Ad Widget

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಚಿಂತನಾ ಸಭೆ ; ಪಶ್ಚಿಮ ಘಟ್ಟಕ್ಕೂ ಗ್ರಾಮೀಣ ಪ್ರದೇಶಕ್ಕೂ ಗಡಿ ಗುರುತು ಮಾಡುವಂತೆ ಸುಳ್ಯ, ಕಡಬ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಹಕ್ಕೊತ್ತಾಯ ಸಭೆ ನಡೆಸಲು ತೀರ್ಮಾನ

ಸುಬ್ರಹ್ಮಣ್ಯ ಅಕ್ಟೋಬರ್ 09: ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಅ.09ರಂದು ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿರವರ ಅಧ್ಯಕ್ಷತೆಯಲ್ಲಿ   “ರೈತರ ಕೃಷಿ ಭೂಮಿಗೆ ಅರಣ್ಯ ಇಲಾಖೆಯ ತೊಂದರೆ”ಯನ್ನು ಪ್ರಮುಖವಾಗಿ ಇಟ್ಟುಕೊಂಡು ಚಿಂತನ ಸಭೆ ನಡೆಯಿತು.
ವೇದಿಕೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ಆಶೋಕ್ ಮೂಲೆಮಜಲು, ರಮಾನಂದ ಎಣ್ಣೆಮಜಲು, ಈಶ್ವರ ಅರಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಹಲವಾರು ರೈತರು ಭಾಗವಹಿಸಿದ್ದರು.
ಚಿಂತನಾ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಈ ರೀತಿ ಇವೆ : ಪಶ್ಚಿಮ ಘಟ್ಟಕ್ಕೂ ಗ್ರಾಮೀಣ ಪ್ರದೇಶಕ್ಕೂ ಗಡಿ ಗುರುತು ಮಾಡುವುದು, ರೈತರ ಸ್ವಾದೀನದಲ್ಲಿರುವ ಮನೆ-ಕೃಷಿ ಮತ್ತಿತರರ ಎಲ್ಲಾ ಭೂಮಿಗಳಿಗೆ ಹಕ್ಕು ಪತ್ರ ಕೊಡುವಂತೆ, ಕಾಡು ಪ್ರಾಣಿಗಳಿಂದ ಕೃಷಿಕರನ್ನು ಮತ್ತು ಕೃಷಿ ಭೂಮಿಯನ್ನು ರಕ್ಷಿಸಲು ಕೋವಿ ಪರವಾನಿಗೆ ನೀಡುವಂತೆ, ಅರಣ್ಯ ವಿಸ್ತರಿತ ಭೂಮಿಯನ್ನು ಕಾದಿರಿಸುವ ಮುಂಚಿತವಾಗಿ ರೈತರ ಮೂಲಭೂತ ಸೌಕರ್ಯಗಳ ಭೂಮಿ ಕಾದಿರಿಸಿದ ನಂತರ ಅರಣ್ಯ ಸಂರಕ್ಷಣೆ ಯೋಜನೆ ರೂಪಿಸುವಂತೆ, ಅರಣ್ಯ ಇಲಾಖೆಗೆ ಬರುವ ಪರಿಸರ ಸಂರಕ್ಷಣೆಯ ಅಭಿವೃದ್ಧಿಗೆ ಬರುವ ಸರ್ಕಾರದ ಅನುದಾನಗಳನ್ನು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುಷ್ಠಾನ ಮಾಡುವಂತೆ ನಿರ್ಣಯಿಸಲಾಯಿತು.
ಜಾಗವನ್ನು ಜಂಟಿ ಸರ್ವೆ ನಡೆಸಿ ಭಾಗಶಃ ಅರಣ್ಯ ಬರುವ ಸಮಸ್ಯೆ ಬಗೆಹರಿಸಿ, ಪ್ಲಾಟಿಂಗ್ ಆಗದ ಜಾಗವನ್ನು ಪ್ಲಾಟಿಂಗ್ ಮಾಡಿಸಿಕೊಡಬೇಕು. ಅಷ್ಟೇ ಅಲ್ಲದೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ನವಂಬರ್ 15ರಂದು ಹಕ್ಕೊತ್ತಾಯ ಸಭೆ ನಡೆಸುವುದು, ಅಲ್ಲಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿ ಸ್ಪಂದಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಸುವಾಗಿ ನಿರ್ಣಯಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading