Ad Widget

ಅಪಾಯಕಾರಿ ಮರ ತೆರವಿಗೆ ಆದೇಶ – ಸತ್ಯಶಾಂತಿ ತ್ಯಾಗಮೂರ್ತಿ ಮನವಿಗೆ ಸ್ಪಂದಿಸಿದ ಇಲಾಖೆ

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಸಮೀಪ, ಜಾಲ್ಸೂರು–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೃಹತ್ ಗಾತ್ರದ ಅಪಾಯಕಾರಿ ಮರವೊಂದನ್ನು ತೆರವುಗೊಳಿಸುವ ಕುರಿತು ಕಳೆದ ಎರಡು ವರ್ಷಗಳಿಂದ ಸತ್ಯಶಾಂತಿತ್ಯಾಗಮೂರ್ತಿ ಸೋಣಂಗೇರಿಯವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಪತ್ರವ್ಯವಹಾರ ನಡೆಸಿ, ಸ್ಥಳ ಪರಿಶೀಲನೆಗೂ ಮನವಿ ಮಾಡಿಕೊಂಡಿದ್ದರು.ಸ್ಥಳ ಪರಿಶೀಲನೆ ನಡೆಸಿದ ನಂತರ, ಅರಣ್ಯ ಇಲಾಖೆ ಅಧಿಕಾರಿಗಳು ಆ ಮರವನ್ನು ಅಪಾಯಕಾರಿ ಎಂದು ಗುರುತಿಸಿ, ತೆರವುಗೊಳಿಸಲು ಅಧಿಕೃತ ಆದೇಶವನ್ನು ನೀಡಿದ್ದಾರೆ. ಮರದ ಕೆಳಭಾಗದಲ್ಲಿ ವಿದ್ಯುತ್ ಸಂಪರ್ಕ ತಂತಿಗಳು ಹಾದು ಹೋಗುತ್ತಿದ್ದು, ಪ್ರತಿದಿನ ನೂರಾರು ವಾಹನಗಳು ಹಾಗೂ ಪಾದಚಾರಿಗಳು ಈ ರಸ್ತೆಯನ್ನು ಉಪಯೋಗಿಸುವ ಹಿನ್ನೆಲೆ, ಯಾವುದೇ ರೀತಿಯ ದೊಡ್ಡ ಅನಾಹುತ ಸಂಭವಿಸದಂತೆ ಮುಂಗಾವಲು ಕ್ರಮವಾಗಿ ಮರ ತೆರವುಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸತ್ಯಶಾಂತಿತ್ಯಾಗಮೂರ್ತಿಯವರು ತಮ್ಮ ಮನವಿಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ  ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading