Ad Widget

ಸುಳ್ಯ : ಭೀಮರಾವ್ ವಾಷ್ಠರ್ ಉತ್ಸವ ; ವಾಷ್ಠರ್ ಅವರು ಸಾಹಿತಿಯಾಗಿ ಕವಿಯಾಗಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸುವಂತಾಗಲಿ – ಶಿಶಿಲ


ಸಾಹಿತ್ಯದಲ್ಲಿ ಮುಂದುವರೆದರೇ ಭೀಮರಾವ್ ವಾಷ್ಠರ್ ಉತ್ತಮ ಸಾಹಿತಿಯಾಗುತ್ತಿದ್ದರು. ಇನ್ನೂ ಇತರ ಕ್ಷೇತ್ರಗಳ ಬಿಟ್ಟು ಸಾಹಿತಿಯಾಗಿ ಕವಿಯಾಗಿ ಹೆಚ್ಚು ಸಾಧನೆ ಮಾಡಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸುವಂತಾಗಲಿ ಎಂದು ಹಿರಿಯ ಸಾಹಿತಿ ಪ್ರಭಾಕರ ಪ್ರಭಾಕರ ಶಿಶಿಲ ಹೇಳಿದರು.
ಅವರು ಸುಳ್ಯದಲ್ಲಿ ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ಇದರ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ನಡೆದ ಭೀಮರಾವ್ ವಾಷ್ಠರ್ ಉತ್ಸವದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

. . . . . . . . .

ಕಾರ್ಯಕ್ರಮದ ಸಂಘಟಕ, ಗಾಯಕ ಲಕ್ಷ್ಮಣ್ ಪೆರುಮಾಳ್ ಮಾತನಾಡಿ ವಾಷ್ಠರ್ ಅವರು ಚಂದನ ಸಾಹಿತ್ಯ ವೇದಿಕೆಯ ಮೂಲಕ ನೂರಾರು ಜನರನ್ನು  ಸಾಹಿತ್ಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಬೆಳೆಸಿದ್ದಾರೆ ಎಂದರು.

ಸುಳ್ಯದಲ್ಲಿ ಕಳೆದ 25 ವರ್ಷಗಳಿಂದ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ಬೆಂಗಳೂರಿನಲ್ಲಿ ನೆಲೆಸಲು ತೆರಳುತ್ತಿರುವ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ, ಸಾಹಿತಿ ಹೆಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರನ್ನು ಈ ಸಂದರ್ಭದಲ್ಲಿ ಅಭಿನಂದನೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಜ್ಜಾವರ ಚೈತನ್ಯ ಸೇವಾಶ್ರಮದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸಿದರು ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮತ್ತು ಕರ್ನಾಟಕ ಭಾವೈಕತಾ ಪರಿಷತ್ ಅಧ್ಯಕ್ಷ ಇಕ್ಬಾಲ್ ಬಾಳಿಲ ಸನ್ಮಾನಿತರ ಕುರಿತು ಅಭಿನಂದನಾ ಮಾತುಗಳನ್ಬಾಡಿದರು. ಈ ಸಂದರ್ಭದಲ್ಲಿ ಬೆಳಕು ಟ್ರಸ್ಟ್ ಅಧ್ಯಕ್ಚ ಅಣ್ಣಪ್ಪ ಮೇಟಿ ಗೌಡ, ಹಿರಿಯ ಸಾಹಿತಿಗಳಾದ ವೈಲೇಶ್ ಪಿ ಎಸ್ ಕೊಡಗು, ಹಾ. ಮ. ಸತೀಶ್ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಇದರ ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಖ್ಯಾತ ಕವಾಯತ್ರಿ, ಶಿಕ್ಷಕಿ ಸಂಧ್ಯಾ ಕುಮಾರ್ ಉಬರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . .

ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಯಪ್ರಕಾಶ್ ಕುಕ್ಕೇಟಿ ಮತ್ತಿತರರನ್ನು ಗೌರವಿಸಲಾಯಿತು. 



ಪ್ರಮೀಳಾ ರಾಜ್ ಐವರ್ನಾಡು ಸನ್ಮಾನ ಪತ್ರ ವಾಚಿಸಿದರು. ಗಾಯಕಿ ಪುಷ್ಪಾವತಿ ಡಿ. ಪ್ರಾರ್ಥಿಸಿದರು.ಸಾವಿತ್ರಿ ದೊಡ್ಡಮನೆ ಐವರ್ನಾಡು ಸ್ವಾಗತಿಸಿ, ಪೂರ್ಣಿಮಾ ಪೆರ್ಲಂಪಾಡಿ ವಂದಿಸಿದರು.‌ಅನುರಾಧಾ ಶಿವಪ್ರಕಾಶ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನ ಚುಟುಕು ಕವಿಗೋಷ್ಟಿ , ಸಂಗೀತ ರಸಮಂಜರಿ ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading