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಭಾಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಲಾದ ಎಫ್.ಐ.ಆರ್ ದಾಖಲಿಸಿರುವ ಬಗ್ಗೆ ಪವಿತ್ರ ಓಂಕಾರ ಧ್ವಜದ ಬಗ್ಗೆ ಅಪಸ್ವರ ಎತ್ತಿ ಹಿಂದುಗಳ ಭಾವನೆಗೆ ನೋವು ತರುವ ಹೇಳಿಕೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈಯವರ ಹೇಳಿಕೆ ಖಂಡಿಸಿ ದ.ಕ. ಜಿಲ್ಲಾ ಬಿ.ಜೆ.ಪಿ. ಮತ್ತು ಸುಳ್ಯ ಮಂಡಲ ಪತ್ರಿಕಾಗೋಷ್ಠಿ ನಡೆಸಿ ಖಂಡನ ವ್ಯಕ್ತಪಡಿಸಿದೆ.

ಜ.22ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದ.ಕ. ಜಿಲ್ಲಾ ಬಿ.ಜೆ.ಪಿ ವಕ್ತಾರ ವಿನಯ ಕುಮಾರ್ ಮುಳುಗಾಡು ಮಾತನಾಡಿ “ಹಿಂದುತ್ವ, ಸಂಸ್ಕೃತಿ ಹಾಗೂ ರಾಷ್ಟ್ರೀಯತೆಗೆ ಕೆಲಸ ಮಾಡುತ್ತಿರುವ ಡಾ.ಪ್ರಭಾಕರ ಭಟ್ ವಿರುದ್ಧ ಎಫ್.ಐ.ಆರ್ ದಾಖಲಿಸಿರುವುದು ಹಾಗೂ ಹಿಂದೂಗಳ ಆಸ್ಮಿತೆ ತಾತ್ವಿಕ ಸಿದ್ಧಾಂತ ಇರುವ ಓಂಕಾರ ಇರುವ ಧ್ವಜವನ್ನು ಉಡುಪಿ ಪರ್ಯಾಯದಲ್ಲಿ ಹಾರಿಸಿರುವುದನ್ನು ಖಂಡಿಸಿ ಹೇಳಿಕೆ ನೀಡಿರುವುದು ಸರಿಯಲ್ಲ. ಹಿಂದೂ ಧಮನಕಾರಿ ಕಾಂಗ್ರೇಸ್ ನೀತಿಯನ್ನು ಖಂಡಿಸಬೇಕಿದೆ. ದೇಶದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದರೂ ತೊಂದರೆಯಿಲ್ಲ, ನಮ್ಮ ದೇವಸ್ಥಾನಗಳಲ್ಲಿ ಕೇಸರಿ ಹಾರಿಸುವುದು ತಪ್ಪು ಎಂದು ಕಾಂಗ್ರೆಸ್ ಅಭಿಪ್ರಾಯವಾಗಿದೆ” ಎಂದರು.
ಬಿ.ಜೆ.ಪಿ.ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿ “ಹಿಂದೂತ್ವವನ್ನೇ ವಿರೋಧಿಸುವ ಮಾನಸಿಕತೆ ಕಾಂಗ್ರೆಸ್ ನಾಯಕರಲ್ಲಿ ಬರುತ್ತಾ ಇದೆ. ರಾಹುಲ್ ಗಾಂಧಿಯವರೇ ನಮ್ಮದು ಮುಸಲ್ಮಾನರ ಪಾರ್ಟಿ ಎಂದು ಹೇಳಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಹಿಂದುತ್ವವನ್ನೇ ವಿರೋಧಿಸುವ ಪ್ರಕ್ರಿಯ ಮಾಡುತ್ತಾ ಬಂದಿದೆ. ಭಗವಾಧ್ವಜ ಆರ್.ಎಸ್.ಎಸ್ ಧ್ವಜ ಎಂದು ಕಾಂಗ್ರೆಸ್ ಬಾಲಿಶವಾದ ಹೇಳಿಕೆ ನೀಡಿದೆ. ಆದರೇ ಭಗವಾಧ್ವಜ ಪುರಾಣ ಕಾಲದಿಂದಲೂ ಬಂದಿದೆ ಎಂಬ ವಿಚಾರ ಕಾಂಗೆಸ್‌ಗೆ ತಿಳಿದಿಲ್ಲ. ಹಿಂದೂ ಸಂಸ್ಕೃತಿಯನ್ನು, ಭಾರತೀಯ ಸಂಸ್ಕೃತಿಯನ್ನು ವಿರೋಧಿಸಿದ್ದರಿಂದ ಇಂದು ಅವರನ್ನು ಜನ ಕೂಡ ತಿರಸ್ಕಾರ ಮಾಡಿದ್ದಾರೆ ಎಂದರು. ಉಡುಪಿ ಪರ್ಯಾಯದಲ್ಲಿ ಭಗವಾಧ್ವಜವನ್ನು  ಹಾರಿಸಿರುವುದು ಕಾಂಗ್ರೆಸ್ ನವರಿಗೆ ಅವರ ಕೋಮವಾದಿ ಮಾನಸಿಕತೆ ಜಾಗೃತವಾಗಿದೆ. ಜಿಲ್ಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ಕೊಟ್ಟಿದೆ. ನಾವು ಈಗ ಕೋಮವಾದ ಯಾವುದು ಎಂದು ಪ್ರಶ್ನೆ ಮಾಡಬೇಕಿದೆ. ಜಾತ್ಯಾತೀತತೆ ಹಿಂದೂ ಸಂಪ್ರದಾಯದ ಉಡುಪಿ ಪರ್ಯಾಯದಲ್ಲಿ ಮತ್ತೆ ಯಾವ ಧ್ವಜವನ್ನು ಹಾಕಬೇಕಿತ್ತು ಎಂದು ಪ್ರಶ್ನೆ ಮಾಡಬೇಕಿದೆ. ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಬೆಂಬಲಿತ ಸಂಘಟನೆಗಳು ದೂರು ನೀಡಿದೆ. ಹಿಂದೂ ಸಂಸ್ಕೃತಿ ಬಗ್ಗೆ ಮಾತನಾಡುವುದು ಅಪರಾಧವಾಗಿದೆ. ಬಾಂಗ್ಲಾ ಅಕ್ರಮ ವಲಸಿಗರನ್ನು ಪ್ರಶ್ನೆ ಮಾಡಿದ ಪುನೀತ್ ಕೆರೆಹಳ್ಳಿ ಮೇಲೆ ಕೇಸು ಮಾಡುತ್ತಾರೆ. ಆದರೇ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅವರೆಲ್ಲರಿಗೂ ಸರಕಾರ ಎಲ್ಲಾ ಸವಲತ್ತುಗಳನ್ನು ನೀಡಿದೆ. ಈ ದೇಶದಲ್ಲಿ ಹಿಂದುತ್ವ ವಿರೋಧಿಸುವುದೇ ಕಾಂಗ್ರೆಸ್ಸಿನ ನಿಜವಾದ ಜಾತ್ಯಾತೀತತೆ” ಎಂದ ಅವರು ಹಿಂದೂ ಧಮನಕಾರಿ ನೀತಿಯನ್ನು ಕಾಂಗ್ರೆಸ್ ಸರಕಾರ ಬಿಡಬೇಕು ಎಂದರು.

ಬಿ.ಜೆ.ಪಿ.ಸುಳ್ಯ ಮಂಡಲದ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಬಿ.ಜೆ.ಪಿ. ಸುಳ್ಯ ನಗರ ಎಸ್.ಸಿ. ಮೋರ್ಚಾದ ಜಗನ್ನಾಥ, ಅಜ್ಜಾವರ ಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ರೈ ಮೇನಾಲ, ಸುಳ್ಯ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎ.ಟಿ.ಕುಸುಮಾಧರ, ಕಾರ್ಯದರ್ಶಿ ನಾರಾಯಣ ಶಾಂತಿನಗರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading