Ad Widget

ಹರಿಹರ ಪಳ್ಳತ್ತಡ್ಕ : 16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಳ್ಳತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಸಹಭಾಗಿತ್ವದೊಂದಿಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ “16ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ”ಕ್ಕೆ ಆ.26 ರಂದು ಬೆಳಿಗ್ಗೆ 8:50ಕ್ಕೆ ‘ಶ್ರೀ ಗೌರಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೌರಿ ಪೂಜೆ’ ಯೊಂದಿಗೆ ಚಾಲನೆ ದೊರೆತಿದ್ದು, ನಂತರ ಸಂಜೆ 6:00 ಗಂಟೆಯಿಂದ ಶ್ರೀ ದುರ್ಗಾ ಭಜನಾ ಮಂಡಳಿ ಬಾಳುಗೋಡು ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಕಾರ್ಯಕ್ರಮ ನಡೆದು ನಂತರ ರಾತ್ರಿ 8:00 ಗಂಟೆಯಿಂದ ಶ್ರೀ ಗೌರಿ ದೇವಿಗೆ ಮಹಾಪೂಜೆ ನಡೆಯಿತು.
ಇಂದು ಆ.27 ರಂದು ಬೆಳಿಗ್ಗೆ 9:50ಕ್ಕೆ ‘ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಣಪತಿ ಪೂಜೆ’, ವಿದ್ಯಾಗಣಪತಿ ಹವನ ನಡೆದು ಮದ್ಯಾಹ್ನ 12:30ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಇನ್ನು ಸಂಜೆ 5:00 ಗಂಟೆಯಿಂದ ಶ್ರೀದೇವಿ ಭಜನಾ ತಂಡ ಹರಿಹರ ಪಳ್ಳತ್ತಡ್ಕ, ಶ್ರೀ ಚಾಮುಂಡೇಶ್ವರಿ ಭಜನಾ ತಂಡ ಹರಿಹರ ಪಳ್ಳತ್ತಡ್ಕ ಹಾಗೂ ಶ್ರೀ ಹರಿಹರೇಶ್ವರ ಭಜನಾ ತಂಡ ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ತಿರುಮಲ ಇವುಗಳ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ನಂತರ ರಾತ್ರಿ 8:00 ಗಂಟೆಗೆ ಮಹಾಪೂಜೆ ನಡೆಯಲಿದೆ.
ಅದೇ ರೀತಿ ಆ.27 ರಂದು ಅಂದರೆ ಇಂದು ಮಧ್ಯಾಹ್ನ 1:00 ಗಂಟೆಯಿಂದ ವಿವಿಧ ರೀತಿಯ ಕ್ರೀಡಾ ಕಾರ್ಯಕ್ರಮಗಳು ನಡೆಯಲಿದ್ದು, ಅಂಗನವಾಡಿ ಮಕ್ಕಳಿಗೆ ಕಪ್ಪೆ ಜಿಗಿತ ಹಾಗೂ ಕಾಳು ಹೆಕ್ಕುವುದು, 1 ರಿಂದ 3ನೇ ತರಗತಿ ಮಕ್ಕಳಿಗೆ ಚಾಕಲೇಟ್ ಜಿಗಿತ ಹಾಗೂ ಬಲೂನ್ ಕಟ್ಟಿ ಓಟ, 4 ರಿಂದ 5ನೇ ತರಗತಿ ಮಕ್ಕಳಿಗೆ ಬಲೂನ್ ಗೆ ನೀರು ತುಂಬಿಸುವುದು ಹಾಗೂ ಗೋಲಿ ಓಟ, 6 ರಿಂದ 7ನೇ ತರಗತಿ ಮಕ್ಕಳಿಗೆ ಬಾಲ್ ಉರುಳಿಸಿ ಗುರಿ ಮುಟ್ಟುವುದು ಹಾಗೂ ಅಳತೆಗೋಲು ಆಟ, 8 ರಿಂದ 10ನೇ ತರಗತಿ ಮಕ್ಕಳಿಗೆ ಕಾಲು ನೋವಿನ ಓಟ ಹಾಗೂ ಗೋಣಿ ಚೀಲ ಓಟ, ಸಾರ್ವಜನಿಕ ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಡಿಕೆ ಒಡೆಯುವುದು, ಸಾರ್ವಜನಿಕ ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗಜಗ್ಗಾಟ ಹಾಗೂ ಲಕ್ಕಿ ಗೇಮ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಆಟಗಳು ನಡೆಯಲಿವೆ.
ಹಾಗೆಯೇ ನಾಳೆ ಅಂದರೆ ಆ.28 ರಂದು ಬೆಳಿಗ್ಗೆ 8:20ಕ್ಕೆ ಶ್ರೀ ಗಣಪತಿ ದೇವರ ಪ್ರಾತಃಕಾಲ ಪೂಜೆ ನಡೆಯಲಿದ್ದು, ತದನಂತರ ಬೆಳಿಗ್ಗೆ 9:05ಕ್ಕೆ ಶ್ರೀ ಗೌರಿ ಮತ್ತು ಗಣೇಶ ದೇವರ ಮೆರವಣಿಗೆ ಹೊರಡಲಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯು ನಾಸಿಕ್ ಬ್ಯಾಂಡ್, ಕುಣಿತ ಭಜನೆ ಹಾಗೂ ಗೊಂಬೆ ಕುಣಿತದೊಂದಿಗೆ ಐನೆಕಿದು, ಕೋಟೆ, ಬಾಳುಗೋಡು ಮಾರ್ಗವಾಗಿ ಹರಿಹರ ಪೇಟೆಗೆ ಬಂದು ಸಂಗಮ ಕ್ಷೇತ್ರದಲ್ಲಿ 5:45ರ ಪ್ರದೋಷ ಕಾಲದಲ್ಲಿ ಶ್ರೀ ಗೌರಿ ಹಾಗೂ ಗಣೇಶ ದೇವರ ಮೂರ್ತಿಗಳನ್ನು ವಿಸರ್ಜನೆ ಮಾಡುವುದರೊಂದಿಗೆ ಶ್ರೀ ಗಣೇಶೋತ್ಸವವು ಸಂಪನ್ನಗೊಳ್ಳಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading