Ad Widget

ಸರಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ದ ದ.ಸಂ.ಸ ಮನವಿ

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಸರ್ವೆ ಸಂಖ್ಯೆ 100-2ರಲ್ಲಿರುವ ಸರಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಕುರಿತು ಈ ವಿಷಯದಲ್ಲಿ ಕೂಡಲೇ ಅದನ್ನು ತಡೆ ಹಿಡಿದು ಕಟ್ಟಿದ ಕಟ್ಟಡವನ್ನು ತೆರವುಗೊಳಿಸಿ ಇಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಲು ಈ ಜಾಗವನ್ನು ಕಾಯ್ದಿರಿಸುವಂತೆ ದ.ಸಂ.ಸ ವತಿಯಿಂದ ತಹಸೀಲ್ದಾರರಿಗೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ
ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಹಾಗೂ ಪೆರುವಾಜೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ‌ ನೀಡಲಾಗಿದೆ.
ಮೈಸೂರು ವಿಭಾಗೀಯ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಆನಂದ ಬೆಳ್ಳಾರೆಯವರು ಈ ದೂರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ತಿಳಿಸಿರುವಂತೆ ಈ ಬಗ್ಗೆ ಪೆರುವಾಜೆ ಗ್ರಾಮ ಪಂಚಾಯತ್ ಗೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ‌ ಪೆರುವಾಜೆ ಗ್ರಾಮ ಪಂಚಾಯತ್ ನವರ ಪತ್ರ ಸಂಖ್ಯೆ ನಂ.ಪೆ.ಗ್ರಾ.ಪಂ ಮಾ.ಹ.1-2025-26ರಲ್ಲಿ ದಿನಾಂಕ 29-4-2025ರಂದು ಯಾವುದೇ ಕಟ್ಟಡ ಪರವಾನಿಗೆಯನ್ನು ಪಡೆದಿರುವುದಿಲ್ಲವೆಂದು ಹಿಂಬರಹವನ್ನು ನೀಡಿರುತ್ತಾರೆ.
ಮೇಲಿನ ವಿಷಯಕ್ಕೆ ಸಂಬಂಧಪಟ್ಟಂತೆ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಸರ್ವೆ ಸಂಖ್ಯೆಯ 100-2ರಲ್ಲಿ ಸುಮಾರು0.8 ಎಕ್ರೆ ಸ್ಥಳವು ಸರಕಾರಿ ಸ್ಥಳವಾಗಿರುತ್ತದೆ. ಇದು ಬೆಳ್ಳಾರೆ-ಸವಣೂರು-ಪುತ್ತೂರು ರಸ್ತೆಯ ಪಕ್ಕದಲ್ಲಿ ಹಾದು ಹೋಗುವುದರಿಂದ ಇದು ರಸ್ತೆ ಪರಂಬೋಕು ಕೂಡಾ ಆಗಿರುತ್ತದೆ ಹಾಗೂ ಹತ್ತಿರದಲ್ಲಿ ಗೌರಿಹೊಳೆಯು ಹರಿಯುತ್ತಿರುವುದರಿಂದ
ಹೊಳೆ ಪರಂಬೋಕು ಕೂಡಾ ಆಗಿರುತ್ತದೆ. ಇದೆಲ್ಲವನ್ನು ಮೀರಿ ಸ್ಥಳೀಯ ನಿವಾಸಿಯಾದ ಕೆ.ಗಣಪಯ್ಯ ಬಿನ್ ಕೃಷ್ಣ ಭಟ್ ರವರು ಸರಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾದೀನಪಡಿಸಿ ಅನಧಿಕೃತವಾಗಿ ಪಿ.ಡಬ್ಲ್ಯು.ಡಿಯಿಂದ ನಿರಾಪೇಕ್ಷಣಾ ಪತ್ರವನ್ನು ಪಡೆಯದೆ ಮತ್ತು ಗ್ರಾಮ ಪಂಚಾಯತ್ ನಿಂದ ಯಾವುದೇ ಪರವಾನಿಗೆಯನ್ನು ಪಡೆಯದೆ ಇಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಿರುತ್ತಾರೆ. ಈ ಕಾರಣಕ್ಕಾಗಿ ಅಕ್ರಮವಾಗಿ ಕಟ್ಟುತ್ತಿರುವ ಕಟ್ಟಡವನ್ನು
ಕೂಡಲೇ ತಡೆ ಹಿಡಿಯಬೇಕು ಹಾಗೂ ಈಗಾಗಲೇ ಕಟ್ಟಿರುವ‌ ಕಟ್ಟಡವನ್ನು ತೆರವುಗೊಳಿಸಿ ಈ ಭೂಮಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳ ಕಾಯ್ದಿರಿಸುವಂತೆ ಮನವಿ ಮೂಲಕ ಕೇಳಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading