Ad Widget

ಕವನ : ಬಾನಾಡಿಗಳ ಬದುಕು… – ✍️ಉಲ್ಲಾಸ್ ಕಜ್ಜೋಡಿ

ಇಳಿಸಂಜೆಯ ತಿಳಿಬಿಸಿಲಿನ ತನುತಂಪಿನ ತಂಗಾಳಿಯಲಿ ಬಾನೆತ್ತರ ಹಾರಾಡಿವೆ ಬಾನಾಡಿ ಬಳಗ ಮರಳಿ ಗೂಡು ಸೇರೋ ತವಕದಲಿ, ಕತ್ತಲಾಗೋ ಹೊತ್ತಿನಲಿ…
ಮತ್ತೆ ಮರಳಿ ಮುಂಜಾನೆಯ ಆ ಮಂಜಿನಲಿ ಗೂಡು ಬಿಟ್ಟು ಮೇಲೆ ಹಾರಿ, ಅನಂತಾಕಾಶದಲಿ ಆಹಾರವ ಅರಸುತ್ತಾ ಸಾಗಿ, ಮನೆಯಂಗಳದಲೋ-ಕೃಷಿ ತೋಟದಲೋ ಹುಳು-ಹುಪ್ಪಟೆಗಳ ಹುಡುಕಿ ತಿಂದು ಕೃಷಿಕರಿಗೂ ನೆರವಾಗಿವೆ ಬಾನಾಡಿಗಳ ಈ ಬಳಗ…
ಇವುಗಳ ಬದುಕೊಂತರ ಹೋರಾಟ, ಪ್ರತಿನಿತ್ಯವೂ ಇದೇ ರೀತಿಯ ಹಾರಾಟ, ದಿನನಿತ್ಯದ ಆಹಾರಕ್ಕಾಗಿ ಅಲೆದಾಟ, ಅರಿತುಕೊಂಡು ಸಾಗಿದರೆ ಇವುಗಳ ಬದುಕೇ ನಮಗೆ ನಿಜವಾದ ಜೀವನ ಪಾಠ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading