Ad Widget

ಗೆಳೆಯರ ಬಳಗ ದೇರಾಜೆ (ರಿ.) ಐವರ್ನಾಡು: ಗಣೇಶ ಚತುರ್ಥಿಯ ಅಂಗವಾಗಿ ವಿವಿಧ ಸ್ಪರ್ಧೆಗಳು

ಗೆಳೆಯರ ಬಳಗ ದೇರಾಜೆ (ರಿ.) ಐವರ್ನಾಡು, ಶ್ರೀ ಪಂಚಲಿಂಗೇಶ್ವರ ಕ್ರಿಕೆಟರ್ಸ್‌ ದೇರಾಜೆ, ಆಡಳಿತ ಮಂಡಳಿ ಪಂಚಲಿಗೇಶ್ವರ ದೇವಸ್ಥಾನ ಐವರ್ನಾಡು ಇದರ ಆಶ್ರಯದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ವಾರ್ಡ್‌ ಮಟ್ಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ಆ.27ರಂದು ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ನಡೆಯಲಿದೆ. ವಾರ್ಡ್‌ ಮಟ್ಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಪುರುಷರಿಗೆ ವಾಲಿಬಾಲ್, ನಿಧಾನವಾಗಿ ಬೈಕ್ ಓಡಿಸುವುದು, ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಸಂಗೀತ ಕುರ್ಚಿ, ಹಿಂಬದಿ ಓಟ, ಬೊಗಸೆಯಲ್ಲಿ ನೀರು ತುಂಬಿಸುವುದು ಸ್ಪರ್ಧೆ ನಡೆಯಲಿದೆ. ಮಕ್ಕಳಿಗೆ ನಿಂಬೆ ಚಮಚ ಹಾಗೂ ಮಡಕೆ ಒಡೆಯುವುದು, 5 ವರ್ಷ ಒಳಗಿನವರಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ ಸ್ಪರ್ಧೆ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading