Ad Widget

ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಚೊಕ್ಕಾಡಿ ಮಯೂರಿ ಯುವತಿ ಮಂಡಲದ ವತಿಯಿಂದ ಸ್ವಚ್ಚತಾ ಕರಪತ್ರ ವಿತರಣೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025 ಕಾರ್ಯಕ್ರಮದ ಅಂಗವಾಗಿ ಡಿ.07 ರಂದು ಚಿಕ್ಕಿನಡ್ಕ ಕಾಲೊನಿ ಪ್ರದೇಶದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಜಾಗೃತಿ ಗೀತೆ ಹಾಡುವ ಹಾಗೂ ಕರಪತ್ರ ವಿತರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ವಚ್ಛತಾ ಜಾಗೃತಿ ಕರಪತ್ರಗಳನ್ನು ಮನೆಮನೆಗೆ ವಿತರಿಸುವ ಜೊತೆಗೆ ಜಾಗೃತಿ ಗೀತೆಗಳನ್ನು ಹಾಡುವ ಮೂಲಕ ಸ್ಥಳೀಯರ ಗಮನ ಸೆಳೆಯಲಾಯಿತು. ಆರೋಗ್ಯಕರ ಮತ್ತು ಸ್ವಚ್ಛವಾದ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಯುವತಿ ಮಂಡಲದ ಅಧ್ಯಕ್ಷೆ ಹೇಮಾವತಿ ತಂಟೆಪ್ಪಾಡಿ ಹಾಗೂ ಪದಾಧಿಕಾರಿಗಳು, ಸದಸ್ಯೆಯರು ಸಕ್ರಿಯವಾಗಿ ಪಾಲ್ಗೊಂಡರು. ಜನರಿಗೆ ಸ್ವಚ್ಛತೆಯ ಮಹತ್ವವನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading