Ad Widget

ಕಲ್ಮಕಾರು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕಲ್ಮಕಾರು ಹಿರಿಯ ಪ್ರಾಥಮಿಕ ಶಾಲೆಗೆ ಯುವ ಉದ್ಯಮಿ ಪ್ರವೀಣ್ ಕೊಪ್ಪಡ್ಕ ಅವರು ಸುಮಾರು ಮೂವತ್ತು ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿಯವರು ದೀಪ ಬೆಳಗಿ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಧರ್ಮದರ್ಶಿಯವರು ಶಾಲಾ ಮಕ್ಕಳು ಹಾಗೂ ಪೋಷಕರನ್ನು ಉದ್ದೇಶಿಸಿ ಆಶೀರ್ವದಿಸಿ ಶುಭ ಹಾರೈಸಿದರು.

ಆರಿಕೊಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಇದರ ವತಿಯಿಂದ ಶಾಲಾ ಮುಖ್ಯೋಪಾಧ್ಯಾಯನಿ  ಮಾಲಿನಿ ಕೆ.ಎಸ್ ಇವರನ್ನು ಸನ್ಮಾನಿಸಿ ಶಾಲಾ ಅಭಿವೃದ್ಧಿಗಾಗಿ ಶ್ರೀದೇವಳದ ವತಿಯಿಂದ ಐದುಸಾವಿರ ದೇಣಿಗೆಯನ್ನು ಹಸ್ತಾಂತರಿಸಿದರು.
ಅದೇ ರೀತಿ ಶಾಲಾವತಿಯಿಂದ ಅರಿಕೋಡಿ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿ ಮತ್ತು ದಾನಿಗಳಾದ ಪ್ರವೀಣ್ ಕೊಪ್ಪಡ್ಕ ಅವರ ತಂದೆ ಸುಬ್ಬಯ್ಯ ಹಾಗೂ ತಾಯಿ ಜಾನಕಿ ಕೊಪ್ಪಡ್ಕ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಸ್.ಡಿ‌.ಎಂ.ಸಿ ಅಧ್ಯಕ್ಷರಾದ ದಿವ್ಯ ಕುಶಾಲಪ್ಪ, ಉಪಾಧ್ಯಕ್ಷರಾದ ಚಂದ್ರಶೇಖರ್, ಗುರು ಚರಣ್ ಕೊಪ್ಪಡ್ಕ ಹಾಗೂ ಅಶ್ವತ್ ವೈ.ಪಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯನಿ ಮಾಲಿನಿ ಕೆ.ಎಸ್ ಸ್ವಾಗತಿಸಿ ಸಹ ಶಿಕ್ಷಕರಾದ ಸಾಗರ್.ಆರ್ ಕಾರ್ಯಕ್ರಮ ನಿರೂಪಿಸಿ  ವಂದಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಊರಿನ ಗಣ್ಯರು ಪೋಷಕರು ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading