Ad Widget

ಹಳೆಗೇಟು : ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 42ನೇ  ಗಣೇಶೋತ್ಸವ

ಸಾಂಸ್ಕೃತಿಕ ಸಂಘ ಹಳೆಗೇಟು, ಸುಳ್ಯ ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು.
ಅಗಸ್ಟ್ 27ರಂದು ಬೆಳಿಗ್ಗೆ ಸ್ಥಳ ಶುದ್ದಿ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ  ಶಾಂತಿನಗರ ಇವರಿಂದ ಭಜನೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನ ಸುರೇಶ್ ಭಟ್ ನೆರವೇರಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಸಂಘ ಹಳೆಗೇಟು ಅಧ್ಯಕ್ಷರಾದ ಬಾಲಗೋಪಾಲ ಸೇರ್ಕಜೆ, ಉಪಾಧ್ಯಕ್ಷ ಗಣೇಶ್ ಕೊಯಿಂಗೋಡಿ, ಖಜಾಂಜಿ ಚಿತ್ತರಂಜನ್, ಕಾರ್ಯದರ್ಶಿ,  ಶ್ರೀಜೇಶ್ ಉಪಸ್ಥಿತರಿದ್ದರು.
ನಂತರ ವಸಂತ ಕಾಯರ್ತೋಡಿ ಸಾರಥ್ಯದ ಪ್ಯೂಶನ್ ಡಾನ್ಸ್ ತಂಡದ ಚಿಣ್ಣರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ, ರಾತ್ರಿ ಮಹಾಪೂಜೆ ನಡೆಯಿತು.
ಆಗಸ್ಟ್ 28 ರಂದು ಬೆಳಿಗ್ಗೆ 8:00 ಗಂಟೆಗೆ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ 6:00 ರಿಂದ ಜಯನಗರ ಗಜಾನನ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 7:00 ರಿಂದ ಮಿಲೇನಿಯಂ ಆರ್ಕೆಸ್ಟ್ರಾ ತಲಚೇರಿ ಕೇರಳ ಇವರಿಂದ ಭಕ್ತಿ ಹಾಗೂ ಚಿತ್ರಗೀತೆಗಳ ಸಂಗಮ ನೆರವೇರಲಿದೆ.
ರಾತ್ರಿ ಗಂಟೆ 10:00ಕ್ಕೆ ಮಹಾಪೂಜೆ ನಡೆಯಲಿದೆ.
ಆ.29 ರಂದು ಬೆಳಿಗ್ಗೆ ಗಂಟೆ 8:00ಕ್ಕೆ ಪೂಜೆ, ಮಧ್ಯಾಹ್ನ ಮಹಾಪೂಜೆ, ನಂತರ ಸಾರ್ವಜನಿಕ ಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5:00 ರಿಂದ ವೈಭವದ ಶೋಭಯಾತ್ರೆಯೂ ಹಳೆಗೇಟಿನಿಂದ ಹೊರಟು,  ಶ್ರೀರಾಮ್ ಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್ ಜೆ.ಸಿ ರಸ್ತೆ, ವಾಪಸ್ಸು ಮಿಲಿಟರಿ ಗ್ರೌಂಡ್ ನಂತರ ಬ್ರಹ್ಮರಗಯದ ಬಳಿ ಜಲಸ್ತಂಭನಗೊಳ್ಳಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading