Ad Widget

ಡಿ.30ರಂದು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ “ಸುಳ್ಯ ತಾಲೂಕು ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ” ; ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾದ ಕೆ.ಆರ್ ತೇಜಕುಮಾರ್ ಬಡ್ಡಡ್ಕ ; ಕೃತಿ ಬಿಡುಗಡೆ, ಸಾಹಿತ್ಯ ಅವಲೋಕನ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ “ಕನ್ನಡ ಕಸ್ತೂರಿ ಸನ್ಮಾನ”

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ, 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದರ ಆಶ್ರಯದಲ್ಲಿ ಡಿ.30 ಮಂಗಳವಾರದಂದು ಡಾ| ಪೈಲೂರು ಗೋಪಾಲಕೃಷ್ಣ ವೇದಿಕೆ, ಅಬಸಮ ಸಭಾಂಗಣ, ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇಲ್ಲಿ “ಸುಳ್ಯ ತಾಲೂಕು ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ”ವು ಸಡಗರ-ಸಂಭ್ರಮದಿಂದ ನೆರವೇರಲಿದ್ದು, ಹಿರಿಯ ಸಾಹಿತಿಗಳಾದ ಕೆ.ಆರ್ ತೇಜಕುಮಾರ್ ಬಡ್ಡಡ್ಕ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.

ಬೆಳಿಗ್ಗೆ 8:45ಕ್ಕೆ ಕುಕ್ಕುಜಡ್ಕ ಪೇಟೆಯಿಂದ “ಕನ್ನಡ ಭುವನೇಶ್ವರಿಯ ಮೆರವಣಿಗೆ” ನಡೆಯಲಿದ್ದು, ಮಾಜಿ ಸಚಿವರಾದ ಎಸ್.ಅಂಗಾರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಅರುಣಕುಮಾರ ಮುಂಡಾಜೆ, ಬಾಲಸುಬ್ರಹ್ಮಣ್ಯ ಕೊಚ್ಚಡ್ಕ, ಚಂದ್ರಪ್ರಕಾಶ್ ಪಡ್ಪು, ಧನ್ಯರಾಜ್ ಮೂಕಮಲೆ, ಶ್ರೀಮತಿ ಹೇಮಾವತಿ ತಂಟೆಪ್ಪಾಡಿ ಹಾಗೂ ಸತೀಶ್ ಪಿಲಿಕಜೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಪೂರ್ವಾಹ್ನ 9:30ಕ್ಕೆ ರಾಷ್ಟ್ರ ಧ್ವಜಾರೋಹಣ, ಪರಿಷತ್ತಿನ ಧ್ವಜಾರೋಹಣ ಹಾಗೂ ಕನ್ನಡ ಧ್ವಜಾರೋಹಣ ನೆರವೇರಲಿದ್ದು, ಅಮರಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಾನಕಿ ಕಂದಡ್ಕ ರಾಷ್ಟ್ರಧ್ವಜರೋಹಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಮಿಥುನ್.ಕೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಪೂರ್ವಾಹ್ನ 9:40ಕ್ಕೆ ಸುಳ್ಯ ತಾಲೂಕು ತಹಶೀಲ್ದಾರರಾದ ಶ್ರೀಮತಿ ಮಂಜುಳಾ.ಎಂ ವಸ್ತು ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಹರಿಪ್ರಸಾದ್.ಕೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಪೂರ್ವಾಹ್ನ 10:00 ಗಂಟೆಯಿಂದ 12:00 ಗಂಟೆಯವರೆಗೆ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ಹಿರಿಯ ಸಾಹಿತಿಗಳಾದ ಕೆ.ಆರ್ ತೇಜಕುಮಾರ್ ಬಡ್ಡಡ್ಕ ಸಮ್ಮೇಳನಾಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಸಾಹಿತಿಗಳಾದ ಕೆ.ಪಿ ಸುರೇಶ್ ಕಂಜರ್ಪಣೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹೊಸ ಕೃತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ. ನಂತರ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ತಮ್ಮ ಮಾತುಗಳನ್ನಾಡಿದ್ದಾರೆ. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಎಸ್.ಆಂಗಾರ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಕೃಷ್ಣಪ್ರಸಾದ್ ಮಾಡಬಾಕಿಲು ಉಪಸ್ಥಿತರಿರಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್ ಆಶಯ ನುಡಿಗಳನ್ನಾಡಲಿದ್ದು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಪ್ರಸ್ತಾವನೆ ನೆರವೇರಿಸಲಿದ್ದಾರೆ. ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಲಿದ್ದಾರೆ. ಸಾಹಿತಿಗಳಾದ ಎ.ಕೆ ಹಿಮಕರ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಲಿದ್ದು, ನಿವೃತ್ತ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೂಂತಾರು ಸ್ಮರಣ ಸಂಚಿಕೆ ಸಂಪಾದಕರ ನುಡಿ ನೆರವೇರಿಸಲಿದ್ದಾರೆ. ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಲಿದ್ದು, ಕೃಷ್ಣಪ್ರಸಾದ್ ಮಾಡಬಾಕಿಲು ವಂದನಾರ್ಪಣೆ ಮಾಡಲಿದ್ದಾರೆ. ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಸಂಕೀರ್ಣ ಚೊಕ್ಕಾಡಿ, ಚರಿಷ್ಮಾ ಕಡಪಳ ಹಾಗೂ ಶ್ರೀಮತಿ ಭವ್ಯ.ಪಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಸಮ್ಮೇಳನದಲ್ಲಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರ “ಮಜಲಿನಾಚೆ” ಕವನಸಂಕಲನ ಹಾಗೂ ಮಮತಾ ರವೀಶ್ ಪಡ್ಡಂಬೈಲು ರವರ “ಗುಬ್ಬಿ ದನಿ” ಕವನ ಸಂಕಲನ ಬಿಡುಗಡೆಗೊಳ್ಳಲಿದೆ.

ಅಪರಾಹ್ನ 12:00 ರಿಂದ 12:20 ರವರೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ನೆರವೇರಲಿದ್ದು, ಸಾಹಿತಿಗಳಾದ ಸಂಜೀವ ಕುದ್ಪಾಜೆ ಸಾಹಿತ್ಯ ಪರಿಚಯ ಮಾಡಲಿದ್ದಾರೆ. ಬಾಬು ಗೌಡ ಅಚ್ರಪ್ಪಾಡಿ ಸ್ವಾಗತಿಸಲಿದ್ದಾರೆ ಹಾಗೂ ಕುಶಾಲಪ್ಪ ತುಂಬತ್ತಾಜೆ ಧನ್ಯವಾದ ಸಮರ್ಪಿಸಲಿದ್ದಾರೆ. ಚೈತನ್ಯ.ಕೆ‌.ಎನ್ ಕಾರ್ಯಕ್ರಮ ನಿರೂಪಿಸಲಿದ್ದು, ಅಬ್ದುಲ್ಲಾ ಅರಂತೋಡು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಅಪರಾಹ್ನ 12:20 ರಿಂದ 1:30 ರವರೆಗೆ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿಗಳು ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರಾದ ಡಾ| ಶಾಲಿನಿ.ಡಿ.ಎಲ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಪರಿಮಳ ಐವರ್ನಾಡು, ಮಮತಾ ಸುಧೀರ್ ಚಿದ್ಗಲ್, ರೇಣುಕಾ.ಆರ್ ನಾವಲಗಿ, ಅನುರಾಧಾ ಶಿವಪ್ರಕಾಶ್, ಮಾನ್ಯಶ್ರೀ.ಕೆ.ಎಂ ಪುಳಿಕುಕ್ಕು, ಅಶ್ವಿನಿ ಕೋಡಿಬೈಲು, ಮುಸ್ತಾಫ ಬೆಳ್ಳಾರೆ, ಗಾಯತ್ರಿ ರಾಜೀವ್ ಸ್ನೇಹಗಿರಿ, ಅಕ್ಷಯ ಕಾಂತಬೈಲು, ಸುಮತಿ.ಕೆ ಕಾನತ್ತಿಲ ಹಾಗೂ ದೀಪಶ್ರೀ ಅಡ್ತಲೆ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ರಮೇಶ್ ನೀರಬಿದಿರೆ ಸ್ವಾಗತಿಸಲಿದ್ದು, ರೂಪವಾಣಿ.ಬಿ ಧನ್ಯವಾದ ಸಮರ್ಪಿಸಲಿದ್ದಾರೆ. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಲಿದ್ದು, ಯೋಗೀಶ್ ಹೊಸೊಳಿಕೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಅಪರಾಹ್ನ 1:30ರಿಂದ 2:00 ರವರೆಗೆ ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಮತ್ತು ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕೇಶವ.ಸಿ.ಎ ಸ್ವಾಗತಿಸಲಿದ್ದು, ದೇವಪ್ಪ ಹೈದಂಗೂರು ಕಾರ್ಯಕ್ರಮ ನಿರೂಪಿಸಿದ್ದಾರೆ. ಸಾವಿತ್ರಿ ಕಣೇಮರಡ್ಕ ಧನ್ಯವಾದ ಸಮರ್ಪಿಸಲಿದ್ದು, ಜಯರಾಮ್ ಶೆಟ್ಟಿ ದುಗ್ಗಲಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಅಪರಾಹ್ನ 2:00 ರಿಂದ 3:15ರವರೆಗೆ ವಿಚಾರಗೋಷ್ಠಿ ನಡೆಯಲಿದ್ದು, ಖ್ಯಾತ ಯಕ್ಷಗಾನ ಅರ್ಥಧಾರಿಗಳಾದ ಜಬ್ಬಾರ್ ಸಮೋ ಸಂಪಾಜೆ ಅಧ್ಯಕ್ಷತೆ ವಹಿಸಲಿದ್ದು, ರಾಜೇಶ್ ತೋಳ್ಪಾಡಿ “ಮಕ್ಕಳ ಕವಿತೆಗೆ ಹೊಸ ದಿಕ್ಕು” ಎಂಬ ವಿಷಯದ ಕುರಿತು ಮತ್ತು ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ “ವರ್ತಮಾನದ ಪಠ್ಯಪುಸ್ತಕಗಳಲ್ಲಿ ಇತಿಹಾಸದ ಪರಿಕಲ್ಪನೆಗಳು” ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಲಿದ್ದು, ಚರಿಷ್ಮಾ ಕಡಪಳ ಧನ್ಯವಾದ ಸಮರ್ಪಿಸಲಿದ್ದಾರೆ. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಲಿದ್ದು, ಗೋಪಿನಾಥ್ ಮೆತ್ತಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಅಪರಾಹ್ನ 3:15 ರಿಂದ 4:00 ರವರೆಗೆ “ಕಾವ್ಯ-ಕುಂಚ ಗಾಯನ” ನಡೆಯಲಿದ್ದು, ಗಾಯಕರು ರಮೇಶ್ ಮೆಟ್ಟಿನಡ್ಕ, ಕು. ಶುಬಾಶ್ರೀ ಬೆಳ್ಳಾರೆ ಹಾಗೂ ಕುಂಚ ಮೋನಪ್ಪ.ಹೆಚ್.ಎಸ್, ಪ್ರಜ್ವಲ್ ಬಾಳುಗೋಡು ನೆರವೇರಿಸಲಿದ್ದಾರೆ. ಗಾಯಕರಾದ ಕೆ.ಆರ್ ಗೋಪಾಲಕೃಷ್ಣ ಗಾಯನ ನಿರ್ವಹಣೆ ಮಾಡಲಿದ್ದಾರೆ. ಅರುಣ್ ಕುಮಾರ್ ಮುಂಡಾಜೆ ಸ್ವಾಗತಿಸಲಿದ್ದು, ಶರೀಫ್ ಜಟ್ಟಿಪಳ್ಳ ಧನ್ಯವಾದ ಸಮರ್ಪಿಸಲಿದ್ದಾರೆ. ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಲಿದ್ದು, ಧನ್ಯರಾಜ್ ಮೂಕಮಲೆ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.

ಅಪರಾಹ್ನ 4:00 ರಿಂದ 5:30 ರವರೆಗೆ ಸಮಾರೋಪ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ನೆರವೇರಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ ಶ್ರೀನಾಥ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಸಾಹಿತಿಗಳಾದ ಡಾ| ನಾ.ಸೋಮೇಶ್ವರ ಸಮಾರೋಪ ಭಾಷಣ ಮಾಡಲಿದ್ದು, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಇದರ ಅಧ್ಯಕ್ಷರಾದ ಡಾ| ಕೆ.ವಿ ಚಿದಾನಂದ ಸಾಧಕರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕೇಶವ ಕರ್ಮಾಜೆ ಹಾಗೂ ಖ್ಯಾತ ವ್ಯಂಗ್ಯ ಚಿತ್ರಕಾರರಾದ ದಿನೇಶ್ ಕುಕ್ಕುಜಡ್ಕ ಉಪಸ್ಥಿತರಿರಲಿದ್ದಾರೆ. ಹಿರಿಯ ಸಾಹಿತಿಗಳಾದ ಕೆ.ಆರ್ ತೇಜಕುಮಾರ್ ಬಡ್ಡಡ್ಕ ಸಮ್ಮೇಳನಾಧ್ಯಕ್ಷರ ನುಡಿಯನ್ನು ಮಾತನಾಡಲಿದ್ದು, ಗೌರವ ಉಪಸ್ಥಿತರಾಗಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ| ಹರಪ್ರಸಾದ್ ತುದಿಯಡ್ಕ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಜಣ್ಣ ಹಾಗೂ ಸುಳ್ಯ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್.ಯು.ಕೆ ಉಪಸ್ಥಿತರಿರಲಿದ್ದಾರೆ.

ಸಾಹಿತ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಎಂ.ಟಿ ಶಾಂತಿಮೂಲೆ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮೋಹನ ಶೇಣಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹರೀಶ್ ಮೋಟುಕಾನ, ಕ್ರೀಡಾ ಕ್ಷೇತ್ರದಲ್ಲಿ ಶ್ರೀಮತಿ ಭವಾನಿ ವಸಂತ್, ಧಾರ್ಮಿಕ ಮತ್ತು ಸಂಘಟನಾ ಕ್ಷೇತ್ರದಲ್ಲಿ ಆನೆಕಾರ ಗಣಪಯ್ಯ, ಯಕ್ಷಗಾನ ಕ್ಷೇತ್ರದಲ್ಲಿ ಶೇಖರ ಮಣಿಯಾಣಿ, ಶಿಲ್ಪಕಲಾ ಕ್ಷೇತ್ರದಲ್ಲಿ ಶ್ರೀನಿವಾಸ ಮಾಸ್ಟರ್ ಹಳೆಗೇಟು, ಭೂತಾರಾಧನೆ ಕ್ಷೇತ್ರದಲ್ಲಿ ವಿಜಿತ್ ಮೈತಡ್ಕ, ಹಿರಿಯ ಸಾಹಿತಿಗಳಾದ ಶ್ರೀಮತಿ ಸುಲೋಚನಾ.ಪಿ.ಕೆ, ಗಣಕ ಯಂತ್ರ ಪರಿಣಿತರಾದ ವೈಕುಂಠ ಪ್ರಭು, ಸಹಕಾರ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಚಂದ್ರಾ ಕೋಲ್ಚಾರ್ ಹಾಗೂ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ಇಬ್ರಾಹಿಂ ಸುಳ್ಯ ಇವರುಗಳು “ಕನ್ನಡ ಕಸ್ತೂರಿ ಸನ್ಮಾನ” ಸ್ವೀಕರಿಸಲಿದ್ದು, ಕ್ರೀಡಾ ಕ್ಷೇತ್ರದ ಬಾಲ ಪ್ರತಿಭೆ ಕು. ಭಾನವಿ.ಪಿ.ಎಸ್ ಇವರು “ಕನ್ನಡ ಕಸ್ತೂರಿ ಗೌರವಾರ್ಪಣೆ” ಸ್ವೀಕರಿಸಲಿದ್ದಾರೆ. ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಲಿದ್ದು, ತೇಜಸ್ವಿ ಕಡಪಳ ವಂದನಾರ್ಪಣೆ ಸಲ್ಲಿಸಲಿದ್ದಾರೆ. ಚಂದ್ರಮತಿ.ಕೆ ಕಾರ್ಯಕ್ರಮ ನಿರೂಪಿಸಲಿದ್ದು, ಸಂಧ್ಯಾಕುಮಾರಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ. ಹರಿಪ್ರಸಾದ್.ಕೆ, ಜಯಶ್ರೀ.ಎಂ, ರಚನಾ.ಸಿ.ವಿ ಹಾಗೂ ಗ್ರೀಷ್ಮಾ ಸನ್ಮಾನಿತರ ಪರಿಚಯ ಮಾಡಲಿದ್ದಾರೆ.

ಸಂಜೆ 5:30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕುಕ್ಕುಜಡ್ಕ ಭ್ರಾಮರಿ ಪಾಟ್ಯಾಲಯದ ವತಿಯಿಂದ “ನೃತ್ಯ ವೈಭವ” ಹಾಗೂ ಕಾಜಾಣ(ರಿ.) ಬೆಂಗಳೂರು ಇದರ ವತಿಯಿಂದ “ಸಾಲು ಮರಗಳ ತಾಯಿ ತಿಮ್ಮಕ್ಕ” ನಾಟಕ ಪ್ರದರ್ಶನ ನೆರವೇರಲಿದ್ದು, ಬೇಲೂರು ರಘುನಂದನ್ ರವರು ಈ ನಾಟಕದ ರಂಗಪಠ್ಯ, ವಿನ್ಯಾಸ, ಸಂಗೀತ ಹಾಗೂ ನಿರ್ದೇಶನ ಮಾಡಿದ್ದಾರೆ. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಜಯಶ್ರೀ ತೇಜಸ್ವಿ ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading