Ad Widget

ಸುಳ್ಯ : ಕನ್ನಡ ಗೀತಾ ಗಾಯನ ಸ್ಪರ್ಧೆಯ ಫಲಿತಾಂಶ ಪ್ರಕಟ

ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.) ಸುಳ್ಯ ವತಿಯಿಂದ ದಶಮಾನೋತ್ಸವ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ “ಕನ್ನಡ ಗೀತಾ ಗಾಯನ ಆನ್ ಲೈನ್ ಸ್ಪರ್ಧೆ”ಯ ಫಲಿತಾಂಶ
ಪ್ರಕಟಗೊಂಡಿದೆ.
ವಿವಿಧ ಶಾಲೆಗಳ ಹಾಗೂ ಸಾರ್ವಜನಿಕವಾಗಿ ಪಿ.ಯು‌.ಸಿವರೆಗಿನ ವಿದ್ಯಾರ್ಥಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸ್ಪರ್ಧೆಯಲ್ಲಿ ಸುಮಾರು 15 ತಂಡಗಳು ಭಾಗವಹಿಸಿದ್ದು,  ಸ್ಪರ್ಧಿಗಳ ಹಾಡಿನ ಪ್ರಸ್ತುತಿ, ಸ್ವರ-ತಾಳ, ಲಯ, ಹೊಂದಾಣಿಕೆಯನ್ನು  ಆಧಾರವಾಗಿಟ್ಟುಕೊಂಡು  ತೀರ್ಪುಗಾರರ ಮೌಲ್ಯಮಾಪನದ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಧಾನಕರ ಬಹುಮಾನಗಳೊಂದಿಗೆ ವಿಜೇತ ತಂಡಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಕೆ.ಅರ್,  ಅರತಿ ಪುರುಷೋತ್ತಮ್ ಮತ್ತು  ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಕೊಟ್ಟ ಸೇವಾ ಸಂಗಮದ ಗೌರವ ಸಲಹೆಗಾರರಾದ ಡಾ.ಅನುರಾಧಾ ಕುರುಂಜಿ, ಚಂದ್ರಶೇಖರ ಬಿಳಿನಲೆ, ನಿಯೋಜಿತ ಅಧ್ಯಕ್ಷರಾದ ಯಶವಂತ್ ಜಯನಗರ,  ದಾಖಲಾತಿ ವಿಭಾಗ ಕಾರ್ಯದರ್ಶಿ ಪೂರ್ಣಿಮಾ ಚೊಕ್ಕಾಡಿ, ಸಂಘಟನಾ ಕಾರ್ಯದರ್ಶಿ ಸುಜಿತ್ಎಂ.ಎಸ್, ಕೆ.ವಿ.ಜಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿ ದೀಕ್ಷಿತಾ ಅವರು ಪಾಲ್ಗೊಂಡಿದ್ದರು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕೆ.ಎಸ್ ಗೌಡ ಪಿ.ಯು ಕಾಲೇಜು ನಿಂತಿಕಲ್ಲು, ದ್ವಿತೀಯ ಸ್ಥಾನ ಸ.ಹಿ.ಪ್ರಾ ಶಾಲೆ ಮುಳ್ಯ ಅಟ್ಲೂರು, ತೃತೀಯ ಸ್ಥಾನವನ್ನು ಸವಣೂರು ಕುಮಾರ ಮಂಗಳ ಶಾಲಾ ತಂಡ ಗಳಿಸಿದೆ.

ಸಮಾಧಾನಕರ ಬಹುಮಾನವನ್ನು ರೋಟರಿ ಪಿ.ಯು ಕಾಲೇಜು, ಸ.ಹಿ.ಪ್ರಾ ಶಾಲೆ ಕಾಂತಮಂಗಲ,ರಂಗ ಮಯೂರಿ ಕಲಾ ಶಾಲೆ, ಸುಳ್ಯ, ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು, ಕೆ.ವಿ.ಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲಾ ತಂಡಗಳು  ಪಡೆದುಕೊಂಡಿದೆ.

ಎಲ್ಲಾ ವಿಜೇತ ತಂಡಗಳಿಗೆ ಜನವರಿ 03 ರಂದು ನಡೆಯುವ ಸೇವಾ ಸಂಗಮದ ದಶಮಾನೋತ್ಸವ ಕಾರ್ಯಕ್ರಮದಲ್ಲಿ  ಬಹುಮಾನ ವಿತರಿಸಲಾಗುವುದು.

ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಮುಂದುವರಿಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading