Ad Widget

ಕವನ : ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳೋಣ…

ಇಂದು ವಿದ್ಯಾರ್ಥಿಗಳ ಕೊರತೆಯಿಂದ ನಮ್ಮ ಕಣ್ಣೆದುರೇ ಮುಚ್ಚಿ ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿ ಬೆಚ್ಚಗೆ ಕುಳಿತಿರುವೆವು ನಾವು ಪ್ರಬುದ್ಧ ಮನಸ್ಸಿನ ಬುದ್ಧಿಜೀವಿಗಳು…
ಒಂದೇ ಒಂದು ಸಲ ಬದುಕಿನಲ್ಲಿ ಸ್ವಲ್ಪ ಹಿಂದೆ ಹೋಗಿ ನೆನಪಿಸಿಕೊಳ್ಳೋಣ, ಹತ್ತು-ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ನಾವೂ ಕೂಡ ಅಂತಹುದೇ ಒಂದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು…
ನಾವಿಂದು ಬದುಕಿನಲ್ಲಿ ಇಷ್ಟೊಂದು ಪ್ರಬುದ್ಧರಾಗಲು, ಸಮಾಜದಲ್ಲಿ ಇಷ್ಟೊಂದು ಘನತೆ-ಗೌರವಗಳನ್ನು ಸಂಪಾದಿಸಿ ತಲೆ ಎತ್ತಿ ನಡೆದಾಡಲು ಕಾರಣವೇ ನಮಗಂದು ನಿಸ್ವಾರ್ಥತೆಯಿಂದ ವಿದ್ಯೆಯನ್ನು ಧಾರೆಯೆರೆದ ಇಂದು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಸ್ಥಿತಿಗೆ ಬಂದು ತಲುಪುತ್ತಿರುವ ಅದೇ ಸರ್ಕಾರಿ ಶಾಲೆಗಳು ಹಾಗೂ ಅಲ್ಲಿನ ಗುರುಗಳು…
ಆದ್ದರಿಂದ ನಮ್ಮಲ್ಲಿ ಕಿಂಚಿತ್ತಾದರೂ ಕೃತಜ್ಞತೆಯ ಭಾವನೆಯೆಂಬುದು ಇದ್ದರೆ, ನಾವು ಮನುಷ್ಯರು ಎಂಬುವುದು ನಿಜವೇ ಆಗಿದ್ದರೆ “ನಮ್ಮ ಬದುಕನ್ನು ರೂಪಿಸಿದ ಸರ್ಕಾರಿ ಶಾಲೆಗಳನ್ನು ನಾವು ಉಳಿಸಿಕೊಳ್ಳೋಣ-ನಮ್ಮೂರಿನ ಶಾಲೆಯೊಂದಿಗೆ, ನಮ್ಮ ಶಾಲೆಯೊಂದಿಗೆ ನಾವು ಸದಾ ನಿಲ್ಲೋಣ…”✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading