Ad Widget

ಕೊಲ್ಲಮೊಗ್ರು : ಅಪಹರಣಕ್ಕೆ ಯತ್ನ ಸಂಚಿನ ವದಂತಿ ಸುಖಾಂತ್ಯ –  ಸತ್ಯಾಸತ್ಯತೆ ಬಯಲಿಗೆಳೆದ ಸುಬ್ರಹ್ಮಣ್ಯ ಪೊಲೀಸರು

ಕೊಲ್ಲಮೊಗ್ರು ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾಲಾ ಮಕ್ಕಳನ್ನು ಸಂಜೆ ಸಮಯದಲ್ಲಿ ಓರ್ವ ಮುಸುಕುಧಾರಿ ಹಾಗೂ ಇನ್ನೋರ್ವ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬಂದು ಶಾಲಾ ಮಕ್ಕಳನ್ನು ಅಪಹರಣ ನಡೆಸಲು ಸಂಚು ರೂಪಿಸಿದ್ದರು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯೊಂದಿಗೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟು ಪೋಷಕರು ಹಾಗೂ ಮಕ್ಕಳಲ್ಲಿ ಭಯವನ್ನು ಹುಟ್ಟಿಸಿದ ಪ್ರಕರಣವೊಂದು ನಡೆದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರನ್ನು ಠಾಣೆಗೆ ಕರೆಸಿ ತನಿಖೆ ನಡೆಸಿದ್ದು, ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಎಸ್ ರವರು “ಘಟನೆ ನಡೆದ ಮರುದಿನವೇ ಕೊಲ್ಲಮೊಗ್ರಕ್ಕೆ ತೆರಳಿ ಸಿಸಿಟಿವಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಳ್ಳಲಾಗಿತ್ತು. ಆದರೂ ತನಿಖೆ ವಿಳಂಬದ ಆರೋಪಗಳು ಕೇಳಿಬಂದಿದ್ದು, ಸುಬ್ರಹ್ಮಣ್ಯ ಠಾಣಾ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದು, ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಅವರು ಪುತ್ತೂರಿನ ಪ್ಯಾನಸೋನೆಕ್ ಕಂಪನಿಯ ಕೆಲಸಗಾರರಾಗಿದ್ದು, ಹೊಸ ಟಿವಿ ಅಳವಡಿಕೆ ಮಾಡುವ ಸಲುವಾಗಿ ಕೊಲ್ಲಮೊಗ್ರುಗೆ ಬಂದಿದ್ದಾಗಿ ತನಿಖೆಯಿಂದ ತಿಳಿದುಬಂದಿದ್ದು, ಶಾಲಾ ಮಕ್ಕಳಲ್ಲಿ ವಿಳಾಸ ಕೇಳಿದ್ದು, ಅವರನ್ನು ಕಂಡು ಮಕ್ಕಳು ಭಯಭೀತರಾಗಿದ್ದಾರೆ ಎಂದು ತಿಳಿದುಬಂದಿರುತ್ತದೆ. ನಂತರ ಸದ್ರಿ ವ್ಯಕ್ತಿಗಳ ಹೇಳಿಕೆ ಪಡೆಯಲಾಗಿದ್ದು, ಹೆಲ್ಮೆಟ್ ಕಡ್ಡಾಯವಾಗಿದ್ದ ಕಾರಣ ಇಬ್ಬರೂ ಹೆಲ್ಮೆಟ್ ಧರಿಸಿಯೇ ಬಂದಿದ್ದರು ಹಾಗೂ ಚರ್ಮದ ಸಮಸ್ಯೆಯ ಕಾರಣದಿಂದ ಅವರಲ್ಲಿ ಒಬ್ಬರು ಮುಖಕ್ಕೆ ಮುಖಗವಸು ಹಾಕಿದ್ದರು ಎಂದು ಖಚಿತಪಡಿಸಲಾಗಿದ್ದು, ತನಿಖೆಯಲ್ಲಿದ್ದಾಗ ಯಾರೂ ಭಯಭೀತರಾಗುವ ಅಗತ್ಯವಿಲ್ಲ. ಸ್ವಲ್ಪ ತಡವಾದರೂ ಸಂಪೂರ್ಣ ಸತ್ಯಾಸತ್ಯತೆ ತಿಳಿಯುತ್ತದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸುವುದನ್ನು ಬಿಟ್ಟು ಆತುರದಿಂದ ಆರೋಪ ಮಾಡುವುದೇ ಅಂತಿಮವಾಗದಿರಲಿ” ಎಂದು ಹೇಳಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading