Ad Widget

ಅಡ್ಕಾರು : ಪಾಳು ಬಿದ್ದಿದ್ದ ಹಿಂದೂ ರುದ್ರಭೂಮಿಗೆ ಮುಕ್ತಿ – ಸ್ವಚ್ಚತಾ ಕಾರ್ಯ ನಡೆಸಿದ ನವಚೇತನ ಯುವಕ ಮಂಡಲದ ಸದಸ್ಯರು

ನವಚೇತನ ಯುವಕಮಂಡಲ(ರಿ) ಬೊಳುಬೈಲು ಮತ್ತು ಗ್ರಾಮ ಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ಆಡ್ಕಾರು ಕೋನಡ್ಕ ಪದವು ಎಂಬಲ್ಲಿರುವ ಮುಕ್ತಿಧಾಮದ (ಹಿಂದೂ ರುದ್ರಭೂಮಿ) ಸ್ವಚ್ಚತಾ ಕಾರ್ಯ ಸೆ.07 ರಂದು ನಡೆಸಲಾಯಿತು.

. . . . . . . . .

2020ರಲ್ಲಿ  ಗ್ರಾಮ ಪಂಚಾಯತ್ ನ ನರೇಗಾ ಯೋಜನೆಯಿಂದ ಮುಕ್ತಿದಾಮವು ನಿರ್ಮಾಣಗೊಂಡಿತ್ತು. ಹಲವಾರು ಶವಗಳಿಗೆ ಮುಕ್ತಿಯನ್ನು ನೀಡಿದ್ದ ಧಾಮವು  ನಂತರದ ದಿನಗಳಲ್ಲಿ  ನಿರ್ವಹಣೆಯಿಲ್ಲದೆ ಪಾಳು ಬಿದ್ದ ಪರಿಣಾಮವಾಗಿ ಇಲ್ಲಿ ಶವಗಳನ್ನು ಸುಡುತ್ತಿರಲಿಲ್ಲ. ಪಕ್ಕದ ಸುಳ್ಯಕ್ಕೆ ಬಾಡಿಗೆ ನೀಡಿ ಅಂಬ್ಯುಲೆನ್ಸ್ ಮೂಲಕ ತೆಗೆದುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ನವಚೇತನ ಯುವಕಮಂಡಲ ಬೊಳುಬೈಲು  ಗ್ರಾಮ ಪಂಚಾಯತ್ ಸಹಯೋಗದೊಂದಿಗೆ  ಸ್ವಚ್ಚತಾ ಕಾರ್ಯ ನಡೆಸಿದೆ.

. . . . . . .

ವಾರ್ಡನ ಸದಸ್ಯರಾದ ಸಂಧ್ಯಾ ವಾಗ್ಲೆ , ಅಡ್ಕಾರು ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಹರಿಪ್ರಕಾಶ್ ಆಡ್ಕಾರು, ಪಿಡಬ್ಲ್ಯೂಡಿ ಗುತ್ತಿಗೆದಾರ ಉದಯ್ ವಾಗ್ಲೆ ಆಡ್ಕಾರು, ಗೋಪಾಲ ಬೈಲು ಸ್ಥಳಕ್ಕೆ ಆಗಮಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಗುತ್ತಿಗೆದಾರ ಉದಯ ವಾಗ್ಲೆ ಹಾಗೂ ಅಡುಗೆ ತಯಾರಿಯಲ್ಲಿ  ಕಾಟೂರು ಶಿವರಾಮ ಗೌಡ ದಂಪತಿಗಳು ಸಹಕರಿಸಿದರು.

ಶ್ರಮದಾನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಆಡ್ಕಾರು ಬೈಲು, ಯುವಕ ಮಂಡಲದ ಪೂರ್ವಧ್ಯಕ್ಷರಾದ ದಯಾನಂದ ಪಿಲಿಕೊಡಿ, ಜಯಪ್ರಕಾಶ್ ಬೈತಡ್ಕ, ನಿತಿನ್ ಆರ್ಭಡ್ಕ, ಭುವನ್ ಬೊಳುಬೈಲು, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಕಾಟೂರು, ಕಾರ್ಯದರ್ಶಿ ಚಿತ್ತರಂಜನ್ ಕಾಟೂರು, ಸದಸ್ಯರುಗಳಾದ  ಪ್ರವೀಣ್ ಕಾಟೂರು, ರಂಜಿತ್ ಕಾಟೂರು, ದೀಪಕ್ ಕಾಯರಡ್ಕ, ಯಕ್ಷಿತ್ ಆರ್ಭಡ್ಕ, ಮೋಕ್ಷಿತ್ ಆರ್ಭಡ್ಕ, ಜಶ್ವಿತ್ ಕಾಟೂರು, ಪ್ರಜ್ವಿನ್ ಕಾಟೂರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading