Ad Widget

ಪುತ್ತೂರು : ಪತ್ರಕರ್ತರಿಗಾಗಿ “ಜೈ” ಸಿನೆಮಾದ ವಿಶೇಷ ಪ್ರದರ್ಶನ

ಪುತ್ತೂರಿನಲ್ಲಿ ನವೆಂಬರ್ 26ರಂದು ಬುಧವಾರ ಮಧ್ಯಾಹ್ನ 1 ಗಂಟೆ 15 ನಿಮಿಷಕ್ಕೆ ತುಳು ಸಿನಿಮಾ “ಜೈ” ಯ ವಿಶೇಷ ಪ್ರದರ್ಶನ ಅತ್ಯಂತ ಭವ್ಯವಾಗಿ ಆಯೋಜಿಸಲಾಯಿತು.

ಈ ವಿಶೇಷ ಪ್ರದರ್ಶನಕ್ಕೆ MG Motors Mangalore ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ಹಾಗೂ ಮಡಿಕೇರಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಈ ಶೋ ನಿಗದಿಪಡಿಸಲಾಯಿತು.

ಪತ್ರಕರ್ತರ ಸೇವೆಯನ್ನು ಗೌರವಿಸುವ ಉದ್ದೇಶದಿಂದ, ಮಾಧ್ಯಮ ಪ್ರತಿನಿಧಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಕಾರ್ಯಕ್ರಮಕ್ಕೆ ಅದ್ದೂರಿಯ ವಾತಾವರಣವನ್ನು ನೀಡಿತು.

ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಜಯ್ ಪುರುಷೋತ್ತಮ್ ಶೆಟ್ಟಿ ಹಾಗೂ “ಜೈ” ಚಿತ್ರದ ನಾಯಕ ನಟ ರೂಪೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಿನಿಮಾ ತಂಡ ಹಾಗೂ ಪ್ರಾಯೋಜಕರು ಪತ್ರಿಕಾ ವಲಯದ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading