Ad Widget

“ಪಂಚಸಪ್ತತಿ ಸ್ವಚ್ಛತಾ ಅಭಿಯಾನ”ದ ಅಂಗವಾಗಿ ಕುಕ್ಕುಜಡ್ಕ ಅಂಗನವಾಡಿ ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಜಾಗೃತಿ

ಸುಳ್ಯ : ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ “ನಮ್ಮ ಊರು ಸ್ವಚ್ಛ ಊರು” ಎಂಬ ಧ್ಯೇಯವಾಕ್ಯದೊಂದಿಗೆ ದಿನಾಂಕ ಡಿ.19ರಂದು ಕುಕ್ಕುಜಡ್ಕ ಅಂಗನವಾಡಿಯಲ್ಲಿ ಪುಟಾಣಿ ಮಕ್ಕಳಿಗಾಗಿ ವೈಯಕ್ತಿಕ ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕುಕ್ಕುಜಡ್ಕದ ಸಮುದಾಯ ಆರೋಗ್ಯಾಧಿಕಾರಿಯಾದ ಶ್ರೀಮತಿ ಮೋಕ್ಷಿತ ಅವರು ಮಕ್ಕಳಿಗೆ ಹಲ್ಲು ಸರಿಯಾಗಿ ಉಜ್ಜುವ ವಿಧಾನ, ಬಾಯಿ ತೊಳೆಯುವ ಮಹತ್ವ, ಉಗುರು ಕತ್ತರಿಸುವುದು ಹಾಗೂ ದೇಹದ ಸ್ವಚ್ಛತೆಯ ಅಗತ್ಯತೆ ಕುರಿತು ಸರಳವಾಗಿ ವಿವರಿಸಿ ಅರಿವು ಮೂಡಿಸಿದರು. ಮಕ್ಕಳ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮಹತ್ವವನ್ನು ತಿಳಿಸುವ ಜಾಗೃತಿ ಚಟುವಟಿಕೆಗಳನ್ನೂ ನಡೆಸಲಾಯಿತು.
ಯುವತಿ ಮಂಡಲ  ಅಧ್ಯಕ್ಷರಾದ ಹೇಮಾವತಿ ತಂಟೆಪ್ಪಾಡಿ, ಪದಾಧಿಕಾರಿಗಳು ದೀಪಿಕಾ ಜೋಗಿಯಡ್ಕ, ಪವಿತ್ರ ಪುಲಿಮಾರಡ್ಕ, ವೀಣಾ ಪಡ್ಪು, ಶ್ಯಾಮಲಾ ಕುಕ್ಕುಜಡ್ಕ ಹಾಗೂ ಸದಸ್ಯೆಯರು ಉತ್ಸಾಹದಿಂದ ಭಾಗವಹಿಸಿ, ಪರಿಸರ ಶುದ್ಧೀಕರಣದ ಅಗತ್ಯತೆ ಹಾಗೂ ಸಮಾಜದ ಜವಾಬ್ದಾರಿಯ ಬಗ್ಗೆ ಮಕ್ಕಳಿಗೆ ಸಂದೇಶ ನೀಡಿದರು.

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading