Ad Widget

ಅಂಬಟೆಡ್ಕದ ಆಯುರ್ವೇದಿಕ್ ಆಸ್ಪತ್ರೆ ಬಳಿ ಶ್ರೀ ಆಟೋಮೊಬೈಲ್ ಸ್ಪೇರ್ಸ್ ಶುಭಾರಂಭ

ಸುಳ್ಯದ ಅಂಬಟೆಡ್ಕದ ಕೆ.ವಿ.ಜಿ ಆಯುರ್ವೇದಿಕ್ ಆಸ್ಪತ್ರೆ ಬಳಿ  ಶ್ರೀ ಆಟೋಮೊಬೈಲ್ ಸ್ಪೇರ್ಸ್ ಸಂಸ್ಥೆ ಆ.31 ರಂದು ಶುಭಾರಂಭಗೊಂಡಿತು.
ಇಲ್ಲಿ ನಾಲ್ಕು ಚಕ್ರದ ವಾಹನಗಳ ಬಿಡಿಭಾಗಗಳು ಲಭ್ಯವಿರಲಿದೆ.
ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾರೈಸಿದರು.
ಅತಿಥಿಗಳಾಗಿ ನ.ಪಂ. ಸದಸ್ಯರಾದ ಎಂ ವೆಂಕಪ್ಪ ಗೌಡ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್‌, ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಗಿರೀಶ್, ಶ್ರೀಪಾದ ಕನ್ಸಲ್ಟೆನ್ಸಿಯ ಶ್ಯಾಂಪ್ರಸಾದ್ ಎ. ಡಿ, ಸುಮಿತ್ರ ಎಸೋಶಿಯೇಶನ್ ನ ಡಿ.ಎಂ.ಸುಮಿತ್ರ ಇಂಜಿನಿಯರ್, ಗಣೇಶ್ ಪ್ರಿಂಟರ್ ನ ಉಮೇಶ್ ಪಿ.ಕೆ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಬೆಟ್ಟಂಪಾಡಿ, ಮಾಜಿ ಅಧ್ಯಕ್ಷರಾದ ಜನಾರ್ದನ ದೋಳ, ಅರ್.ಅರ್ ಮೋಟಾರ್ಸ್ ನ ಸಂದೀಪ್,  ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ವಿಶ್ವನಾಥ ನೆಲ್ಲಿಬಂಗಾರಡ್ಕ, ಸಾಹೇಬ್ ಕಾಂಪ್ಲೆಕ್ಸ್  ಮಾಲಕರಾದ ಜಬ್ಬಾರ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರುಗಳಾದ ಮೀನಾಕ್ಷಿ, ಶ್ರೀಮತಿ ಅನುರಾಧ ಎಚ್.ಎನ್, ಹೆಚ್.ಕೆ ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರು. 
ಪುತ್ರರಾದ ಕೃಷ್ಣ ಮೂರ್ತಿ, ವೇಣು ಪ್ರಸಾದ್‌, ಚೈತನ್ಯ, ವರುಣ್ ಕುಮಾರ್ ಸಹಕರಿಸಿದರು.
ರತ್ನಾವತಿ ಕುಶಾಲನಗರ, ಸುರೇಶ್, ರಾಜಮಣಿ ಸುರೇಶ್ ಅರಕಲಗೂಡು ಉಪಸ್ಥಿತರಿದ್ದರು.
ನಾಗರಾಜ್ ಅವರ ತಾಯಿ ಶ್ರೀಮತಿ ಅಮ್ಮಣ್ಣಿಮ್ಮ ಅವರನ್ನು ಗೌರವಿಸಲಾಯಿತು.
ಪತ್ರಕರ್ತ ಹಸೈನಾ‌ರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂಸ್ಥೆಯಲ್ಲಿ ಎಲ್ಲಾ ತರಹದ ಕಾರುಗಳ ಸ್ಪೇ‌ರ್ ಪಾರ್ಟ್ಸ್ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading