Ad Widget

ಇಂದು(ಅ.02) ವಿಶ್ವದಾದ್ಯಂತ ಬಿಡುಗಡೆಗೊಂಡ “ಕಾಂತಾರ ಚಾಪ್ಟರ್ 1” ಸಿನಿಮಾದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರದ “ಮಿಥುನ್ ಕುಮಾರ್ ಸೋನ”

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿ ರವರು ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ಬಹುನಿರೀಕ್ಷಿತ “ಕಾಂತಾರ ಚಾಪ್ಟರ್ 01” ಸಿನಿಮಾ ಇಂದು(ಅ.02) ವಿಶ್ವದಾದ್ಯಂತ ಏಳು ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು, ಮೊದಲ ದಿನವೇ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ “ಮಿಥುನ್ ಕುಮಾರ್ ಸೋನ” ರವರು “ರಾಜವೈದ್ಯ”ರ ಪಾತ್ರದಲ್ಲಿ ಅಭಿನಯಿಸಿದ್ದು, ಮಿಥುನ್ ರವರೇ ಹೇಳಿದಂತೆ ಅವರು ಸಿನಿಮಾದಲ್ಲಿ ಮೂರ್ನಾಲ್ಕು ಬಾರಿ ಕಾಣಸಿಗುತ್ತಾರೆ. ಇವರು ಸೋಣಂಗೇರಿ ನಡುಮನೆ ಕುಟುಂಬದ ಎಸ್.ಎನ್ ಮಹಾಬಲೇಶ್ವರ ಗೌಡ ಹಾಗೂ ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರ. ಒಟ್ಟಿನಲ್ಲಿ ಬಾಲ್ಯದಿಂದಲೇ ನಟನಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದ ಗ್ರಾಮೀಣ ಭಾಗದ ಯುವಕನೊಬ್ಬ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡ ಬಹುದೊಡ್ಡ ಸಿನಿಮಾದಲ್ಲಿ ನಟಿಸಿರುವುದು ಹೆಮ್ಮೆಯ ವಿಷಯವೇ ಸರಿ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading