Ad Widget

ಡಿ.16 ರಂದು ಸುಳ್ಯದಲ್ಲಿ ಅಡ್ಡಂಡ ಕಾರ್ಯಪ್ಪ ನಿರ್ದೇಶನದ “ನಿಜಮಹಾತ್ಮ ಬಾಬಾಸಾಹೇಬ” ನಾಟಕ ಪ್ರದರ್ಶನ

ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘ ಹಾಗೂ ಭಾರತೀಯ ಮಜ್ದೂರ್ ಸಂಘದ ನೇತೃತ್ವದಲ್ಲಿ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತಿ ಪಡಿಸುವ ಮೈಸೂರು ರಂಗಾಯಣ ನಿಕಟಪೂರ್ವಾದ್ಯಕ್ಷ ಅಡ್ಡಂಡ ಕಾರ್ಯಪ್ಪ ನಿರ್ದೇಶನದ “ನಿಜಮಹಾತ್ಮ ಬಾಬಾಸಾಹೇಬ” ನಾಟಕ ಡಿ.16 ರಂದು ಸಂಜೆ ಯುವಜನ ಸಂಯುಕ್ತ ಮಂಡಳಿಯ ರಂಗಮಂದಿರದಲ್ಲಿ ಉಚಿತ ಪ್ರದರ್ಶನಗೊಳ್ಳಲಿದೆ ಎಂದು ರಾಷ್ಟ್ರ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಕಂಜಿಪಿಲಿ ಹೇಳಿದರು.

ಅವರು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಟಕ ಪ್ರದರ್ಶನದ ವಿವರ ನೀಡಿದರು. “ಕಳೆದ ವರ್ಷ ಅಡ್ಡಂಡ ಕಾರ್ಯಪ್ಪ ನಿರ್ದೇಶನದ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಜನರ ಮೆಚ್ಚುಗೆ ಗಳಿಸಿತ್ತು. ಈ ಬಾರಿ “ನಿಜಮಹಾತ್ಮ ಬಾಬಾಸಾಹೇಬ” ನಾಟಕ ಪದರ್ಶನಗೊಳ್ಳಲಿದೆ. ದೇಶ ಕಂಡ ಅಪ್ರತಿಮ ಹೋರಾಟಗಾರ, ದೇಶಕ್ಕೆ ಸಂವಿಧಾನ ಒದಗಿಸಿ, ಸಮಾಜದಲ್ಲಿ ಎಲ್ಲರಿಗೂ ಗೌರವದಿಂದ ಬದುಕಲು, ಎಲ್ಲಾ ವರ್ಗಕ್ಕೂ ಉತ್ತಮ ಸ್ಥಾನಮಾನ, ಉದ್ಯೋಗ, ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿ ನಾಯಕರಾಗಿ,ಜನಪ್ರತಿನಿಧಿಗಳಾಗಿ ಬೆಳೆಯಲು ಅವಕಾಶ ನೀಡಿದ್ದು ಡಾ, ಬಿ,ಆರ್, ಆಂಬೇಡ್ಕರ್ ಅವರು. ಅವರ ಸಾಧನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲ, ಇದನ್ನು ಜನರಿಗೆ ತಿಳಿಸುವ ಸಲುವಾಗಿ ಅಡ್ಡಂಡ ಕಾರ್ಯಪ್ಪ ನಾಟಕ ರಚಿಸಿದ್ದಾರೆ. ಅಂಬೇಡ್ಕರ್ ಅವರು ದೇಶದ ಆಸ್ತಿ, ಅವರ ಹೋರಾಟ, ಸಾಧನೆಯನ್ನು ನಾಟಕದ ಮೂಲಕ ಪ್ರದರ್ಶಿಸಿ ತಾಲೂಕಿಗೆ ಒಂದು ದಿಕ್ಕನ್ನು ಕೊಡುವ ಉದ್ದೇಶವನ್ನಿಟ್ಟುಕೊಂಡಿದ್ದೇವೆ. ಈ ನಾಟಕಟದಲ್ಲಿ ಬರುವ ಪಾತ್ರಗಳು ಕಾಲ್ಪನಿಕವಲ್ಲ, ನಾಟಕದ ನಿರ್ದೇಕರು ಎಲ್ಲಾ ದಾಖಲೆ ಇಟ್ಟುಕೊಂಡೆ ಪ್ರಸ್ತುತಪಡಿಸಿದ್ದಾರೆ” ಎಂದರು.

ರಾಷ್ಟ್ರ ಚಿಂತನ ವೇದಿಕೆಯ ಸಹಸಂಚಾಲಕ ಪಿ.ಕೆ.ಉಮೇಶ್ ಮಾತನಾಡಿ “ಅಂಬೇಡ್ಕರ್ ವಾದ, ವಿವಾದಗಳು ರಾಷ್ಟೀಯ ಸ್ವಯಂ ಸೇವಕ ಸಂಘವನ್ನು ದೂರವಿಡುವ ಕೆಲಸ ಮಾಡುತ್ತಿದೆ. ಆದರೇ ಎಲ್ಲಾ ಜಾತಿಯವರು ಭಾಗವಹಿಸಿರುವ ಸಂಘದ ಕಾರ್ಯಕ್ರಮಗಳಿಗೆ ಅಂಬೇಡ್ಕರ್ ಅವರು ಬಂದಿರುವ ಬಗ್ಗೆ ಈ ನಾಟಕದಲ್ಲಿದೆ. ಸಮಾಜಕ್ಕೆ ಪೂರಕವಾದ ಉದ್ದೇಶದೊಂದಿಗೆ ಈ ನಾಟಕ ಪ್ರದರ್ಶನಗೊಳ್ಳಲಿದೆ” ಎಂದರು.

ರಾಷ್ಟ್ರ ಚಿಂತನ ವೇದಿಕೆಯ ಸದಸ್ಯ ಚನಿಯ ಕಲ್ತಡ್ಕ ಮಾತನಾಡಿ “ಅಂಬೇಡ್ಕರ್ ಬಗ್ಗೆ ಸಮುದಾಯದ ನಾಯಕರು ನಿಜ ಜೀವನವನ್ನು ತಿಳಿದುಕೊಂಡು ಮಾತನಾಡುವವರು ಕಡಿಮೆ. ಅದರೇ ಅಡ್ಡಂಡ ಕಾರ್ಯಪ್ಪ ನವರು “ನಿಜಮಹಾತ್ಮ ಬಾಬಾಸಾಹೇಬ” ಎಂಬ ನಾಟಕ ಮೂಲಕ ಸತ್ಯಾಸತ್ಯತೆಯನ್ನು ಸಮಾಜಕ್ಕೆ ತಿಳಿಸಲು ಪ್ರಯತ್ನಿಸಿದ್ದಾರೆ. ಅಂಬೇಡ್ಕರ್ ಅವರು ಪ್ರಥಮ ಭಾರಿಗೆ ಸಂಸತ್ ಚುನಾವಣೆಗೆ ಸ್ಪರ್ಧಿಸಲು ಆಗಿನ ರಾಷ್ಟೀಯ ಪಕ್ಷ ಅವಕಾಶ ನೀಡಿರಲಿಲ್ಲ. ಅವರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಾಣಬೇಕಾಯಿತು. ಅವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿತ್ತು. ನಮ್ಮ ಸಮಾಜದ ಬಂಧುಗಳು ಈ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳಬೇಕು” ಎಂದರು.

ಸುಳ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ರಾಷ್ಟ್ರ ಚಿಂತನ ವೇದಿಕೆಯ ಸದಸ್ಯ ಸೋಮನಾಥ ಎ, ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಭಟ್ ಸುಳ್ಯ, ಕಾರ್ಯದರ್ಶಿ ನಾರಾಯಣ ಶಾಂತಿನಗರ, ಕೋಶಾಧಿಕಾರಿ ರವಿ, ಜತೆಕಾರ್ಯದರ್ಶಿ ಸುರೇಂದ್ರ ಕಾಮತ್, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ ಪತ್ರಿಕಾಗೋಷ್ಠಿಯಲ್ಲಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading