Ad Widget

ಪ್ರಜಾಧ್ವನಿ ಕರ್ನಾಟಕ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಅಶೋಕ್‌ ಎಡಮಲೆ ಆಯ್ಕೆ

ಪ್ರಜಾಧ್ವನಿ ಕರ್ನಾಟಕ ಇದರ ಸಭೆಯು ಸೆ.15ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎ. ಕೆ. ಇಬ್ರಾಹಿಂ ವಹಿಸಿದ್ದರು.
ಸಾಹುಕಾರ್ ಆಶ್ರಫ್ ಸ್ವಾಗತಿಸಿ, ಆಶೋಕ್ ಎಡಮಲೆ ಸಂವಿಧಾನ ಪೀರಿಕೆ ವಾಚಿಸಿದರು.
ಲೂಕಾಸ್ ಟಿ. ಐ. ಪ್ರಜಾಧ್ವನಿ ಸಂಘಟನೆಯ ಬೈಲಾವನ್ನು ಮಂಡಿಸಿದರು.
ಬೈಲಾದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಅಂತಿಮವಾಗಿ ಕೇಂದ್ರ ಸಮಿತಿಯವರಿಗೆ ಜವಾಬ್ದಾರಿ ವಹಿಸಲಾಯಿತು.
ಪ್ರಜಾಧ್ವನಿ ಕರ್ನಾಟಕ ಇದರ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಎಡಮಲೆ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಪ್ರವೀಣ್ ಮುಂಡೋಡಿ, ಜೂಲಿಯಾ ಕ್ರಾಸ್ತ, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಪ್ರ. ಕಾರ್ಯದರ್ಶಿಯಾಗಿ ವಸಂತ ಪೆಲ್ತಡ್ಕ, ಜತೆ ಕಾರ್ಯದರ್ಶಿಗಳಾಗಿ ಸಾಹುಕಾರ್ ಅಶ್ರಫ್, ಲೂಕಾಸ್ ಟಿ.ಐ, ಪ್ರಮೀಳ ಪೆಲ್ತಡ್ಕ ಕೋಶಾಧಿಕಾರಿಯಾಗಿ ಎ.ಕೆ.ಇಬ್ರಾಹಿಂ, ಕಾನೂನು ಸಲಹೆಗಾರರಾಗಿ ಕೆ.ಪಿ.ಮೋಹನ್ ಕಡಬ, ಮಾಧ್ಯಮ ವಕ್ತಾರರಾಗಿ ಮಹೇಶ್ ಬೆಳ್ಳಾರ್ಕರ್, ಭರತ್ ಕುಕ್ಕುಜಡ್ಕ, ಕಾರ್ಯಕಾರಿ ಸಮಿತಿ ಸದಸ್ಯಯಗಳಾಗಿ ದಿವಾಕರ ಪೈ, ಮಹಮ್ಮದ್ ಕುಂಜಿ ಗೂನಡ್ಕ, ಲಕ್ಷ್ಮೀಶ ಗಬ್ಲಡ್ಕ, ಮೋನಪ್ಪ ಕೊಲ್ಲಮೊಗ್ರ, ಕೆ.ಪಿ.ಜಾನಿ, ಶಿವಶಂಕರ್, ಗೌರವ ಸಲಹೆಗಾ ರರಾಗಿ ಗೋಪಾಲ ಪೆರಾಜೆ, ಪ್ರಜಾಧ್ವನಿ ನ್ಯೂಸ್ ಪೋರ್ಟಲ್ ನಿರ್ವಾಹಕರಾಗಿ ಹರ್ಷಕುಮಾರ್ ಸುಳ್ಯ ಆಯ್ಕೆಯಾದರು.
ಸಭೆಯಲ್ಲಿ ಪಿ.ಸಿ.ಜಯರಾಮ, ಚೇತನ್ ಕಜೆಗದ್ದೆ, ಶಮೀರ್ ತಾಜ್ ಕಲ್ಲುಗುಂಡಿ ಮೊದಲಾದವರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading