Ad Widget

ಕವನ : ಕಾಲವದು ತಲೆಕೆಳಗಾಗಿದೆ-ಸಮಯವದು ಸೂತ್ರವ ತಪ್ಪಿದೆ… ; ಭೂಮಿಯು ಬದಲಾವಣೆಯ ಬಯಸಿದೆ…!? – ✍️ಉಲ್ಲಾಸ್ ಕಜ್ಜೋಡಿ

ಕಾಲವದು ತಲೆಕೆಳಗಾಗಿದೆ, ಚಳಿಗಾಲ ಮಳೆಗಾಲವಾಗಿದೆ…
ದೀಪಾವಳಿ ಹಬ್ಬವು ಕಳೆದಿತ್ತು, ಇನ್ನೇನು ಚಳಿಗಾಲ ಶುರುವಾಗಲೆಬೇಕಿತ್ತು, ಆದರೆ ಮಳೆಗಾಲ ಹೊರಟು ಹೋಗಲು ಒಲ್ಲೇ ಎನ್ನುತ್ತಿತ್ತು, ಚಳಿಗಾಲವದು ಯಾಕೋ ದೂರವೇ ಉಳಿದಿತ್ತು…
ಸಮಯವದು ಸೂತ್ರವ ತಪ್ಪಿದೆ, ಕಾಲವದು ತಲೆಕೆಳಗಾಗಿದೆ…
ಮನುಷ್ಯನ ಬದುಕಿನ ದುರಾಸೆಯು ಈಗ ಮಿತಿಯನ್ನು ಮೀರಿದೆ, ಪರಿಸರದ ನಿಯಮವ ಮೀರಿ ಮನುಜನ ಯೋಚನೆಯು ಸಾಗಿದೆ, ದೂರಾಲೋಚನೆಯು ಸಾಗಿದೆ…
ಕಾಲ-ಕಾಲಕ್ಕೆ ಮಳೆ-ಬೆಳೆಯಾಗುವ ಕಾಲವು ಇಂದು ಕಾಣೆಯಾಗಿದೆ, ನಾವು ಬೆಳೆದ ಬೆಳೆಗಳೇ ಇಂದು ನಮ್ಮ ಕೈಗೆ ಸಿಗದಂತಾಗಿದೆ, ಭೂಕಂಪ-ಪ್ರಳಯ-ಸುನಾಮಿ ಎಲ್ಲಾ ಈಗೀಗ ಹೆಚ್ಚಾಗಿದೆ…
ಮನುಜನ ಮನಸ್ಸಿನ ಸ್ವಾರ್ಥವು ಈಗ ಮಿತಿಯನ್ನು ಮೀರಿದೆ, ಆ ಮಿತಿಯ ಕಲಿಸಲು ಈ ಭೂಮಿಯು ಈಗ ಬದಲಾವಣೆಯ ಬಯಸಿದೆ…
ಸೂರ್ಯನ ಬೆಳಕಿಗೂ ಪರ್ಯಾಯವ ಹುಡುಕುವ ಪ್ರಯತ್ನವೂ ನಡೆಯುತ್ತಿದೆ, ಚಂದ್ರನ ಅಂಗಳವ ನಾವು ಎಂದೋ ತಲುಪಿಯಾಗಿದೆ, ಭೂಮಿಯ ಎಲ್ಲಾ ನಿಯಮಗಳ ಮೀರಿ ಮನುಜನ ಸ್ವಾರ್ಥವದು ಸಾಗಿದೆ…
ವರ್ಷವಿಡೀ ನಮ್ಮ ಸ್ವಾರ್ಥಕ್ಕೆ ನೂರಾರು ಮರಗಳ ಕಡಿಯುವವರು ನಾವು, ಪರಿಸರ ದಿನದಂದು ಒಂದು ಗಿಡವ ನೆಟ್ಟು ಪರಿಸರ ಸಂರಕ್ಷಣೆ ಮಾಡುವವರು ನಾವು…
ಪ್ರತಿದಿನವೂ ಎಲ್ಲೆಂದರಲ್ಲಿ ಕಸಗಳ ಹಾಕುವವರು ನಾವು, ಸ್ವಚ್ಛತಾ ದಿನದಂದು ಒಂದೆರಡು ಕಸಗಳ ಹೆಕ್ಕಿ ಸ್ಟೇಟಸ್ಸು ಹಾಕುವವರು ನಾವು…
ನಮ್ಮ ಸ್ವಾರ್ಥಕ್ಕೆ ಪ್ರತಿದಿನ ಭೂಮಿಯನ್ನು ಹಾಳುಗೆಡವುವವರು ನಾವು, ಪರಿಸರವನ್ನು ನಾಶಮಾಡುವವರು ನಾವು…
ಸರಿ-ತಪ್ಪುಗಳ ತಿಳಿಯುವ ಹೊತ್ತಿಗೆ ಸಮಯವದು ಸರಿದು ಹೋಗಿದೆ, ಕಾಲವದು ಸೂತ್ರವನು ತಪ್ಪಿದೆ…
ನಾವುಗಳೇ ತೋಡಿದ ಗುಂಡಿಗೆ ನಾವಿಂದು ಬಿದ್ದಂತಾಗಿದೆ, ಅತಿಯಾದರೆ ಅಮೃತವೂ ವಿಷವೆಂಬ ಮಾತಿಂದು ನಿಜವಾಗಿದೆ…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading