Ad Widget

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ – ಡಿ.23ರಂದು ಮಂಗಳೂರಿನಲ್ಲಿ  ಜಿಲ್ಲಾ ಗ್ಯಾರಂಟಿ ಸಮಾವೇಶ

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಮಟ್ಟದ ಯೋಜನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲಿಸಿ ನವೆಂಬರ್ ತಿಂಗಳ ಸಭೆಯ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಪಾಲನಾ ವರದಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮಾತನಾಡಿ “ಬಾಳುಗೋಡು ಗ್ರಾಮದ ಕೊತ್ನಡ್ಕ ನಿವಾಸಿ ಸುಂದರಿ ಅಜಿಲ ಎಂಬವರಿಗೆ ಸೂಕ್ತ ದಾಖಲಾತಿ ಇಲ್ಲದೆ ಆಧಾರ್ ಕಾರ್ಡ್ ಇರುವುದಿಲ್ಲ ಅವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಧಾರ್ ಕಾರ್ಡ್ ಮಾಡಿಕೊಡುವಂತೆ” ಅಧಿಕಾರಿಗಳ ಗಮನಕ್ಕೆ ತಂದರು.

“ಅನ್ನ ಭಾಗ್ಯ ಯೋಜನೆಯ ಪ್ರಗತಿ ಬಗ್ಗೆ ಕಳೆದ ಸಭೆಯ ವಿಷಯಗಳ ಬಗ್ಗೆ 776 ಬಿಪಿಎಲ್ ಪಡಿತರ ಚೀಟಿಗಳ ಪೈಕಿ 212 ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. 242 ಪಡಿತರ ಚೀಟಿಯನ್ನು ಯಥಾಸ್ಥಿತಿಯಲ್ಲಿ ರಿಸಲಾಗಿದೆ. 322 ಕಾರ್ಡ್ ಗಳು ಪರಿಶೀಲನೆಗೆ ಬಾಕಿ ಇದೆ” ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

“ಗೃಹ ಜ್ಯೋತಿ ಯೋಜನೆಗಳಿಗೆ ಸಂಬಂಧ ಪಟ್ಟಂತೆ ಪ್ರಗತಿ ಪರಿಶೀಲಿಸಿ ಕೆ ಇ ಆರ್ ಸಿ ನಿಯಮಾವಳಿ ಪ್ರಕಾರ ಗ್ರಾಹಕರ ವಿದ್ಯುತ್ ಮಂಜೂರಾತಿ ಹೊರೆಗೆ ಸರಿಯಾಗಿ ಎರಡು ತಿಂಗಳ ವಿದ್ಯುತ್ ಬಿಲ್ಲಿನಷ್ಟು ಭದ್ರತಾ ಠೇವಣಿಯು ಗ್ರಾಹಕರ ಖಾತೆಯಲ್ಲಿ ಇರಬೇಕಾಗಿರುತ್ತದೆ. ಪ್ರಸ್ತುತ ಗ್ರಾಹಕರ ಖಾತೆಯಲ್ಲಿ 2 ತಿಂಗಳ ಬಿಲ್ಲಿನಷ್ಟು ಠೇವಣಿ ಕಡಿಮೆ ಇರುವ ಗ್ರಾಹಕರಿಗೆ ವ್ಯತ್ಯಾಸ ಮೊತ್ತವನ್ನು ಬೇಡಿಕೆ ಮಾಡಲಾಗಿರುತ್ತದೆ. ಪವರ್ ಮ್ಯಾನ್ ಮುಖಾಂತರ ಗ್ರಾಹಕರಿಗೆ ತಿಳುವಳಿಕೆ ನೀಡಿ ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಸುಳ್ಯ ತಾಲೂಕು ಮತ್ತು ಕಡಬದ ಅಂಗನವಾಡಿ ಮತ್ತು ಶಾಲಾ ಕಾಲೇಜು ವಠಾರ ದಲ್ಲಿರುವ ವಿದ್ಯುತ್ ಕಂಬ ಹಾಗೂ ಪರಿವರ್ತಕ ಗಳನ್ನು ಈಗಾಗಲೇ ಸರಕಾರದ ನಿರ್ದೇಶನದಂತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಾಕಿ ಇದ್ದರೆ ಅಂತಹ ಸ್ಥಳಗಳ ಪಟ್ಟಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಮೆಸ್ಕಾಂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

“ಸುಳ್ಯ ಶಾಖೆಯ ಕೊಯಿಕುಳಿ ವಿದ್ಯುತ್ ಪರಿವರ್ತಕ ಕೆಟ್ಟು ಹೋಗಿದ್ದು 3 ಫೇಸ್ ವಿದ್ಯುತ್ ಇಲ್ಲದೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಹೊಸ ಪರಿವರ್ತಕ ಅಳವಡಿಸುವಂತೆ” ಸದಸ್ಯ ಭವಾನಿಶಂಕರ್ ಕಲ್ಮಡ್ಕ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

“ಶಕ್ತಿ ಯೋಜನೆ ಪ್ರಗತಿ ಬಗ್ಗೆ ಪರಿಶೀಲಿಸಿ ಸುಳ್ಯದಿಂದ ಮಂಡೆಕೋಲಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನ ಬಸ್ಸು ಒದಗಿಸುವ ಕುರಿತು ವಿಭಾಗೀಯ ಸಂಚಾಲನಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ” ಎಂದು ಸಭೆಗೆ ತಿಳಿಸಿದರು.

“ಯುವನಿಧಿಗೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನಲ್ಲಿ ಒಟ್ಟು 410 ಪಲಾನುಭವಿಗಳಿದ್ದು ಶೇ. 81.18% ಪ್ರಗತಿ ಇದೆ” ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

“ಡಿ.23ರಂದು ಮಂಗಳೂರಿನ ಪುರಭವನದಲ್ಲಿ ಜಿಲ್ಲಾ ಗ್ಯಾರಂಟಿ ಸಮಾವೇಶ ನಡೆಯಲಿದ್ದು, ಸುಳ್ಯ ತಾಲೂಕಿನಿಂದ ಪಲಾನುಭವಿಗಳನ್ನು ಮಂಗಳೂರಿನ ಸಮಾವೇಶಕ್ಕೆ ಭಾಗವಹಿಸಲು ಮಾಡಿರುವ ವ್ಯವಸ್ಥೆ ಮತ್ತು ಪೂರ್ವತಯಾರಿ ಬಗ್ಗೆ ಸಭೆಯಲ್ಲಿ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿದರು.

ಸಭೆಯಲ್ಲಿ ಸದಸ್ಯರಾದ ಭವಾನಿಶಂಕರ್ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ರವಿ ಗುಂಡಡ್ಕ,
ಧನುಷ್ ಕುಕ್ಕೇಟಿ, ಸೋಮಶೇಖರ್ ಕೇವಳ, ರಾಜು ನೆಲ್ಲಿಕುಮೇರಿ, ಎ ಬಿ ಅಬ್ಬಾಸ್, ಈಶ್ವರ ಆಳ್ವ, ಲತೀಫ್ ಅಡ್ಕಾರ್, ಇಬ್ರಾಹಿಂ ಶಿಲ್ಪಾ, ಶ್ರೀಮತಿ ಕಾಂತಿ ಬಿ ಎಸ್, ಶ್ರೀಮತಿ ಭವಾನಿ ಬೊಮ್ಮಟ್ಟಿ, ಉಪಸ್ಥಿತರಿದ್ದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಸಭೆ ನಡೆಸಿಕೊಟ್ಟರು. ಗ್ಯಾರಂಟಿ ಯೋಜನೆಗಳಿಗೆ ಸಂಬಂದಿಸಿದ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading