Ad Widget

ಗಾಂಧಿನಗರ ಕೆ.ಪಿ.ಎಸ್ ನ ಪಿ.ಯು ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ಗಾಂಧಿನಗರ ಕೆ.ಪಿ.ಎಸ್ ನ ಪಿಯು ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ| ಅನುರಾಧಾ ಕುರಂಜಿಯವರು “ದುಶ್ಚಟಕ್ಕೆ ಬಲಿಯಾಗಿ ಅನುಭವಿಸುವ ಕಷ್ಟ ನಷ್ಟಗಳು ಮತ್ತು ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಇದರಿಂದ ಆಗುವ ಸಮಸ್ಯೆಗಳನ್ನು” ವಿವರವಾಗಿ ತಿಳಿಸಿದರು. “ವಿದ್ಯಾರ್ಥಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ಸಮಾಜಕ್ಕೆ ಉತ್ತಮ ಪ್ರಜೆ ಆಗಬೇಕೆಂದು” ಹಾರೈಸಿದರು.
ಪ್ರಾಂಶುಪಾಲರಾದ ಪರಮೇಶ್ವರಿ ಅವರು ಮಾಹಿತಿ ಮಾರ್ಗದರ್ಶನ ನೀಡಿದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ವಲಯ ಮೇಲ್ವಿಚಾರಕರಾದ ದಿನೇಶ್ ರವರು ಪ್ರಾಸ್ತವಿಕವಾಗಿ ಯೋಜನೆಯ ಹಿನ್ನಲೆ, ಕಾರ್ಯಕ್ರಮದ ಧ್ಯೇಯೋದ್ದೇಶದ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಪಿಯುಸಿ ನಂತರದ ವೃತ್ತಿಪರ ವಿದ್ಯಾಭ್ಯಾಸಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನ ನಿಧಿ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಒಕ್ಕೂಟ ಅಧ್ಯಕ್ಷರಾದ ಮನೋಹರ್.ಕೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯರಾದ ಅನ್ವಿತಾ ಮತ್ತು ವಿನುತಾ ರವರು ಪ್ರಾರ್ಥಿಸಿದರು.
ಶಾಲಾ ಉಪನ್ಯಾಸಕಿ ಪ್ರೇಮ ರವರು ಸ್ವಾಗತಿಸಿದರು.
ಗಾಂಧಿನಗರ ಸೇವಾ ಪ್ರತಿನಿಧಿ ಸೌಜನ್ಯ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading