Ad Widget

ಬೆಳ್ಳಾರೆ : ಈದ್ ಮೀಲಾದ್ ಅಂಗವಾಗಿ ವಿವಿಧ ಕಾರ್ಯಕ್ರಮ ಆರಂಭ

Advt ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಸಂಪರ್ಕಿಸಿ : ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ ಹಾಗೂ ಸಭೆ ಸಮಾರಂಭಗಳನ್ನು ನೇರ ಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ
ಮೊ: 9449387044

. . . . . . . . .


ಝಕರಿಯ ಜುಮುಅ: ಮಸೀದಿ ಬೆಳ್ಳಾರೆ ಇದರ ವತಿಯಿಂದ ಈದ್ ಮೀಲಾದ್ ಅಂಗವಾಗಿ ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದರಸದ ವಠಾರದಲ್ಲಿ ದ ಅಲ್ ಮವಾಹಿಬ್ ಟ್ಯಾಲೆಂಟ್ ಸ್ಕ್ವೇರ್ ಕಾರ್ಯಶೈಲಿಗಳು ಸೆ 3, 4 ,5 ರ ವರೆಗೆ ನಡೆಯಲಿದ್ದು ಇದರ ಉದ್ಘಾಟನೆ ಸೆ 3 ರಂದು ಸಂಜೆ ನಡೆಯಿತು.

ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಖತೀಬರಾದ ಬಹು:ನಸೀಹ್ ದಾರಿಮಿ ಪ್ರಾರ್ಥನೆ ನೆರವೇರಿಸಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಝಕರಿಮ ಜುಮುಅ: ಮಸೀದಿ ಕಮಿಟಿ ಅಧ್ಯಕ್ಷರಾದ ಹಾಜಿ ಅಬೂಬಖರ್ ಮಂಗಳ ವಹಿಸಿದ್ದರು. ವೇದಿಕೆಯಲ್ಲಿ ಝೈನುದ್ದೀನ್ ಮುಸ್ಲಿಯಾರ್, ಮಸೀದಿ ಕಮಿಟಿ ಉಪಾಧ್ಯಕ್ಷರಾದ ಅಬ್ದುಲ್ ಖಾದಿರ್ ಹಾಜಿ ಬಾಯಂಬಾಡಿ,ಮಸೀದಿ ಕಮಿಟಿ ಪ್ರಧಾನ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಸದಸ್ಯರಾದ ಬಶೀರ್ ಕೆ.ಎ,ಹಮೀದ್ ಅಲ್ಫಾ,ಜಮಾಅತ್ ಪ್ರಮುಖರಾದ ನಝೀರ್ ಬಿಝ್, ಆರೀಫ್ ಬಿ.ಎಂ ಬೆಳ್ಳಾರೆ ಉಪಸ್ಥಿತರಿದ್ದರು. ಬಹು:ಮುಹಮ್ಮದ್ ನವವಿ ಮುಂಡೋಳೆ ಸ್ವಾಗತಿಸಿದರು. ಬಹ್ಜತು ತುಲಬ ದರ್ಸ್ ಬೆಳ್ಳಾರೆ, ಹಿದಾಯತುಲ್ ಇಸ್ಲಾಂ ಹಯರ್ ಸೆಕೆಂಡರಿ ಮದರಸ ಮತ್ತು ಹಿದಾಯ ಅರೆಬಿಕ್ ಮದರಸ ಬೆಳ್ಳಾರೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಈ ದರ್ಸ್ ನಲ್ಲಿ ಮದರಸಗಳ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ. 22 ವಿಭಾಗಗಳು ಇದ್ದು, 100 ಸ್ಪರ್ಧೆಗಳು ನಡೆಯಲಿದ್ದು 280 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿ ಖಿರಾಅತ್, ಹಾಡು, ಭಾಷಣ, ಮೇಕಪ್, ದಫ್, ಸ್ಕೌಟ್, ಬುರ್ದಾ, ಮೌಲಿದ್, ಮಾಲೆಪ್ಪಾಟ್, ಕ್ವಿಝ್, ಮಸ್ಟೆರ್ ಹಂಟ್, ಬ್ರೈನ್ ಹಂಟ್, ಫಿರಮಿಡ್, ಬಿಲ್ಡಿಂಗ್, ಡ್ರಾಯಿಂಗ್, ಕ್ಯಾಲಿಗ್ರಫಿ, ಪೊಸ್ಟೆರ್ ಮೇಕಿಂಗ್, ಕೊಲಾಶ್, ಕುರುನ್ನು ಟೆಸ್ಟ್, ನ್ಯಾನೋ ಅಟ್ರೇಚರ್, ನ್ಯೂಸ್ ರೀಡಿಂಗ್ ಮುಂತಾದ ಶೈಲಿಗಳಲ್ಲಿ ಸ್ಪರ್ಧೆಗಳು ಇರಲಿವೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading