Ad Widget

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ – ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ – ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಕೊರತ್ತೋಡಿ ಆಯ್ಕೆ- ಉಪಾಧ್ಯಕ್ಷರಾಗಿ ತೇಜೇಶ್ವರ ಕುಂದಲ್ಪಾಡಿ, ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಕೋಶಾಧಿಕಾರಿಯಾಗಿ ಜಯಪ್ರಕಾಶ್ ಕುಕ್ಕೆಟ್ಟಿ ಅವಿರೋಧ ಆಯ್ಕೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಡಿ.28 ರಂದು ಚುನಾವಣೆ ನಡೆಯಿತು. ನೂತನ ಅಧ್ಯಕ್ಷರಾಗಿ ಲೋಕೇಶ್ ಪೆರ್ಲಂಪಾಡಿ- ಕಾರ್ಯದರ್ಶಿಯಾಗಿ ದಯಾನಂದ ಕೊರತ್ತೋಡಿ ಆಯ್ಕೆ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಕೃಷ್ಣ ಬೆಟ್ಟ, ಪ್ರ. ಕಾರ್ಯದರ್ಶಿ ಸ್ಥಾನಕ್ಕೆ ದಯಾನಂದ ಕಲ್ನಾರ್ ಸ್ಪರ್ಧಿಸಿದ್ದರು. ಉಳಿದ ಪದಾಧಿಕಾರಿಗಳ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನಕ್ಕೆ ಅವಕಾಶ ಪಡೆದ ಸಂಘದ ಎಲ್ಲಾ 17 ಸದಸ್ಯರು ಪಾಲ್ಗೊಂಡಿದ್ದರು.

. . . . . . . . .

ಉಪಾಧ್ಯಕ್ಷರಾಗಿ ತೇಜೇಶ್ವರ ಕುಂದಲ್ಪಾಡಿ, ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಕೋಶಾಧಿಕಾರಿಯಾಗಿ ಜಯಪ್ರಕಾಶ್ ಕುಕ್ಕೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಂಗಾಧರ ಮಟ್ಟಿ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ವಂಗಾಯ, ಶಿವಪ್ರಸಾದ್ ಕೇರ್ಪಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಮಹಮ್ಮದ್ ಆರೀಫ್ ಪಡುಬಿದ್ರಿ, ತಾಲೂಕು ಚುನಾವಣಾಧಿಕಾರಿ ಹರೀಶ್ ಮೋಟುಕಾನ, ತಾಲೂಕು ಸಹ ಚುನಾವಣಾಧಿಕಾರಿ ಸಂದೀಪ್ ವಾಗ್ಲೆ, ಜಿಲ್ಲಾ ಸಂಘದ ಕಾರ್ಯದರ್ಶಿ ಸಿದ್ದಿಕ್ ನೀರಾಜೆ ಸಹಕರಿಸಿದರು. ಜಿಲ್ಲಾ ಸಂಘದ ಅಧ್ಯಕ್ಷ ಪುಷ್ಪರಾಜ್ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದರು.

. . . . . . .

ಚುನಾವಣಾ ಪ್ರಕ್ರಿಯೆಯಲ್ಲಿ ಮುರಳೀಧರ ಅಡ್ಡನಪಾರೆ, ದಯಾನಂದ ಕಲ್ನಾರ್, ಜಯಪ್ರಕಾಶ ಕುಕ್ಕೆಟ್ಟಿ, ಕೃಷ್ಣ ಬೆಟ್ಟ, ಗಂಗಾಧರ್ ಕಲ್ಲಪಳ್ಳಿ, ಗಂಗಾಧರ್ ಮಟ್ಟಿ, ಲೋಕೇಶ್ ಪೆರ್ಲಂಪಾಡಿ, ದುರ್ಗಾ ಕುಮಾರ್ ನಾಯರಕೆರೆ, ಪದ್ಮನಾಭ ಅರಂಬೂರು, ಗಿರೀಶ್ ಅಡ್ಪಂಗಾಯ, ಗಿರೀಶ್ ಪೆರುಮುಂಡ, ತೇಜೇಶ್ವರ ಕುಂದಲ್ಪಾಡಿ, ಶಿವಪ್ರಸಾದ್ ಕೇರ್ಪಳ, ದಯಾನಂದ ಕೊರತ್ತೋಡಿ., ಪ್ರಜ್ಞಾ ಎಸ್ ನಾರಾಯಣ, ಪದ್ಮನಾಭ ಎಸ್, ಜಯಕೃಷ್ಣ ರೈ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading