Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ : ಎರಡು ತಿಂಗಳಲ್ಲಿ 14 ಕೋಟಿಗೂ ಮಿಕ್ಕಿ ಆದಾಯ

ಸುಬ್ರಹ್ಮಣ್ಯ ಜನವರಿ 21 : ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2025 ನವೆಂಬರ್ ಹಾಗೂ ಡಿಸೆಂಬರ್ ಎರಡು ತಿಂಗಳಲ್ಲಿ ಒಟ್ಟು 14 ಕೋಟಿ 77 ಲಕ್ಷದ 80,000 ರೂ. ಆದಾಯ ಬಂದಿರುತ್ತದೆ. ನವೆಂಬರ್ ತಿಂಗಳಲ್ಲಿ ವಿವಿಧ ಸೇವೆಗಳಿಂದ 4,56,21,739 ರೂಪಾಯಿ, ಹುಂಡಿಯಿಂದ 1,09,76,957 ರೂಪಾಯಿ ಹಾಗೂ ಅನ್ನದಾನ ನಿಧಿಯಿಂದ 83,57,769 ಲಕ್ಷ ರೂಪಾಯಿ ಆದಾಯ ಬಂದಿರುತ್ತದೆ. ಹಾಗೆಯೇ ಡಿಸೆಂಬರ್ ತಿಂಗಳ ವಿವಿಧ ಸೇವೆಗಳಿಂದ 5,30,18,923 ರೂಪಾಯಿ, ಹುಂಡಿಯಿಂದ 1,90,63,518 ರೂಪಾಯಿ, ಅನ್ನದಾನ ನಿಧಿಯಿಂದ 1,07,41,594 ರೂಪಾಯಿ ಆದಾಯ ಬಂದಿರುತ್ತದೆ. ಇದನ್ನು ಹೊರತುಪಡಿಸಿ ವಸತಿಗೃಹಗಳು ಹಾಗೂ ಇನ್ನಿತರ ಮೂಲಗಳಿಂದ ಬಂದ ಮೊಬಲಗು ಕೂಡ ಇರುತ್ತದೆ ಎಂದು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading