Ad Widget

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.08ರಂದು ನಡೆಯಲಿರುವ ರಕ್ತದಾನ ಶಿಬಿರ ಹಾಗೂ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಗ್ರಾಮೀಣ ಪ್ರದೇಶದಲ್ಲಿ ಅಂಬ್ಯುಲೆನ್ಸ್ ಸೇವೆ, ರಕ್ತದಾನ ಶಿಬಿರ, ತುರ್ತು ಸಂದರ್ಭದಲ್ಲಿ ರಕ್ತದ ಪೂರೈಕೆ, ಯೋಗ ತರಬೇತಿ ಕೇಂದ್ರ, ನೃತ್ಯ ತರಬೇತಿ ಕೇಂದ್ರ, ಚೆಸ್ ತರಬೇತಿ ಕೇಂದ್ರ ಹಾಗೂ ಕರಾಟೆ ತರಬೇತಿ ಕೇಂದ್ರ ಸೇರಿದಂತೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ದಾನಿಗಳ ಸಹಕಾರದಿಂದ ನಡೆಸುತ್ತಾ ಬಂದಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ತನ್ನ 5ನೇ ವರ್ಷದ ವರ್ಷಾಚರಣೆ ಅಂಗವಾಗಿ ಫೆ.08ರಂದು ನಡೆಯಲಿರುವ 9ನೇ ವರ್ಷದ ರಕ್ತದಾನ ಶಿಬಿರ ಹಾಗೂ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಗುತ್ತಿಗಾರು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಡಾ. ಮಹಾಲಿಂಗೇಶ್ವರ ಭಟ್ ದೇವಸ್ಯ, ಸನತ್ ಮುಳುಗಾಡು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್ ಗುತ್ತಿಗಾರು, ಸಿಬ್ಬಂದಿ ಜಯಪ್ರಕಾಶ್ ಕಾನತ್ತಿಲ, ಚೋಮಯ್ಯ ಮೆಟ್ಟಿನಡ್ಕ, ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಮೋಟ್ನೂರು, ಶ್ರೀಮತಿ ಕಾವೇರಿ ಕುಕ್ಕುಜೆ, ಶ್ರೀಮತಿ ಅನಿತಾ ಚಾರ್ಮತ, ಎಂ.ಜೆ.ಎಫ್ ದೇವಿಪ್ರಸಾದ್ ಚಿಕ್ಮುಳಿ, ನಿರಂತ್ ದೇವಸ್ಯ, ಯಕ್ಷಿತ್ ಉತ್ರಂಬೆ, ಪ್ರಶಾಂತ್ ತಂಟೆಪ್ಪಾಡಿ, ಲ| ಪ್ರವೀಣ್ ಮುಂಡೋಡಿ, ಮೋಹನ್ ಮುಕ್ಕೂರು, ಶ್ರೀಮತಿ ದಿವ್ಯಾ ಹರೀಶ್ ಚತ್ರಪ್ಪಾಡಿ, ಯೋಗ ಗುರು ಶರತ್ ಮರ್ಗಿಲಡ್ಕ, ಮೋಹನ್ ದಾಸ್ ಶಿರಾಜೆ, ಟ್ರಸ್ಟ್ ಅಧ್ಯಕ್ಷರಾದ ಚಂದ್ರಶೇಖರ ಕಡೋಡಿ, ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading