Ad Widget

ಎಲಿಮಲೆ : ಜ್ಞಾನದೀಪ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ


ವಿದ್ಯಾಭಾರತಿ ಕರ್ನಾಟಕ ಹಾಗೂ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇದರ ಆಶ್ರಯದಲ್ಲಿ ನಡೆದ ರಾಜ್ಯ ಹಾಗೂ ಕ್ಷೇತ್ರಿಯ ಮಟ್ಟದ ಕಬಡ್ಡಿ ಪಂದ್ಯಾಟದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಸದಸ್ಯರಾಗಿ ಉತ್ತಮ ಪ್ರದರ್ಶನವನ್ನು ನೀಡಿ ಬಲಿಷ್ಠ ಬೆಳಗಾವಿ, ತಮಿಳುನಾಡು ತಂಡಗಳನ್ನು ಮಣಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾದ ಜ್ಞಾನದೀಪ ಎಲಿಮಲೆ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಗಳಾದ ತೃಷಾ. ಎಂ.ಸಿ. ಹಾಗೂ ಹಾಗೂ ಲಕ್ಷ್ಯ ಕಡಪಳ ಇವರು ಆಂಧ್ರಪ್ರದೇಶದಲ್ಲಿ ನಡೆಯಲಿರುವ ಅಖಿಲ ಭಾರತೀಯ ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.

. . . . . . . . .

ತೃಷಾ ಎಂ.ಸಿ‌. ಇವರು ಮಡಪ್ಪಾಡಿ ಮನೆ ಚಿದಾನಂದ ಹಾಗೂ ಶೈಲಾ ದಂಪತಿಗಳ ಪುತ್ರಿ. ಲಕ್ಷ್ಯ ಕಡಪಳ ಇವರು ದೇವಚಳ್ಳ ಗ್ರಾಮದ  ಅಡ್ಡನಪಾರೆ ಕಡಪಳ ಹರೀಶ್ ಹಾಗೂ ರೂಪ ದಂಪತಿಗಳ ಪುತ್ರಿ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading