Ad Widget

ಕೊಲ್ಲಮೊಗ್ರು : ಅಮಾನತಿನಲ್ಲಿದ್ದ ಗ್ರಾ.ಪಂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ಇಂದು (ಆ.29) ಗ್ರಾಮಸ್ಥರಿಂದ ಗ್ರಾ.ಪಂ ಕಛೇರಿ ಎದುರು ಪ್ರತಿಭಟನೆ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಸಿಬ್ಬಂದಿಯೊಬ್ಬರನ್ನು ಕರ್ತವ್ಯಲೋಪದ ಆಧಾರದಲ್ಲಿ ಮೂರು ತಿಂಗಳುಗಳ ಹಿಂದೆ ಅಮಾನತಿನಲ್ಲಿರಿಸಿದ್ದು, ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ಇಂದು ಆ.29 ರಂದು ಗ್ರಾಮಸ್ಥರು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
“ಅಮಾನತುಗೊಂಡ ಸಿಬ್ಬಂದಿಯ ಮೇಲೆ ಗ್ರಾಮ ಪಂಚಾಯತ್ ನ ಸ್ವತ್ತು ಕಳವು ಆರೋಪವಿದ್ದು, ಅದಲ್ಲದೇ ಗ್ರಾಮ ಸಭೆಯ ನಿರ್ಣಯವನ್ನು ಗಾಳಿಗೆ ತೂರಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಮರುಪರಿಶೀಲನೆ ಮಾಡಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಹಾಗೂ ಆರೋಪಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈ ಪ್ರತಿಭಟನೆಯನ್ನು ನಡೆಸುತ್ತಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

. . . . . . . . .

ಈ ಬಗ್ಗೆ ಗ್ರಾ.ಪಂ.ಸಿಬ್ಬಂದಿ ಸಂತೋಷ್ ಗಡಿಕಲ್ಲು ಅವರನ್ನು ಸಂಪರ್ಕಿಸಿದಾಗ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading