Ad Widget

ಶಿಕ್ಷಣ ಇಲಾಖೆಯ “ರತ್ನ” ನಿವೃತ್ತ ಸಿಬ್ಬಂದಿ ರತ್ನಾಕರ್ ಕೆ‌. ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ – ಪಾದರಸದಂತಹ ವ್ಯಕ್ತಿತ್ವ ಅವರದ್ದು – ಚಿದಾನಂದ ಯು.ಎಸ್.

ಶಿಕ್ಷಣ ಇಲಾಖೆಯಲ್ಲಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು ಆ. ೩೧ರಂದು ಸೇವಾ ನಿವೃತ್ತರಾದ ರತ್ನಾಕರ್ ಕೆ.ಯವರಿಗೆ ರತ್ನಾಕರ್ ಅಭಿಮಾನಿಗಳ ಬಳಗದಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಆ.೩೦ರಂದು ಸುಳ್ಯ ಸಿ.ಎ. ಬ್ಯಾಂಕ್ ಎ.ಎಸ್‌. ವಿಜಯಕುಮಾರ್‌ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ನಿವೃತ್ತ ಅಧ್ಯಾಪಕ ಚಿದಾನಂದ ಯು.ಎಸ್. ಅಭಿನಂದನಾ ಭಾಷಣ ಮಾಡಿ, ರತ್ನಾಕರ್‌ ಅವರದು ಪಾದರಸದಂತ ವ್ಯಕ್ತಿತ್ವ. ಸಮಸ್ಯೆಗಳು ಎದುರಾದಾಗ ಒತ್ತಡಗಳು ಬಂದಾಗ ಅದನ್ನು ಸಮರ್ಥವಾಗಿ ಪರಿಹರಿಸುವ ಸಾಮರ್ಥ್ಯ ಅವರಲ್ಲಿದೆ. ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಅವರದ್ದಾದರಿಂದ, ದೊಡ್ಡ ಸ್ನೇಹಿತರ ಬಳಗ ಹೊಂದಿದ್ದಾರೆ ” ಎಂದು ಹೇಳಿದರು.

. . . . . . . . .

ಸಮಾರಂಭದಲ್ಲಿ ಮಾತನಾಡಿದ ಎಲ್ಲ ಅತಿಥಿಗಳು ರತ್ನಾಕರ್‌ರ ವ್ಯಕ್ತಿತ್ವವನ್ನು ಶ್ಲಾಸಿದರು.

. . . . . . .

ನಿವೃತ್ತರಾದ ರತ್ನಾಕರ್ ಕೆ. ಹಾಗೂ ಅವರ ಪತ್ನಿ ಶ್ರೀಮತಿ ತೇಜಾವತಿ ಹಾಗೂ ಮಗಳು ಕು.ಯಶ್ಚಿತಾರನ್ನು ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ದಂಪತಿಗಳಿಗೆ ಆರತಿ ಬೆಳಗಿ, ತಿಲಕ ಇಡಲಾಯಿತು. ಬಳಿಕ ಪೇಟ, ಹಾರ ಶಾಲು ಹಾಕಿ ಶ್ರೀಕೃಷ್ಣನ ಕಂಚಿನ ಪ್ರತಿಮೆ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಿ.ಎಂ. ಪೋಷನ್‌ ಅಭಿಯಾನದ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್, ಸುಳ್ಯ ತಾ.ಪಂ. ಇ.ಒ. ರಾಜಣ್ಣ, ಹುಣಸೂರು ತಾಲೂಕು ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಸೋಮವಾರ ಪೇಟೆ ಬಿ.ಇ.ಒ. ಕೃಷ್ಣಪ್ಪ, ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ನಿವೃತ್ತ ಶಿಕ್ಷಣಾಧಿಕಾರಿಗಳಾದ ಕೆಂಪಲಿಂಗಪ್ಪ, ರಮೇಶ್ ಬಿ.ಇ., ಸತೀಶ್, ನಿವೃತ್ತ ಡಿವೈಪಿಸಿ ಎಸ್.ಪಿ.ಶಿವಕುಮಾ‌ರ್, ಪದ್ಮಶ್ರೀ ಪುರಸ್ಕೃತ ಸೋಮಣ್ಣ ಮೈಸೂರು, ಸುಳ್ಯ ಅಕ್ಷರ ದಾಸೋಕ ಸಹಾಯಕ ನಿರ್ದೇಶಕಿ ಶ್ರೀಮತಿ ವೀಣಾ ಎಂ.ಪಿ., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ| ನಿತೀನ್ ಪ್ರಭು ವೇದಿಕೆಯಲ್ಲಿದ್ದರು.

ಪ್ರಮೀಳಾ ರಾಜ್ ಪ್ರಾರ್ಥಿಸಿದರು. ಬಿ.ಇ.ಒ. ಶ್ರೀಮತಿ ಶೀತಲ್ ಯು.ಕೆ. ಸ್ವಾಗತಿಸಿದರು. ಬಿ.ಒ. ಕಚೇರಿಯ ಶಿವಪ್ರಸಾದ್‌ ಕೆ.ವಿ. ರತ್ನಾಕರ್‌ರ ಅಭಿನಂದನಾ ಪತ್ರ ವಾಚಿಸಿದರು. ಶ್ರೀಮತಿ ಆಶಾ ಅಂಬೆಕಲ್ಲು – ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading