Ad Widget

ಸುಳ್ಯ ಜೆ.ಸಿ.ಐ ಸುಳ್ಯ ಪಯಸ್ವಿನಿ ಅಧ್ಯಕ್ಷೆಯಾಗಿ ಶ್ರೀಮತಿ ‌ಲತಾಶ್ರೀ ಸುಪ್ರೀತ್ ಮೋಂಟಡ್ಕರಿಗೆ ಪದಪ್ರದಾನ

ಜೆ.ಸಿ.ಐ ಸುಳ್ಯ ಪಯಸ್ವಿನಿ ಇದರ 2026ನೇ ಸಾಲಿನ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ಶ್ರೀಮತಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿ ಪ್ರಸನ್ನ ಎಂ.ಆರ್.ತಂಡದ ಪದಪ್ರದಾನ ಸಮಾರಂಭ ಜ.20ರಂದು ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ‌ನಡೆಯಿತು.

ಸಭೆಯು ಜೆ.ಸಿ.ಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್‌ರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು.
ಪದಪ್ರದಾನದ ಬಳಿಕ ಲತಾಶ್ರೀ ಸುಪ್ರೀತ್ ಮೋಂಟಡ್ಕರ ಅಧ್ಯಕ್ಷತೆಯಲ್ಲಿ ಸಭೆ‌ ಮುಂದುವರಿಯಿತು.
ವಲಯ 15ರ ವಲಯ ಉಪಾಧ್ಯಕ್ಷ ಜಿತೇಶ್ ಪೆರೇರಾ ಪದಪ್ರದಾನ ನೆರವೇರಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್  ಭಾರತೀಯ ಸಂಸ್ಕೃತಿಯಂತೆ ದೀಪ‌ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಆಗಮಿಸಿ ಶುಭಹಾರೈಸಿದರು.

ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಕಾನತ್ತಿಲ, ಕಾರ್ಯಕ್ರಮ ಸಂಯೋಜಕ ರವಿಕುಮಾರ್ ‌ಅಕ್ಕೋಜಿಪಾಲ್ ವೇದಿಕೆಯಲ್ಲಿ ‌ಇದ್ದರು.

ಜತೆ‌ ಕಾರ್ಯದರ್ಶಿ ವಿನೋದ್ ಮೂಡಗದ್ದೆ ಜೇಸಿ ವಾಣಿ ವಾಚಿಸಿದರು.
ಪೂರ್ವಾಧ್ಯಕ್ಷ ಅಶೋಕ್ ಚೂಂತಾರು ನಿಕಟಪೂರ್ವಾಧ್ಯಕ್ಷರ ಪರಿಚಯ‌ ಮಾಡಿದರು.
ಪ್ರಸನ್ನ ಎಂ.ಆರ್ ನೂತನ ಕಾರ್ಯದರ್ಶಿಯವರನ್ನು, ಐ.ಪಿ.ಪಿ ಗುರುಪ್ರಸಾದ್ ನಾಯಕ್ ನೂತನ ಅಧ್ಯಕ್ಷರನ್ನು, ನವೀನ್ ಕುಮಾರ್ ಅಜ್ಜಾವರ ನೂತನ ಸದಸ್ಯರನ್ನು, ಉಮೇಶ್ ಬೊಳುಗಲ್ಲು ಅತಿಥಿಗಳನ್ನು ಪರಿಚಯಿಸಿದರು.
ಪ್ರಥಮ ಬಾರಿಗೆ ಇಷ್ಟು ಅತೀ ದೂಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading