Ad Widget

ಬೆಳ್ಳಾರೆ : 38ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಂಪನ್ನ

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ ವತಿಯಿಂದ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವವು ವಿಜೃಂಭಣೆಯಿಂದ ಅ.02ರಂದು ಬೆಳ್ಳಾರೆ ಮೇಲಿನ ಪೇಟೆ ಅಚಲಾಪುರ ಕಟ್ಟೆಯಲ್ಲಿ ಜರುಗಿತು.
ಬೆಳಿಗ್ಗಿನಿಂದ ಸಂಜೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ‌ ಕಾರ್ಯಕ್ರಮ ನಡೆಯಿತು.
ಸಂಜೆ ವಾಹನಗಳಿಗೆ ಪೂಜೆ ನಡೆಯಿತು.
ಮುಸ್ಸಂಜೆ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ ಜನ ಮುಗಿ ಬೀಳುವಂತೆ ಮಾಡಿತು. ಸ್ನೇಹಾಂಜಲಿ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ದೇವರ ಮೂರ್ತಿ ತಯಾರಕ ಐತ್ತ ಪಾಟಾಜೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾತ್ರಿ 10 ಘಂಟೆಗೆ ಆರಂಭಗೊಂಡ ವೈಭವದ ಶೋಭಾಯಾತ್ರೆಯಲ್ಲಿ ಫ್ರೆಂಡ್ಸ್ ಟೈಗರ್ಸ್ ಬೆಳ್ಳಾರೆ ವತಿಯಿಂದ 9ನೇ ವರುಷದ ಹುಲಿವೇಷ ಕುಣಿತ,
ಶ್ರೀ ಗೋಪಾಲಕೃಷ್ಣ ಗೊಂಬೆ ಬಳಗ ಇವರ ಗೊಂಬೆ ಕುಣಿತ ಪ್ರದರ್ಶನ ನಡೆದು ಭಕ್ತಿಯ ಭಾವ ಸಾಗರದಲ್ಲಿ ತೇಲಾಡಿಸಿತು.
ರಾತ್ರಿ ಬೆಳ್ಳಾರೆ ಗೌರಿ ಹೊಳೆಯಲ್ಲಿ ಶ್ರೀ ಶಾರದಾ ದೇವಿಯ ವಿಗ್ರಹವನ್ನು ಜಲ ಸ್ಥಂಬನ ಮಾಡಲಾಯಿತು. ಪ್ರದೀಪ್ ಕುಮಾರ್ ರೈ ಪನ್ನೆಯವರು ಆಗಮಿಸಿದ್ದ ಭಕ್ತಾದಿಗಳಿಗೆ ಧನ್ಯವಾದ ಸಲ್ಲಿಸಿದರು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading